ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ: ಚಕ್ರವರ್ತಿ ಸೂಲಿಬೆಲೆ

Apr 7, 2024 - 14:30
 3
Google  News Join WhatsApp Join Telegram View ePaper

ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ: ಚಕ್ರವರ್ತಿ ಸೂಲಿಬೆಲೆ

Panchayat Swaraj Samachar News Desk.

ಸವದತ್ತಿ: ದೇಶಾದ್ಯಂತ ಮೋದಿ ಅಲೆ ಮೊಳಗುತ್ತಿದೆ. ವಿರೋಧ ಪಕ್ಷದವರ ಮಾತಿನಲ್ಲಿಯೂ ಮೋದಿಯವರ ಹೆಸರು ಕೇಳಿ ಬರುತ್ತಿರುವುದರಿಂದ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುವುದು ಖಚಿತ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ನಮೋ ಭಾರತ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶ ಮಾತ್ರ ನಾವು ಹೊಂದಿದ್ದು, ಯಾವುದೇ ಆಸೆ ಆಮಿಷಗಳಿಗೆ ನಮೋ ಬ್ರಿಗೇಡ್ ಯುವಕರು ಕೈಚಾಚುವವರಲ್ಲ ಎಂದು ಹೇಳಿದರು.

 ಒಂದೂ ರಜೆ ಪಡೆಯದ ಪ್ರಧಾನ ಸೇವಕ ಮೋದಿ: ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿಯವರು ಸುಮ್ಮನೆ ಕುಳಿತಿಲ್ಲ. ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಹಿಂದೆ ಆಗಲಾರದಂತಹ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಮೋದಿಯವರಿಗೆ ಕೊಟ್ಟ ನಮ್ಮ ಒಂದು ಮತ ಯಾವತ್ತೂ ವಿಫಲವಾಗಿಲ್ಲ. ಹತ್ತು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಜಗತ್ತಿಗೆ ಮಾದರಿಯಾಗುವಂತಹ ಹಲವಾರು ಕೆಲಸಗಳಾಗಿವೆ ಎಂದರು.

 ಸವದತ್ತಿಯ ನಮೋ ಬ್ರಿಗೇಡ್ ಸಂಘಟನೆಯಿಂದ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿರೂಪಾಕ್ಷ ಮಾಮನಿ, ರತ್ನಾ ಮಾಮನಿ, ಈರಣ್ಣ ಚಂದರಗಿ, ಜಗದೀಶ ಕೌಜಗೇರಿ, ಸೌರವ ಚೋಪ್ರಾ, ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಶೇಖರ ಗೋಕಾವಿ, ರಾಜು ನಿಡವಣಿ, ಸಂಜೀವ ನವಲಗುಂದ, ಡಾ.ನಯನಾ ಬಸ್ಮೆ, ಬಿ.ವಿ. ಮಲಗೌಡರ, ಶಂಕರ ವಣ್ಣೂರ, ರಾಜು ಸಾಲಿಮಠ, ಸಂಗಮೇಶ ಕಳ್ಳಿಮಠ, ಪ್ರಶಾಂತ ಬರಗಿ, ಕಲ್ಮೇಶ ನೀಲಿಶೆಟ್ಟಿ, ಗಿರೀಶ ಬೀಳಗಿ, ವೀರು ಗುಡೆನ್ನವರ ಹಾಗೂ ನಮೋ ಬ್ರಿಗೇಡ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: