ಪಂಚ ಗ್ಯಾರಂಟಿಗಳ ಪರವಾಗಿ ನಾವು ಮತ ಕೇಳ್ತಾಯಿದ್ದೇವೆ ಪ್ರಿಯಾಂಕಾ ಜಾರಕಿಹೊಳಿ

Apr 5, 2024 - 15:49
Apr 5, 2024 - 16:03
 73
Google  News Join WhatsApp Join Telegram Live

ಪಂಚ ಗ್ಯಾರಂಟಿಗಳ ಪರವಾಗಿ ನಾವು ಮತ ಕೇಳ್ತಾಯಿದ್ದೇವೆ ಪ್ರಿಯಾಂಕಾ ಜಾರಕಿಹೊಳಿ

Panchayat Swaraj Samachar News Desk.

ಬೆಳಗಾವಿ: ರಾಜ್ಯ ಸರ್ಕಾರ ಚುನಾವಣೆ ಪೂರ್ವ ಜನಗಳಿಗೆ ಆಶ್ವಾಸನೆ ನೀಡಿತು.ಅದೆ ಪ್ರಕಾರ ಇಂದು ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಪಂಚ ಗ್ಯಾರಂಟಿಗಳು ಎಲ್ಲರಿಗೂ ತಲುಪುತ್ತಾ ಇದೆ .

ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದರೆ ಜನಪರ ಕಾರ್ಯಕ್ರಮಗಳ ಜೊತೆಗೆ ಮಹಿಳೆಯರಿಗೆ 1 ಲಕ್ಷ ನೀಡುವ ಗ್ಯಾರಂಟಿ ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧೀಜಿಯವರು ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಯಮಕನಮರಡಿ ಮತಕ್ಷೇತ್ರದ ದೇವಗೇರಿ, ಕಡೋಲಿ, ಗುಂಜಾನಟ್ಟಿ ,ಜಾಫರ್ವಾಡಿ, ಚೆಲುವನಟ್ಟಿ ,ಮೂಳೇನಟ್ಟಿ, ಮನ್ನಕೇರಿ, ಗ್ರಾಮಗಳಲಿ ಪ್ರಚಾರ ಕಾರ್ಯಕ್ರಮವ ಹಮ್ಮಿಕೊಂಡಿದ್ದು ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಯಮಕನಮರಡಿ ಮತಕ್ಷೇತ್ರ ನಮ್ಮ ತಂದೆ ಸತೀಶ್ ಜಾರಕಿಹೊಳಿ ಅವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು ತಮ್ಮ ಕಣ್ಣ ಮುಂದೆ ಇದೆ

ಇನ್ನು ಹೆಚ್ಚಿನ ಅಭಿವೃದ್ಧಿ ಹಾಗೂ ಜನರಿಗೆ ಉದ್ಯೋಗಾವಕಾಶಗಳು ಮತ್ತು ಕೌಶಲ್ಯ ಆಧಾರಿತ ತರಬೇತಿಗಳು ನಾವು ಮಾಡಲಿದ್ದೇವೆ . ಎಂದು ಭರವಸೆ ನೀಡಿದರು.

 ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡುತ್ತಾ ಕೇಂದ್ರ ಸರ್ಕಾರ ಬಡೂರ ಪರ ಇರುವ ಸರ್ಕಾರವಲ್ಲ ಅದು ಶ್ರೀಮಂತರ ಸರಕಾರ ಬೆಲೆ ಏರಿಕೆಯ ಯಿಂದಾಗಿ ಬಡ ಜನತೆ ತತ್ತರಿಸಿ ಹೋಗಿದ್ದಾರೆ.

 ರಾಜ್ಯ ಸರ್ಕಾರ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದು, ಪಂಚ ಗ್ಯಾರಂಟಿಗಳ ಮುಖಾಂತರ ಬಡವರ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಕುರಿತು ಕಾಂಗ್ರೆಸ್ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಸಾಹೇಬ್ ಜೊಲ್ಲೆ ಅವರು ನೇತೃತ್ವದಲ್ಲಿ ಚಿಕ್ಕೋಡಿ ಕ್ಷೇತ್ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಟೀಕಿಸಿದರು.

 ಈ ಸಂದರ್ಭದಲ್ಲಿ ಕಡೂಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಗರ್ ಪಾಟೀಲ, ಗ್ರಾಮ ಪಂಚಾಯತ್ ಸದಸ್ಯರುಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಹಾಗೂ ಮಹಿಳಾ ಸಂಘಗಳ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: