ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ನಿಧನ

Apr 26, 2024 - 16:00
 20
Google  News Join WhatsApp Join Telegram Live

ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ನಿಧನ

Panchayat Swaraj Samachar News Desk.

ಚಿತ್ರದುರ್ಗ: ಚಳ್ಳಕೆರೆಯ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಲೋ ಬಿಪಿಯಿಂದ ಮೃತಪಟ್ಟಿದ್ದಾರೆ.

ಚಳ್ಳಕೆರೆ ಪಟ್ಟಣದ ವಿಠಲ ನಗರದ ಯಶೋಧಮ್ಮ (55) ಮೃತ ಮಹಿಳಾ ಸಿಬ್ಬಂದಿ. ಯಶೋದಮ್ಮ ಅವರು ಕರ್ತವ್ಯದ ವೇಳೆ ಮತಗಟ್ಟೆಯಲ್ಲಿ ಲೋ ಬಿಪಿಯಿಂದಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಚಳ್ಳಕೆರೆ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Google News Join Facebook Live 24/7 Help Desk

Tags: