ಚುನಾವಣಾ ಬಾಂಡ್ ಸಮರ್ಥಿಸಿಕೊಂಡ ಪ್ರಧಾನಿ ಮೋದಿ

Apr 16, 2024 - 10:23
 56
Google  News Join WhatsApp Join Telegram Live

ಚುನಾವಣಾ ಬಾಂಡ್ ಸಮರ್ಥಿಸಿಕೊಂಡ ಪ್ರಧಾನಿ ಮೋದಿ

Panchayat Swaraj Samachar News Desk.

ನವದೆಹಲಿ: ಚುನಾವಣೆಗಳಲ್ಲಿ ಕಪ್ಪು ಹಣ ನಿಗ್ರಹವೇ ಚುನಾವಣಾ ಬಾಂಡ್ ಉದ್ದೇಶವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ ಚುನಾವಣಾ ಬಾಂಡ್ ಅನ್ನು ಸಮರ್ಥಿಸಿಕೊಂಡರು. ವಿಪಕ್ಷಗಳು ಚುನಾವಣೆಯಲ್ಲಿ ಸೋಲುತ್ತವೆ. ಅದನ್ನು ಮರೆಮಾಚಲು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತವೆ ಅಂತ ಕಿಡಿಕಾರಿದರು.

ಚುನಾವಣಾ ಬಾಂಡ್ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಸುಳ್ಳನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದ ಅವರು, ಈ ವಿಷಯದಲ್ಲಿ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತವಾದಾಗ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.

ಚುನಾವಣೆಯಲ್ಲಿ ಹಣ ಖರ್ಚಾಗುತ್ತದೆ. ಕಪ್ಪು ಹಣ ಚುನಾವಣೆಯಲ್ಲಿ ದೊಡ್ಡ ಶಕ್ತಿಯಾಗಿದೆ. ಈ ಕಪ್ಪು ಹಣದಿಂದ ಚುನಾವಣೆ ಮುಕ್ತ ಮಾಡಬಹುದು ಎಂದು ಯೋಚಿಸಿದ್ದೆ. ಆಗ ಚುನಾವಣಾ ಬಾಂಡ್ ಚಿಂತನೆ ಬಂತು. ನಗದು ಹಣದ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಬಾಂಡ್ ವ್ಯವಸ್ಥೆ ಜಾರಿ ಮಾಡಲಾಯಿತು. ಮಾಹಿತಿ ಬಹಿರಂಗಗೊಳಿಸದಿರಲು ಹಲವು ಕಾರಣಗಳಿದೆ. ಯಾರು ಯಾರಿಗೆ ಹಣ ನೀಡಿದರು ಎಂದು ಗೊತ್ತಾದ್ರೆ ರಾಜಕೀಯ ಪಕ್ಷಗಳು ಸಮಸ್ಯೆ ಮಾಡಬಹುದು. ಅಥವಾ ಜನರು ಹಣ ಕೊಡಲು ಮುಂದೆ ಬಾರದಿರಬಹುದು. ಬಾಂಡ್ ನಿಂದ ಹಣ ಎಲ್ಲಿಂದ ಬಂತು ಲೆಕ್ಕ ಸಿಗುತ್ತದೆ ಎಂದರು.

Google News Join Facebook Live 24/7 Help Desk

Tags: