ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

Apr 5, 2024 - 16:21
 83
Google  News Join WhatsApp Join Telegram Live

ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

Panchayat Swaraj Samachar News Desk.

ನವದೆಹಲಿ: ಪ್ರತಿ ಚುನಾವಣೆಯ ಸಮಯದಲ್ಲಿ ಸದ್ದು ಮಾಡುವ ಇವಿಎಂ ಬಗ್ಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ.

ಇವಿಎಂ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್‌ ಇವಿಎಂ ಮೂಲಕ ಮತದಾನ ಮಾಡಿದರೂ ಸ್ಲಿಪ್‌ ಮತದಾರನ ಕೈಗೆ ನೀಡಬೇಕೆಂದು ಹೇಳಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ನಂಬಿಕೆಯನ್ನು ಮರುಸ್ಥಾಪಿಸಲು ನಾವು ಭರವಸೆ ನೀಡುತ್ತೇವೆ. ಇವಿಎಂ ಮೂಲಕ ಮುದ್ರಣವಾದ ಪೇಪರ್‌ ಅನ್ನು ಮತದಾರ ಕೈಯಲ್ಲಿ ಹಿಡಿದು ಪರಿಶೀಲಿಸಿ ನಂತರ ಅದನ್ನು  ಬಾಕ್ಸ್‌ಗೆ ಹಾಕುವಂತೆ ಮಾಡುತ್ತೇವೆ. ಇವಿಎಂನಲ್ಲಿ ಬಿದ್ದ ಮತಗಳಿಗೂ ಮತ್ತು ವಿವಿಪ್ಯಾಟ್‌ ಮೂಲಕ ಬಿದ್ದ ಬ್ಯಾಲೆಟ್‌ ಪೇಪರ್‌ಗೆ ತಾಳೆಯಾಗಬೇಕು. ಈ ವ್ಯವಸ್ಥೆ ಜಾರಿಯಾಗಲು ಚುನಾವಣಾ ಕಾನೂನಿಗೆ ತಿದ್ದುಪಡಿ ಮಾಡುತ್ತೇವೆ ಎಂದು ಭರವಸೆ ನೀಡಿದೆ.

ಮತದಾರ ಕೈಯಲ್ಲಿ ಬ್ಯಾಲೆಟ್‌ ಪೇಪರ್‌ ಪರೀಕ್ಷಿಸಲು ಅವಕಾಶ ಸಿಗುವುದರಿಂದ ಚುನಾವಣಾ ಪ್ರಕ್ರಿಯೆಯ ಮೇಲೆ ನಂಬಿಕೆ ಹೆಚ್ಚಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.

Google News Join Facebook Live 24/7 Help Desk

Tags: