ಏ.24ರ ಸಂಜೆಯಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ: ಮದ್ಯ ಸಿಗಲ್ಲ, ಬಹಿರಂಗ ಪ್ರಚಾರಕ್ಕೆ ಬ್ರೇಕ್

Apr 23, 2024 - 14:45
 22
Google  News Join WhatsApp Join Telegram Live

ಏ.24ರ ಸಂಜೆಯಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ: ಮದ್ಯ ಸಿಗಲ್ಲ, ಬಹಿರಂಗ ಪ್ರಚಾರಕ್ಕೆ ಬ್ರೇಕ್

Panchayat Swaraj Samachar News Desk.

ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದ (ರಾಜ್ಯದ ಮೊದಲ ಹಂತದ) ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಮತದಾನ ನಡೆಯುವ ಬೆಂಗಳೂರಿನ ಎಂಟೂ ವಿಭಾಗಗಳಲ್ಲಿಯೂ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಿದ್ದೇವೆ. ಐದು ಲೋಕಸಭಾ ಕ್ಷೇತ್ರಗಳು ನಮ್ಮ ವ್ಯಾಪ್ತಿಗೆ ಬರುತ್ತವೆ. ಬೆಂಗಳೂರಿನಲ್ಲಿ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ (ಏ.24)ರ ಸಂಜೆ 6ರಿಂದ ಏ.26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಪೊಲೀಸ್ ಆಯುಕ್ತ ದಯಾನಂದ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ದಯಾನಂದ್, ಯಾವುದೇ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಐದಕ್ಕು ಹೆಚ್ಚು ಜನರು ಒಂದೇ ಕಡೆ ಸೇರುವಂತಿಲ್ಲ. ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನೆಗೂ ಅವಕಾಶ ಇರುವುದಿಲ್ಲ. ಸಂಜೆ 6ರಿಂದ ಏ.26ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧವಿರುತ್ತದೆ. ಮುಕ್ತ, ನಿರ್ಭೀತ, ನಿಷ್ಕಲ್ಮಷ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರದ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನ ಭದ್ರತೆಗೆ ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ಪೊಲೀಸರು, 11 ಸಿಆರ್ಪಿಎಫ್, 14 ಕೆಎಸ್ಆರ್ಪಿ, 40 CAR ತುಕಡಿಯನ್ನು ನಿಯೋಜಿಸಲಾಗುತ್ತದೆ ಎಂದರು.

ಏಪ್ರಿಲ್ 26 ರಂದು ಬೆಳಗ್ಗೆ 7 ರಿಂದ ಮತದಾನ ಪ್ರಾರಂಭವಾಗುತ್ತೆ. ಕೇಲವೇ ದಿನಗಳು ಬಾಕಿ ಇರುವುದಿರಂದ ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಇದೆ. ಹೀಗಾಗಿ ಇದರ ಮೇಲೆ ಹದ್ದಿನ ಕಣ್ಣಿಡಬೇಕಾಗುತ್ತೆ. ಮತದಾನದ ಪ್ರಾಮುಖ್ಯತೆ ಕಾಪಾಡಬೇಕಿದೆ. ಇವತ್ತು ಅದೇ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಸಿದರು.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರ ಪೊಲೀಸರು ಸೇರಿದಂತೆ ವಿವಿಧ ಇಲಾಖೆ ಜೊತೆಗೆ ಸಭೆ ನಡೆಸಲಾಗಿದೆ. 72 ಗಂಟೆ ಹೇಗೆ ಆ್ಯಕ್ಟಿವ್ ಆಗಿರಬೇಕು ಎಂದು ಚರ್ಚೆ ನಡೆಸಲಾಗಿದೆ. ಬ್ಯಾಂಕ್ ಮಾಹಿತಿ ಆಧರದ ಮೇಲು ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗಿದೆ. ಸಂಶಯಾಸ್ಪದ ವಸ್ತುಗಳು ಕಂಡು ಬಂದರೆ ಕಣ್ಣಿಡುತ್ತೇವೆ. 1 ಕೋಟಿ 20 ಸಾವಿರದಷ್ಟು ಮತದಾರರಿದ್ದಾರೆ. 64 ಕೋಟಿ 87 ಲಕ್ಷ ಇದುವರೆಗೆ ಸೀಜ್ ಆಗಿದೆ. ಇದೆಲ್ಲವನ್ನು ಐಟಿ ಇಲಾಖೆಗೆ ಮಾಹಿತಿ ಕೊಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 5 ಲೋಕಸಭಾ ಕ್ಷೇತ್ರಗಳಿವೆ ಎಂದರು.

ಸೂಕ್ಷ್ಮ ಮತಗಟ್ಟೆ ಸಂಖ್ಯೆ – 1737, ಸಾಮಾನ್ಯ ಮತಗಟ್ಟೆ ಸಂಖ್ಯೆ – 6351, ಒಟ್ಟು ಮತಗಟ್ಟೆ – 8088, ಒಟ್ಟು ಮತಗಟ್ಟೆ ಕೇಂದ್ರ – 2564, ಸೆಕ್ಟರ್ ಮೊಬೈಲ್ – 416, ಸೂಪರ್ ವೈಸರಿ ಮೊಬೈಲ್ – 118, ಸಬ್ ಡಿವಿಷನ್ ಮೊಬೈಲ್ – 5 ಮತಗಟ್ಟೆಗಳಿವೆ ಎಂದು ತಿಳಿಸಿದರು.

Google News Join Facebook Live 24/7 Help Desk

Tags: