ಬಿಜೆಪಿಗೆ ಸೇರದಿದ್ದರೆ ಇಡಿ ನನ್ನನ್ನು ಮತ್ತು ಇತರ 3 ಎಎಪಿ ನಾಯಕರನ್ನು ಬಂಧಿಸಲಿದೆ: ಅತಿಶಿ

Apr 2, 2024 - 15:51
 42
Google  News Join WhatsApp Join Telegram Live

ಬಿಜೆಪಿಗೆ ಸೇರದಿದ್ದರೆ ಇಡಿ ನನ್ನನ್ನು ಮತ್ತು ಇತರ 3 ಎಎಪಿ ನಾಯಕರನ್ನು ಬಂಧಿಸಲಿದೆ: ಅತಿಶಿ

Panchayat Swaraj Samachar News Desk.

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಇದೀಗ ಜಾರಿ ನಿರ್ದೇಶನಾಲಯವು ನನ್ನ ಜತೆ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರನ್ನು ಬಂಧಿಸಲಿದೆ ಎಂದು ದೆಹಲಿ ಸಚಿವ ಅತಿಶಿ ಮಂಗಳವಾರ ಹೇಳಿದ್ದಾರೆ. “ಶೀಘ್ರದಲ್ಲೇ ನಮ್ಮ ನಿವಾಸದ ಮೇಲೆ ಇಡಿ ದಾಳಿ ನಡೆಯಲಿದೆ. ನಂತರ ನಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಲಾಗಿದೆ. ಬಿಜೆಪಿ ಈಗ ಆಮ್ ಆದ್ಮಿ ಪಕ್ಷದ ಮುಂಚೂಣಿಯ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅತಿಶಿ ಹೇಳಿದ್ದಾರೆ.

ವೈಯಕ್ತಿಕ ಸಂಪರ್ಕದ ಮೂಲಕ ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಲಾಗಿದೆ. ನಾನು ಬಿಜೆಪಿಗೆ ಸೇರುವ ಮೂಲಕ ನನ್ನ ರಾಜಕೀಯ ಜೀವನವನ್ನು ಉಳಿಸಿಕೊಳ್ಳಬಹುದು. ಇಲ್ಲವೇ ಮುಂದಿನ ಒಂದು ತಿಂಗಳಲ್ಲಿ ಬಂಧಿಸಬಹುದು ಎಂದು ನನಗೆ ತಿಳಿಸಲಾಗಿದೆ. ಪ್ರತಿಯೊಬ್ಬ ಎಎಪಿ ನಾಯಕನನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ನನಗೆ ತುಂಬಾ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರಿಂದ ಆರಂಭಿಸಿ ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಆದರೆ ಈಗ ಅವರು ಇನ್ನೂ ನಾಲ್ವರು ಉನ್ನತ ನಾಯಕರನ್ನು ಬಂಧಿಸಲು ಬಯಸಿದ್ದಾರೆ. ಅದರಲ್ಲಿ ನಾನು, ರಾಘವ್ ಚಡ್ಡಾ, ದುರ್ಗೇಶ್ ಪಾಠಕ್ ಮತ್ತು ಸೌರಭ್ ಭಾರದ್ವಾಜ್ ಇದ್ದೀವಿ ಎಂದಿದ್ದಾರೆ ಅತಿಶಿ

.

Google News Join Facebook Live 24/7 Help Desk

Tags: