ಅಂಜುಮನ್ ಕಾಲೇಜು ಕೊಠಡಿಗೆ ನೇಹಾ ಹೆಸರು; ಧಾರವಾಡದಲ್ಲಿ ಸೋಮವಾರ ಅರ್ಧದಿನ ವ್ಯಾಪಾರ ಬಂದ್

Apr 21, 2024 - 21:23
 20
Google  News Join WhatsApp Join Telegram Live

ಅಂಜುಮನ್ ಕಾಲೇಜು ಕೊಠಡಿಗೆ ನೇಹಾ ಹೆಸರು; ಧಾರವಾಡದಲ್ಲಿ ಸೋಮವಾರ ಅರ್ಧದಿನ ವ್ಯಾಪಾರ ಬಂದ್

Panchayat Swaraj Samachar News Desk.

ಧಾರವಾಡ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಧಾರವಾಡದ ಅಂಜುಮನ್ ಸಂಸ್ಥೆ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಧಾರವಾಡದ ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹೆಸರಿಡಲು ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ನೇಹಾ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಒಬ್ಬ ವಿದ್ಯಾರ್ಥಿನಿಯ ಹತ್ಯೆಯಾಗಿದೆ. ಅವಳ ನೆನಪಿಗಾಗಿ ನಾವು ನಮ್ಮ ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹಿರೇಮಠ ಅವರ ಹೆಸರಿಡಲು ತೀರ್ಮಾನಿಸಿದ್ದೇವೆ. ಅದನ್ನು ಅವರ ತಂದೆ-ತಾಯಿಯಿಂದಲೇ ಉದ್ಘಾಟನೆ ಮಾಡಿಸುತ್ತೇವೆ ಎಂದಿದ್ದಾರೆ.

ನೇಹಾ ಹತ್ಯೆ ಪ್ರಕರಣ ಖಂಡಿಸಿ ನಾಳೆ (ಏ.22) ಧಾರವಾಡದಲ್ಲಿ ಅಂಜುಮನ್ ಕಾಲೇಜದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ ಮುಸ್ಲಿಂ ವ್ಯಾಪಾರಿಗಳು ತಮ್ಮ ವ್ಯಾಪಾರ ಬಂದ್ ಮಾಡಲಿದ್ದು, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವ್ಯಾಪಾರಿಗಳು ಸೋಮವಾರ ಅರ್ಧದಿನ ವ್ಯಾಪಾರ ವಹಿವಾಟು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳೂ ಇದಕ್ಕೆ ಸಾಥ್ ನೀಡಿವೆ ಎಂದು ಹೇಳಿದ್ದಾರೆ.

Google News Join Facebook Live 24/7 Help Desk

Tags: