ನಾನು ದ್ವೇಷದ ವಿರುದ್ಧ ಮತ ನೀಡಿದ್ದೇನೆ: ನಟ ಪ್ರಕಾಶ್ ರಾಜ್‌

Apr 26, 2024 - 16:10
 20
Google  News Join WhatsApp Join Telegram Live

ನಾನು ದ್ವೇಷದ ವಿರುದ್ಧ ಮತ ನೀಡಿದ್ದೇನೆ: ನಟ ಪ್ರಕಾಶ್ ರಾಜ್‌

Panchayat Swaraj Samachar News Desk.

ಬೆಂಗಳೂರು ನಗರದ ಮತಗಟ್ಟೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮತದಾನ ಮಾಡಿದರು. ವೋಟ್ ಮಾಡಿದ ಬಳಿಕ ವಿಡಿಯೋ ಮಾಡಿರುವ ಪ್ರಕಾಶ್ ರಾಜ್ ಅವರು ಎಲೆಕ್ಷನ್ ದಿನವೇ ಹೊಸ ಕಿಡಿ ಹೊತ್ತಿಸಿದ್ದಾರೆ.

ಈ ಚುನಾವಣೆ ಬಹಳ ಮುಖ್ಯವಾಗಿದೆ. ನನ್ನ ಹಕ್ಕು ನಾನು ಚಲಾವಣೆ ಮಾಡಿದ್ದೇನೆ. ಸಂಸತ್ತಿನಲ್ಲಿ ನನ್ನ ಧ್ವನಿ ಯಾರಾಗಬೇಕು. ನನ್ನ ಧ್ವನಿಯಾಗಿ ಸಂಸತ್‌ ಅನ್ನ ಯಾರು ಪ್ರತಿನಿಧಿಸಬೇಕು ಅನ್ನೋದನ್ನ ಇವತ್ತು ಆಯ್ಕೆ ಮಾಡಿದ್ದೇನೆ. ಬಹಳ ಮುಖ್ಯವಾಗಿ ಬದಲಾವಣೆಗೆ ನಾನು ಮತ ನೀಡಿದ್ದೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಮತದಾನದ ಬಳಿಕ ವಿಡಿಯೋ ಮಾಡಿರುವ ನಟ ಪ್ರಕಾಶ್ ರಾಜ್ ಅವರು, ನಾನು ಬದಲಾವಣೆಗೆ ಮತ ನೀಡಿದ್ದೇನೆ. ದ್ವೇಷದ ವಿರುದ್ಧ ನಾನು ನನ್ನ ಮತ ನೀಡಿದ್ದೇನೆ. ನನ್ನ ಮತ ಉತ್ತಮ ಜನಪ್ರತಿನಿಧಿಯ ಆಯ್ಕೆಗಾಗಿ. ಸಂಸತ್ತಿನಲ್ಲಿ ನನ್ನ ಪರವಾಗಿ ಧ್ವನಿ ಎತ್ತುವ ಜನಪ್ರತಿನಿಧಿಗಾಗಿ ನಾನು ನನ್ನ ಮತ ಚಲಾಯಿಸಿದ್ದೇನೆ. ನೀವು ತಪ್ಪದೇ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ Xನಲ್ಲಿ ನಟ ಪ್ರಕಾಶ್ ರಾಜ್ ವಿಡಿಯೋ ಹಂಚಿಕೊಂಡಿದ್ದು, ವೈರಲ್ ಆಗಿದೆ. ಇತ್ತೀಚೆಗೆ ನಟ ಪ್ರಕಾಶ್ ರಾಜ್ ಅವರು ಈ ಬಾರಿ 400 ಸೀಟ್ ಗೆಲ್ಲಲು ಪಣತೊಟ್ಟು ಅಬ್ ಕೀ ಬಾರ್ 400 ಪಾರ್ ಅಂತ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. 420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ. ಲೋಕಸಭಾ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇಂದು ಮತ ಚಲಾಯಿಸಿದ ಬಳಿಕ ಬದಲಾವಣೆಗೆ ನಾನು ಮತ ನೀಡಿದ್ದೇನೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.

Google News Join Facebook Live 24/7 Help Desk

Tags: