ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣೆ ನೀತಿ ಸಂಹಿತಿ ಉಲ್ಲಂಘನೆ ಮಾಡಿದ್ದಾರೆಂದು ಆರೋಫಿಸಿ ಬಿಜೆಪಿಯಿಂದ ಚುನಾವಣೆ ಅಧಿಕಾರಿಗಳಿಗೆ ದೂರು

Apr 17, 2024 - 11:48
 20
Google  News Join WhatsApp Join Telegram Live

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣೆ ನೀತಿ ಸಂಹಿತಿ ಉಲ್ಲಂಘನೆ ಮಾಡಿದ್ದಾರೆಂದು ಆರೋಫಿಸಿ ಬಿಜೆಪಿಯಿಂದ ಚುನಾವಣೆ ಅಧಿಕಾರಿಗಳಿಗೆ ದೂರು

Panchayat Swaraj Samachar News Desk.

ಬೆಳಗಾವಿ : ಕಾಂಗ್ರೆಸ್ ಪಕ್ಷದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ‌ ಮಹಿಳಾ‌ ಮತ್ತು ಮಕ್ಕಳ ಇಲಾಖೆಯ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಲೊಕಸಭಾ ಕ್ಷೇತ್ರದಲ್ಲಿ ತಮ್ಮ ಮಂತ್ರಿ ಸ್ಥಾನದ ಅಧಿಕಾರ ಬಳಸಿಕೊಂಡು ಕ್ಷೇತ್ರದಲ್ಲಿ ಪದೆ ಪದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಾ ನಿಷ್ಪಕ್ಷಪಾತ ಚುನಾವಣೆಗೆ ದಕ್ಕೆ ತರುತ್ತಿದ್ದಾರೆ ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕೆಂದು ಬಿಜೆಪಿ ಚುನಾವಣಾ ಅಧಿಕಾರಿಗಳಿಗೆ ಮಂಗಳವಾರ ದೂರು ನೀಡಿದ್ದಾರೆ. 

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಬೆಳಗಾವಿ ಲೊಕಸಭಾ ಕ್ಷೇತ್ರದಲ್ಲಿ ಪಕ್ಷಪಾತ, ಗೂಂಡಾ ವರ್ತನೆ, ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡ ಇಲ್ಲಸಲ್ಲದ ಆರೋಪ ಮಾಡುವದು, ಅಧಿಕಾರ ದುರಪಯೋಗ, ಸರ್ಕಾರಿ ನೌಕರದಾರರನ್ನು ಪಕ್ಷದ ಕೆಲಸಕ್ಕೆ ಬೆಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದ್ದಾರೆ.

    ಚುನಾವಣೆಯ ನೀತಿಸಂಹಿತೆ ಪ್ರಾರಂಭವಾದನಂತರ ಸರ್ಕಾರಿ‌ ಅಂಗನವಾಡಿ ಕಾರ್ಯಕರ್ತರಮ್ನ ಮನೆಗೆ ಕರೆಯಿಸಿ ಸಭೆ ನಡೆಸುವದರೊಂದಿಗೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವಂತೆ ತಮ್ಮ ಅಧಿಕಾರವನ್ನು ದುರಪಯೋಗ ಪಡೆಸಿಕೊಂಡು ನೀತಿಸಂಹಿತೆ ಉಲ್ಲಂಘಿಸದ್ದರ ಬಗ್ಗೆ ದೂರು ದಾಖಲವಾದರು ಯಾವುದೆ ಕ್ರಮ ವಾಗುತ್ತಿಲ್ಲ.

  ಸಂಸದೆ ಮಂಗಲ ಸುರೇಶ ಅಂಗಡಿಯವರು ಏನು ಗೊತ್ತಿಲ್ಲದ ರಾಜಕಾರಣಿ ಬೆರೆಯವರು ಬರೆದುಕೊಟ್ಟ ಭಾಷಣ ಓದುವವರು ಎಂದು ಮೊದಲಿಸಿದ್ದಾರೆ.

  ಲೊಕಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ನರೆಗಾ ಕೂಲಿ ಕಾರ್ಮಿಕರನ್ನು ಸಂಘಟಿಸಿ ಪ್ರತಿ ಗ್ರಾಮದಲ್ಲಿ ನರೆಗಾ ಕೂಲಿ ಕಾರ್ಮಿಕರ ಸಭೆ ನಡೆಸುತಿದ್ದಾರೆ.

ಬಿಜೆಪಿ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರ ತೇಜೋವಧೆ ನಡೆಸುತಿದ್ದಾರೆ.

ಸಚಿವರಿಗೆ ಅನ್ಯಾಯವಾದರೆ ಚುನಾವಣಾ ಆಯೊಗಕ್ಕೆ , ಪೊಲಿಸ್ ಇಲಾಖೆಗೆ ದೂರು ನೀಡದೆ ಕೆಲ ಬಾಡಿಗೆ ಗೂಂಡಾಗಳ ಮೂಲಕ ಮುಗ್ದ ಜನತೆಯನ್ನು ಕರೆದುಕೊಂಡು ಚುನಾವಣಾ ನೀತಿ ಸಂಹಿತೆ ಇದ್ದಾಗಲೂ ಅಕ್ರಮವಾಗಿ ಬೆಳಗಾವಿ ಲೊಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕರಾದ ಮಾಜಿ ಶಾಸಕ ಸಂಜಯ ಪಾಟೀಲರ ಮನೆ ಮುಂದೆ ತಡ ರಾತ್ರಿಯವರೆಗೆ ಅನಧಿಕೃತವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಗೆ ಜಿವ ಬೆದರಿಕೆ ಹಾಕಿ ಅವರು ಸತ್ತಿದ್ದಾರೆ ಎಂದು ಹೊಯಕೊ ಬಡಕೊ ಮಾಡಿದ್ದು ಅವರ ಆಪ್ತರ ಮೇಲೆ‌ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರ ಹಿಂದಿನ‌ ಉದ್ದೇಶವೆನೆಂದರೆ, ಅವರು ಚನಾವಣೆಯ ಪ್ರಚಾರಕ್ಕೆ ಬರದಂತೆ ಅವರ ಮೇಲೆ‌ ಬಾಡಿಗೆ ಗೂಂಡಾಗಳನ್ನು ಛೂ ಬಿಟ್ಟು ಶಾಂತಿಯುತ ಚುನಾವಣೆಗೆ ಬಂಗತರುತಿದ್ದಾರೆ. ಈ ಕುರಿತು ಶಾಹಪೂರ (ಬೆಳಗಾವಿ) ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು ಮಂತ್ರಿಗಳ ಹಾಗೂ ಸರ್ಕಾರದ ಪ್ರಭಾವ ಬಿರಿ ದೂರಿನಲ್ಲಿ ಸಚಿವರ ಹೆಸರು ಕೈ ಬಿಟ್ಟಿದ್ದಾರೆ. ಈ ಬಗ್ಗೆ ಸಚಿವರ ಹೆಸರನ್ನು ಈ ದೂರಿನಲ್ಲಿ ದಾಖಲಿಸಿಕೊಂಡು ತಕ್ಷಣ ಆ ಬಾಡಿಗೆ ಗೂಂಡಾಗಳನ್ನು ಬಂಧಿಸಿ ಶಾಂತಿಯುತ ಚುನಾವಣೆಗೆ ಸಹಕರಿಸಬೇಕು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚುನಾವಣಾ ಪ್ರಚಾರ ಬಿಟ್ಟು ಜಾತಿ/ ಸಮಾಜವನ್ನು ಚುನಾವಣೆಗೆ ಜೋಡಿಸುವದರೊಂದಿಗೆ ಮಹಿಳೆಯರು ಬಿಜೆಪಿ ವಿರುದ್ದ ಹೋರಾಟ ನಡೆಸುವಂತೆ ಸಮಾಜದಲ್ಲಿ ಜಾತಿಯ ಸ್ವಸ್ಥಕ್ಕೆ ದಕ್ಕೆ ತಂದಿದ್ದು ಚುನಾವಣಾ ನೀತಿ ಸಂಹಿತೆಯ ಅರಿವು ಇಲ್ಲದಂತೆ ಪ್ರಜಾಪ್ರಭುತ್ವಕ್ಕೆ ಕಂಟಕ ತಂದು, ವೈಯಕ್ತಿಕ ಕಾನೂನುಗಳನ್ನೆ ರೂಪಿಸಿಕೊಂಡಂತೆ ವರ್ತಿಸುತಿದ್ದು,ಇವರ ಮೇಲೆ‌ ತಕ್ಷಣ ಕ್ರಮ ಕೈಗೊಂಡು ಮಂತ್ರಿ ಸ್ಥಾನದಿಂದ‌ ವಜಾಗೊಳಿಸಿಬೇಕೆಂದು ಬಿಜೆಪಿ ಅಗ್ರಹಿಸುತ್ತದೆ ಎಂದರು.

ಒಂದು ವೇಳೆ ಈ ವಿಷಯಕ್ಕೆ ಕ್ರಮ ಕೈಗೊಳ್ಳದೆ ಹೊದರೆ ಬಿಜೆಪಿ ರಾಜ್ಯಾಧ್ಯಂತ ಬಿದಿಗಿಳಿದು ಉಗ್ರ ಹೋರಾಟ ನಡೆಸಬೇಕಾದಿತು ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ ಅಕ್ರೋಶವ್ಯಕ್ತಪಡಿಸಿದ್ದಾರೆ.

 ಬಿಜೆಪಿ ನಾಯಕರಿಗೆ ಮತ್ತು ಅವರ ಮನೆಗಳಿಗೆ ಸೂಕ್ತ ರಕ್ಷಣೆ ನಿಡಬೇಕು. ಅವರಿಗೆ ತೊಂದರೆಯಾದಲ್ಲಿ ಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರವೆ ಹೊಣೆಯಾಗಲಿದೆ. ನ್ಯಾಯಸಮ್ಮತ ಚುನಾವಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದೂರಿನ‌ಪ್ರತಿಗಳನ್ನು ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು‌ ನಿರ್ವಚನಾ ಭವನ ಶೆಷಾದ್ರಿಪುರಂ‌ ಬೆಂಗಳೂರು, ಗೌರಾನ್ವಿತ ರಾಜ್ಯಪಾಲರು ಕರ್ನಾಟಕ ಸರ್ಕಾರ ಬೆಂಗಳೂರು. ಕೇಂದ್ರ ಚುನಾವಣಾಧಿಕಾರಿಗಳು ನಿರ್ವಾಚನ ಭವನ ನವದೆಹಲಿ ಹಾಗೂ ಬೆಳಗಾವಿ ಪೋಲಿಸ್ ಕಮಿಷನರ್ ಅವರಿಗೆ ದೂರು ಪ್ರತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಮಾಜಿ ವಕ್ತಾರರಾದ ಎಮ್.ಬಿ.ಝೀರಲಿ ಅಧಿಕಾರಿಗಳ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿ ಚುನಾವಣೆಯ ಸಂದರ್ಭದಲ್ಲಿ ಪಕ್ಷಪಾತ ಬಿಟ್ಟು ಸರ್ವ ಪಕ್ಷದ ಪದಾಧಿಕಾರಿಗಳನ್ನು ಸಮಾನತೆಯಿಂದ ನೋಡ ಬೇಕು. ಚುನಾವಣಾ ಅಧಿಕಾರಿಗಳಿಗೆ ನಮ್ಮ ಮಾಹಿತಿ ತಿಳಿಸಿ. ಜಿಲ್ಲಾಧಿಕಾರಿಗಳ ಸಿಬ್ಬಂದಿಗೆ ಸರಿಯಾದ ತಿಳುವಳಿಕೆ ನೀಡಿ ಚುನಾವಣೆಯ ಕರ್ತವ್ಯದ ಬಗ್ಗೆ ತಿಳುವಳಿಕೆ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ರಾಜಶೇಖರ ಡೋಣಿ, ಈರಯ್ಯ ಖೊತ, ಮಲ್ಲಿಕಾರ್ಜುನ ಮಾದಮ್ಮನವರ,ರಾಜ್ಯ ಯುವ ಮೊರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ರಾಜ್ಯ ಮಾಧ್ಯಮ ಸಮಿತಿ‌ ಸದಸ್ಯ ಎಫ್.ಎಸ್.ಸಿದ್ದನಗೌಡರ, ಸಂತೋಷ ದೇಶನೂರ, ಶಿವಾನಂದ‌ ಹಣಮಸಾಗರ ಮುಂತಾದವರು ಇದ್ದರು

Google News Join Facebook Live 24/7 Help Desk

Tags: