ಮೋದಿ ಸರ್ಕಾರ ಕೋಟ್ಯಧಿಪತಿಗಳಿಗೆ ಕೊಟ್ಟ ಹಣವನ್ನು ರೈತರಿಗೆ ಹಂಚಲು ಯೋಚಿಸಿದ್ದೇವೆ: ರಾಗಾ

Apr 26, 2024 - 16:03
 20
Google  News Join WhatsApp Join Telegram Live

ಮೋದಿ ಸರ್ಕಾರ ಕೋಟ್ಯಧಿಪತಿಗಳಿಗೆ ಕೊಟ್ಟ ಹಣವನ್ನು ರೈತರಿಗೆ ಹಂಚಲು ಯೋಚಿಸಿದ್ದೇವೆ: ರಾಗಾ

Panchayat Swaraj Samachar News Desk.

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಧಿಪತಿಗಳಿಗೆ ಕೊಟ್ಟಿರುವ ಹಣವನ್ನು ತಂದು ರೈತರಿಗೆ  ಹಂಚಲು ಯೋಚಿಸಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ವಿಜಯಪುರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೈ ಅಭ್ಯರ್ಥಿ ರಾಜು ಅಲಗೂರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ 20 ಮಂದಿ ಶ್ರೀಮಂತರನ್ನ ಮಾತ್ರ ಬೆಳೆಸಿದೆ. ಅದಾನಿ ಅವರಿಗೆ ಭಾರತದ ದೊಡ್ಡ ದೊಡ್ಡ ಯೋಜನೆಗಳನ್ನ ಕೊಟ್ಟಿದ್ದಾರೆ. ಬಡವರಿಗೆ ಏನು ಕೊಟ್ಟಿದ್ದಾರೆ? ಆದ್ರೆ‌ ನಮ್ಮ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಬಡವರಿಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದೆ. ಆದರಿಂದ ಸಾಕಷ್ಟು ಉಪಯೋಗ ಆಗಿದೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಈಗ ಕೋಟ್ಯಧಿಪತಿಗಳನ್ನು ಲಕ್ಷಾಧಿಪತಿಗಳಾಗಿ ಮಾಡಲು ಹೊರಟಿದೆ. ಎಷ್ಟು ಹಣ ಮೋದಿ ಅವರು ಈ ಕೋಟ್ಯಧಿಪತಿಗಳಿಗೆ ಕೊಟ್ಟಿದ್ದಾರೋ ಅದನ್ನ ರೈತರಿಗೆ ಕೊಡಲು ಯೋಚಿಸಿದ್ದೇವೆ. ಈಗಾಗಲೇ ಕರ್ನಾಟಕದಲ್ಲಿ ಮಹಿಳೆಯರಿಗೆ 2,000 ರೂ. ಸಿಗುತ್ತಿದೆ. ಈ ಚುನಾವಣೆಯ ನಂತರ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತೆ. ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರ ಪಟ್ಟಿ ರೆಡಿ ಮಾಡ್ತೀವಿ. ಪ್ರತಿ ಬಡ ಕುಟುಂಬದಿಂದ ಓರ್ವ ಮಹಿಳೆಯನ್ನ ಆಯ್ಕೆ ಮಾಡುತ್ತೇವೆ. ಆ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ಕೊಡ್ತೇವೆ. ಇದರ ಜೊತೆಗೆ ಕರ್ನಾಟಕ ಸರ್ಕಾರ ಮಹಿಳೆಯರಿಗೆ 24 ಸಾವಿರ ರೂ. ಕೊಡುವುದನ್ನು ಮುಂದುವರಿಸುತ್ತದೆ. ಪ್ರತಿ ತಿಂಗಳು 1ನೇ ತಾರೀಕಿನಂದು ತಮ್ಮ ಅಕೌಂಟ್ ಚೆಕ್ ಮಾಡಿದ್ರೆ ಅದರಲ್ಲಿ 10,500 ರೂ. ಇರುತ್ತೆ ಎಂದು ಭರವಸೆ ನೀಡಿದ್ದಾರೆ.

ಬಡವರು ಆರ್ಥಿಕವಾಗಿ ಸಬಲರಾಗುವವರೆಗೂ ಅವರಿಗೆ ಹಣ ಕೊಡುತ್ತೇವೆ. ಮೋದಿಯವರು ಕೋಟ್ಯಾಧೀಶರಿಗೆ ಕೆಲಸ ಕೊಟ್ಟು, ಬಡವರಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರ ವೇತನ ಡಬಲ್ ಮಾಡುತ್ತೇವೆ. ಅಗ್ನಿವೀರ್ ಯೋಜನೆಯನ್ನು ರದ್ದುಮಾಡುತ್ತೇವೆ ಎಂದು ಗ್ಯಾರಂಟಿ ನೀಡಿದ್ದಾರೆ.

Google News Join Facebook Live 24/7 Help Desk

Tags: