ಯದುವಂಶದ ವಿಚಾರದಲ್ಲಿ ಮೈಸೂರು ಭಾಗ ಭಾವನಾತ್ಮಕ; ಯದುವೀರ್ ವಿರುದ್ಧ ತುಟಿ ಬಿಚ್ಚದಿರಿ: 'ಕೈ' ನಾಯಕರಿಗೆ ಸಿಎಂ ಸೂಚನೆ!

ಯದುವಂಶದ ವಿಚಾರದಲ್ಲಿ ಮೈಸೂರು ಭಾಗ ಭಾವನಾತ್ಮಕವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜವಂಶಸ್ಥ ಯದುವೀರ್ ವಿರುದ್ಧ ತುಟಿ ಬಿಚ್ಚದಂತೆ ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

Mar 16, 2024 - 14:39
 54
Google  News Join WhatsApp Join Telegram Live

ಯದುವಂಶದ ವಿಚಾರದಲ್ಲಿ ಮೈಸೂರು ಭಾಗ ಭಾವನಾತ್ಮಕ; ಯದುವೀರ್ ವಿರುದ್ಧ ತುಟಿ ಬಿಚ್ಚದಿರಿ: 'ಕೈ' ನಾಯಕರಿಗೆ ಸಿಎಂ ಸೂಚನೆ!
ಸಂಗ್ರಹ ಚಿತ್ರ

Panchayat Swaraj Samachar News Desk.

ಮೈಸೂರು: ಯದುವಂಶದ ವಿಚಾರದಲ್ಲಿ ಮೈಸೂರು ಭಾಗ ಭಾವನಾತ್ಮಕವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜವಂಶಸ್ಥ ಯದುವೀರ್ ವಿರುದ್ಧ ತುಟಿ ಬಿಚ್ಚದಂತೆ ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ, ಬಿಜೆಪಿ ವಿರುದ್ಧ ಮಾತಾಡಿ. ಆದರೆ, ಯದುವೀರ್‌ರನ್ನು ಯಾವುದೇ ಕಾರಣಕ್ಕೂ ಟೀಕಿಸಲು ಮುಂದಾಗಬೇಡಿ. ಯದುವಂಶದ ವಿಚಾರ ಮೈಸೂರು ಭಾಗದಲ್ಲಿ ಭಾವನಾತ್ಮಕವಾಗಿದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ನಮ್ಮ ಮಾತೇ ನಮಗೆ ಮುಳ್ಳಾಗುತ್ತೆ. ಸರ್ಕಾರದ ಗ್ಯಾರಂಟಿಗಳು, ಬಿಜೆಪಿ ಸುಳ್ಳುಗಳ ಮೇಲೆ ಪ್ರಚಾರ ಮಾಡಿ. ಯದುವೀರ್ ವಿಚಾರಕ್ಕೆ ಅಪ್ಪಿತಪ್ಪಿಯೂ ಹೋಗಬೇಡಿ. ಯದುವೀರ್ ವಿಚಾರದಲ್ಲಿ ಟೀಕೆ ಮಾಡಿದರೆ ಅದರ ಎಫೆಕ್ಟ್ ಮೈಸೂರು ಮಾತ್ರವಲ್ಲ ಬೇರೆ ಕ್ಷೇತ್ರದ ಮೇಲೂ ಆಗುತ್ತೆ ಎಚ್ಚರ ಇರಲಿ ಎಂದು ಕಿವಿಮಾತು ಹೇಳಿದ್ದಾರೆಂದು ತಿಳಿದುಬಂದಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಈ ಬಾರಿ ಬಿಜೆಪಿ ಯದುವೀರ್ ಒಡೆಯರ್ ಅವರಿಗೆ ನೀಡಿದ್ದು, ಎರಡು ಬಾರಿ ಜಯಗಳಿಸಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಟಿಕೆಟ್ ಕೈತಪ್ಪಿದೆ.

ಯದುವೀರ್ ವಿರುದ್ಧ ಮೈಸೂರಿಗೆ ಯಾರನ್ನು ಅಭ್ಯರ್ಥಿ ಮಾಡುವುದು ಎಂಬ ಗೊಂದಲ ಕಾಂಗ್ರೆಸ್‌ನಲ್ಲಿ ಮೂಡಿತ್ತು. ಆಧರೆ, ಟಿಕೆಟ್ ಅಂತಿಮಗೊಳಿಸಲು ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿಗೆ ಭೇಟಿ ನೀಡಿದ್ದು, ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೈಸೂರಿನಿಂದ ಲಕ್ಷ್ಮಣ್‌ ಹಾಗೂ ಚಾ.ನಗರದಿಂದ ಸುನೀಲ್ ಬೋಸ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Google News Join Facebook Live 24/7 Help Desk

Tags: