ಬಿಜೆಪಿ ವಿರುದ್ಧ ಸೋನಿಯಾ ಗಾಂಧಿ ಸಿಡಿಮಿಡಿ

Mar 22, 2024 - 12:17
 42
Google  News Join WhatsApp Join Telegram Live

ಬಿಜೆಪಿ ವಿರುದ್ಧ ಸೋನಿಯಾ ಗಾಂಧಿ ಸಿಡಿಮಿಡಿ

Panchayat Swaraj Samachar News Desk.

ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಲವು ಬ್ಯಾಂಕ್‌ ಖಾತೆಗಳನ್ನು ಆದಾಯ ತೆರಿಗೆ ಇಲಾಖೆಯು ತಡೆ ಹಿಡಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಸೋನಿಯಾ ಗಾಂಧಿ, “ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿಯಲಾಗಿದೆ. ಇದು ಗಂಭೀರವಾದ ಪ್ರಕರಣವಾಗಿದೆ. ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನಮಗೆ ತೆಗಿಯೋಕೆ ಆಗ್ತಿಲ್ಲ. ಬಿಜೆಪಿ ನಾಯಕರು ಚುನಾವಣೆಗೆ ಅಂತನೇ ಕಾಯ್ತಾ ಇದ್ದರು. ಇಂತಹ ಸಂಧರ್ಭದಲ್ಲಿ ಹೀಗೆ ಮಾಡಿದ್ದಾರೆ. ನಮ್ಮ ಹಣವನ್ನ ಹೀಗೆ ಫ್ರೀಜ್ ಮಾಡೋದಾ? ನಮ್ಮ ಎಲ್ಲಾ ಅಕೌಂಟ್ ಗಳನ್ನ ಫ್ರೀಜ್ ಮಾಡಿದ್ದಾರೆ.

ಇದು ನಮ್ಮ ಜನರ ಮೇಲೆ ಮಾಡಿರುವ ಆಕ್ರಮಣವಾಗಿದೆ. ಎಲ್ಲರೂ ನಾಟಕ ನೋಡಿದಂತೆ ನೋಡುತ್ತಿದ್ದಾರೆ. ನಮಗೆ ಒಂದು ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ಆಗ್ತಾ ಇಲ್ಲಾ. ಮಾಧ್ಯಮಗಳು ಕೂಡ ಈ ಬಗ್ಗೆ ಒಂದು ಮಾತನ್ನೂ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು

Google News Join Facebook Live 24/7 Help Desk

Tags: