ಹಳದಿ ಪಡೆಯನ್ನು ಹಳ್ಳಕ್ಕೆ ಕೆಡುವಿದ ಆರ್.ಸಿ.ಬಿ, ಈಗ ಶುರುವಾದ ಹೊಸ ಅಧ್ಯಾಯ

May 19, 2024 - 00:33
May 19, 2024 - 00:39
 49
Google  News Join WhatsApp Join Telegram View ePaper

ಹಳದಿ ಪಡೆಯನ್ನು ಹಳ್ಳಕ್ಕೆ ಕೆಡುವಿದ ಆರ್.ಸಿ.ಬಿ, ಈಗ ಶುರುವಾದ ಹೊಸ ಅಧ್ಯಾಯ

Panchayat Swaraj Samachar News Desk.

ಐಪಿಎಲ್ 2024 ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದೆ.

ಈ ಜಯದೊಂದಿಗೆ ಫಾಫ್ ಡುಪ್ಲೆಸಿಸ್ ತಂಡವು ಈ ಸೀಸನ್ನಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ತಲುಪಿದೆ. ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅರ್ಹತೆ ಪಡೆದಿದ್ದವು. ಅದೇ ಹೊತ್ತಿಗೆ ಈ ಸೋಲಿನೊಂದಿಗೆ ಸಿಎಸ್ಕೆ ಪಯಣ ಅಂತ್ಯಗೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.

Google News Join Facebook Live 24/7 Help Desk

Tags: