ಸತೀಶ್ ಜಾರಕಿಹೊಳಿ ಪುತ್ರಿಯ ಗೆಲುವಿನ ಹೊಣೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಗೆಲುವಿನ ಹೊಣೆ ಸತೀಶ್ ಜಾರಕಿಹೊಳಿ ಮೇಲೆ...!

Mar 24, 2024 - 11:11
 41
Google  News Join WhatsApp Join Telegram Live

ಸತೀಶ್ ಜಾರಕಿಹೊಳಿ ಪುತ್ರಿಯ ಗೆಲುವಿನ ಹೊಣೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಗೆಲುವಿನ ಹೊಣೆ ಸತೀಶ್ ಜಾರಕಿಹೊಳಿ ಮೇಲೆ...!

Panchayat Swaraj Samachar News Desk.

ಬೆಳಗಾವಿ: ಲೋಕಸಭೆ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊಣೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೊತ್ತಿದ್ದಾರೆ. ಇನ್ನು ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ‌ಅಭ್ಯರ್ಥಿಯಾಗಿ ಸಚಿವೆ ಲಕ್ಷ್ಮೀ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ ಕಣಕ್ಕೆ ಇಳಿದಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊಣೆಯನ್ನು ಸಚಿವ ಸತೀಶ್ ಜಾರಕಿಹೊಳಿ ಹೊತ್ತಿದ್ದಾರೆ.

ಈ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಗೆಲ್ಲಿಸುವ ಹೊಣೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ಗೆ ಇದೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ಸಚಿವ ಸತೀಶ್ ಜಾರಕಿಹೊಳಿ ಹೆಗಲ ಮೇಲಿದೆ. ಆದರೆ ಸಚಿವರಿಬ್ಬರು ರಾಜಕೀಯವಾಗಿ ಕಿತ್ತಾಡುತ್ತಿದ್ದು, ಮಕ್ಕಳ್ಳನ್ನು ಗೆಲ್ಲಿಸುತ್ತಾ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ ಇದು ಇದು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. 

ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್ಗೆ ಹಿನ್ನಡೆಯಾದರೆ ಚಿಕ್ಕೋಡಿಯಲ್ಲಿ ಒಳ ಏಟು ಬೀಳಲಿದೆ. ಅಥವಾ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿಗೆ ಹಿನ್ನಡೆಯಾದರೆ ಬೆಳಗಾವಿಯಲ್ಲಿ ಒಳೇಟು ಬೀಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಪರಸ್ಪರ ಧ್ವೇಷ ಮರೆತು ಚುನಾವಣಾ ಗೆಲುವಿಗೆ ಶ್ರಮಿಸಬೇಕಿದೆ.

Google News Join Facebook Live 24/7 Help Desk

Tags: