ಮತ್ತೆ ಬ್ಯಾಲೆಟ್ ಪೇಪರ್ ಮತದಾನ ವಾಪಸಾತಿ ಇಲ್ಲ -ಸುಪ್ರೀಂ ಕೋರ್ಟ್

Apr 26, 2024 - 12:11
 24
Google  News Join WhatsApp Join Telegram Live

ಮತ್ತೆ ಬ್ಯಾಲೆಟ್ ಪೇಪರ್ ಮತದಾನ ವಾಪಸಾತಿ ಇಲ್ಲ -ಸುಪ್ರೀಂ ಕೋರ್ಟ್

Panchayat Swaraj Samachar News Desk.

ಚುನಾವಣೆ ನಂತರ ಮತ ಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ-ಪ್ಯಾಟ್ನಲ್ಲಿನ ಮತಗಳನ್ನು ತಾಳೆ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಜಸ್ಟೀಸ್ ಸಂಜೀವ್ ಖನ್ನಾ, ಜಸ್ಟೀಸ್ ದೀಪಾಂಕರ್ ದತ್ತ ನೇತ್ವದ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ. ದೇಶದಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಬೇಕು ಎಂಬ ಎಲ್ಲ ಅರ್ಜಿಗಳನ್ನು ರಿಜೆಕ್ಟ್ ಮಾಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಖನ್ನಾ ಅವರು ತಿಳಿಸಿದ್ದಾರೆ.

EVM-VVPATನ 100% ಹೊಂದಾಣಿಕೆ ಸಾಧ್ಯವಿಲ್ಲ. VVPATನ ಸ್ಲಿಪ್ಗಳು 45 ದಿನಗಳವರೆಗೆ ಸುರಕ್ಷಿತವಾಗಿರುತ್ತದೆ. ಚೀಟಿಗಳನ್ನು ಅಭ್ಯರ್ಥಿಗಳ ಸಹಿಯೊಂದಿಗೆ ಸುರಕ್ಷಿತವಾಗಿ ಇಡಲಾಗುತ್ತದೆ. ಇದಕ್ಕೆ ಅಧಿಕಾರಿಗಳು ಭದ್ರತೆಯನ್ನು ನೀಡಬೇಕು ಎಂದು ಕೋರ್ಟ್ ಹೇಳಿದೆ.

ಅಸೋಶಿಯೇಷನ್ ಫಾರ್ ಡಿಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಯು ಇವಿಎಂಗಳಲ್ಲಿನ ಪಾರದರ್ಶಕ ಗಾಜಿನ ಬದಲು ಅರೆ ಪಾರದರ್ಶಕ ಗಾಜನ್ನು ಅಳವಡಿಸುವ ಆಯೋಗದ 2017ರ ನಿರ್ಧಾರವನ್ನು ಕೈಬಿಡಬೇಕು. ಜೊತೆಗೆ ಮತ ಪತ್ರಗಳ ಮೂಲಕ ಮತ ಚಲಾಯಿಸುವ ಪದ್ಧತಿಯನ್ನೇ ಜಾರಿಗೆ ತರುವಂತೆ ಮನವಿ ಮಾಡಿತ್ತು. ಈ ಎಲ್ಲಾ ಅರ್ಜಿಗಳನ್ನು ಚುನಾವಣಾ ಆಯೋಗ ವಜಾ ಮಾಡಿದೆ.

Google News Join Facebook Live 24/7 Help Desk

Tags: