ಕೈಪಡೆ ಸೇರಿದ ಜೆಡಿಎಸ್ ಕಾರ್ಯಕರ್ತರು

Mar 23, 2024 - 20:43
 570
Google  News Join WhatsApp Join Telegram Live

ಕೈಪಡೆ ಸೇರಿದ ಜೆಡಿಎಸ್ ಕಾರ್ಯಕರ್ತರು

Panchayat Swaraj Samachar News Desk.

ಬೆಳಗಾವಿ: ಖಾನಾಪುರ್ ಶೇನಾಯಿ ಹಾಲ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದರು.

ರಾಜು ಖಾತೆದಾರ್ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗಡಿನಾಡು ರಕ್ಷಣಾ ವೇದಿಕೆ ಖಾನಾಪುರ್ ತಾಲೂಕ ಅಧ್ಯಕ್ಷರು ಇವರ ನೇತೃತ್ವದಲ್ಲಿ ಅಲೀಮ್ ಅಕ್ತರ ನಾಯಕ್ ಎಲ್ಲಪ್ಪ ಹನಗುಂದಿ, ಸುನಿಲ್ ಲೋಳಕರ, ರಫೀಕ್ ವಾರೆಮನಿ ಹಾಗೂ ಖಾನಾಪುರ ತಾಲೂಕಿನ ಪ್ರತಿ ಗ್ರಾಮದ ಜೆಡಿಎಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.

ಇದೇ ಸಂದರ್ಭದಲ್ಲಿ ರಾಜು ಖಾತೆದಾರ ಅವರು ಸುದ್ದಿ ಗಾರರೊಂದಿಗೆ ಮಾತನಾಡಿ ಜೆಡಿಎಸ್ ಭಾರತೀಯ ಜನತಾ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದಾಗಿ ನಾವು ಜಾತ್ಯತೀತ ಸಿದ್ಧಾಂತವನ್ನು ನಂಬಿದ ಕಾರ್ಯಕರ್ತರು ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡು ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ 

ಡಾ ಅಂಜಲಿ ನಿಂಬಾಳ್ಕರ್ ಅವರ ಸಮ್ಮುಖದಲ್ಲಿ ಖಾನಾಪೂರದ ಪ್ರತಿ ಗ್ರಾಮದ ಜೆಡಿಎಸ್ ಕಾರ್ಯಕರ್ತರು ನಮ್ಮ ಜೊತೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಹಾಗೂ ಮುಂಬರುವ ಮೇ 7ರಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಅಭ್ಯರ್ಥಿಯಾದ ಡಾ. ಅಂಜಲಿ ನಿಂಬಾಳ್ಕರ ಅವರನ್ನು ಪ್ರಚಂಡ ಬಹುಮತದಿಂದ ವಿಜಯಶಾಲಿಯಾಗಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹಳಿ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ ರಾಜು ಸೆಟ್ , ಡಾ ಜವಳಿ ಗೌಸ್ ಲಾಲ ಪಟೇಲ್ ,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹದೇವ್ ಕೋಳಿ ,ಮಹಿಳಾ ಅಧ್ಯಕ್ಷ ಗೀತಾ ಅಂಬೇಡ್ಕಟ್ಟಿ , ರಿಯಾಜ್ ಪಾಟೀಲ, ಚಂಬಣ್ಣ ಹೊಸಮನಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: