ಬೆಳಗಾವಿ ಮುಸ್ಲಿಂ ಬಾಂಧವರಿಂದ ಈದ್ ಹಬ್ಬದ ಸಂಭ್ರಮ್ ಅಚರಣೆ

Apr 11, 2024 - 13:48
 90
Google  News Join WhatsApp Join Telegram Live

ಬೆಳಗಾವಿ ಮುಸ್ಲಿಂ ಬಾಂಧವರಿಂದ ಈದ್ ಹಬ್ಬದ ಸಂಭ್ರಮ್ ಅಚರಣೆ

Panchayat Swaraj Samachar News Desk.

ಬೆಳಗಾವಿ: ರಂಜಾನ್ ಆಚರಣೆ ಮಾಡಿ ಚಂದ್ರನ ದರ್ಶನದೊಂದಿಗೆ ಒಂದು ತಿಂಗಳಿದ ರಮಜಾನ ಮಾಸ ಆಚರಣೆ ಮುಕ್ತಾಯಗೊಳಿಸಿ, ಇಂದು ಬೆಳಗ್ಗೆ ಅಂಜುಮನ್ ಈದ್ಗಾ ಮೈದಾನ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳ ವಿನಿಮಯ ಮಾಡಿಕೊಂಡರು.

 ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು, ಮಹಿಳೆಯರು ಸಂಭ್ರಮ ಹಾಗೂ ಉಲ್ಲಾಸದಿಂದ ಹಬ್ಬ ಆಚರಣೆಯಲ್ಲಿ ತೊಡಗಿದರು. ಪ್ರಾರ್ಥನೆಯಲ್ಲಿ ಭಾಗವಹಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್( ರಾಜು) ಸೆಟ್ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಹಬ್ಬ ಶಾಂತಿ ಸಂಭ್ರಮ ಮತ್ತು ಸುಖ ನೆಮ್ಮದಿ ಈ ದೇಶದ ಪ್ರತಿಯೊಬ್ಬರಿಗೂ ಭಗವಂತ ನೀಡಲಿ.

 ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ದೇಶ ಸದಾಕಾಲ ಅಭಿವೃದ್ಧಿಯೊಂದಿಗೆ ಸಹೋದರ ಭಾವ ಮತ್ತು ಸೌಹಾರ್ದದಿಂದ ಮುಂದೆ ಸಾಗಲಿ ಎಂದು ನಾನು ಆ ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

 ಈ ಸಂದರ್ಭದಲ್ಲಿ ಅನೇಕ ಮುಸ್ಲಿಂ ಬಾಂಧವರು ಶಾಸಕರಿಗೆ ಹಬ್ಬದ ಶುಭ ಹಾರೈಸಿದರು

Google News Join Facebook Live 24/7 Help Desk

Tags: