LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯುಗಾದಿ ಪ್ರಕೃತಿಯು ಸಂಭ್ರಮಿಸುವ ಹಬ್ಬ

Advertisement
ನಮಗೆಲ್ಲ ಗೊತ್ತಿರೋ ಹಾಗೇ ಜನವರಿ 1 ಕ್ಕೆ ಹೊಸ ವರ್ಷ ಅಂತ ಆಚರಿಸುತ್ತೇವೆ. ಆಗ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ. ಆದರೆ ಮಾರ್ಚ್ 30 ಕ್ಕೆ ಇಡೀ ಪರಿಸರವೇ ಬದಲಾವಣೆ ಕಾಣುತ್ತದೆ. ಪರಿಸರದಲ್ಲಿ ಮರಗಳು ಚಿಗುರಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಅನೇಕ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪುರಾವೆಗಳನ್ನು ಒಳಗೊಂಡ ಸಂಪ್ರದಾಯಗಳೊಂದಿಗೆ ಆಚರಣೆ ಮಾಡಲಾಗುತ್ತದೆ. ಯುಗಾದಿಯನ್ನು ಮಾನವ ಮಾತ್ರವಲ್ಲ. ಸುತ್ತಮುತ್ತಲಿನ ಪ್ರಕೃತಿಯೂ ಸಂಭ್ರಮಿಸುತ್ತದೆ.

ಯುಗಾದಿ ಹಬ್ಬವು ನಮ್ಮನ್ನು ಹೊಸತನಕ್ಕೂ, ನವೀಕರಣಕ್ಕೂ ಸ್ವಾಗತ ಮಾಡುತ್ತದೆ. ಇದು ಹೊಂದಿರುವಂತಹ ವಸಂತ ಋತುವಿನ ಸೊಗಸನ್ನು ಹಾಗೂ ಹೊಸ ಎಲೆಗಳು ಚಿಗುರುಗಳ ಸಂಭ್ರಮವನ್ನು ಮಾಡುತ್ತದೆ. ಹಿಂದೂ ಪಂಚಾಂಗದಲ್ಲಿ ಚೈತ್ರ ಮಾಸದ ಮೊದಲ ದಿನದಂದು ಜರಗುವ ಈ ಹಬ್ಬವು ಪ್ರತಿ ಮನೆಯಲ್ಲಿಯೂ ಉತ್ಸವದ ಹೊಳಪನ್ನು ಸೃಷ್ಟಿಸುತ್ತದೆ.

ಯುಗಾದಿ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಆಚರಿಸುತ್ತಾರೆ. ಆಂಧ್ರಪ್ರದೇಶ, ಕರ್ನಾಟಕದಲ್ಲಿ ಯುಗಾದಿಯಾದರೆ ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ಯ. ಗುಡಿಪಾಡ್ಯ ಎಂದರೆ ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇಡುತಾರಂತೆ. ಇದು ಹೊಸ ವರ್ಷದ ಆಗಮನಕ್ಕೆ ಬಾವುಟವನ್ನು ಹಾರಿಸುವ ಸಂಕೇತವಾಗಿದೆ ಎಂದು ಇತಿಹಾಸ ತಿಳಿಸುತ್ತದೆ.
ಯುಗಾದಿಯಂದು ಬೇಗನೆ ಎದ್ದು ನಮ್ಮ ದೇಹವನ್ನು ಅಂಟಿಕೊಂಡಿರುವ ಕೊಳಕನ್ನು ಸ್ವಚ್ಛಗೊಳಿಸಲು ಬೇವಿನ ತಪ್ಪಳನ್ನು ಹಾಕಿಕೊಂಡು ಸ್ನಾನ ಮಾಡುತ್ತಾರೆ. ನಂತರ ವಿಶೇಷ ಖಾದ್ಯಾವನ್ನು ತಯಾರಿಸುತ್ತಾರೆ. ಚಿಗುರಿದ ಮಾವಿನ ಎಲೆಗಳಿಂದ ಮನೆಯ ಹೆಬ್ಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ತೋರಣ ಕಟ್ಟಿ, ಹೊಸದಾದ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ.

ಯುಗಾದಿಯ ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟವಾದ ಬೇವನ್ನೂ ಸಮನಾಗಿ ಸ್ವೀಕರಿಸುವುದು. ತಿಂದ ಮೇಲೆ ಬೆಲ್ಲವೂ ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟುಮಾಡಿದರೆ ಬೇವು ಆ ಉರಿಯ ಶಮನವನ್ನು ಮಾಡುತ್ತದೆ. ಮಾನವನ ಬದುಕು ಬೇವು ಬೆಲ್ಲವಿದ್ದಂತೆ. ಸುಖವೂ ಇರುತ್ತದೆ, ದುಃಖವೂ ಇರುತ್ತದೆ. ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಬಾಳ್ವೆ ನಡೆಸಬೇಕು. ಈಗ ಯುಗಾದಿ ನಮ್ಮೆಲ್ಲರ ಜೀವನದ ಕಹಿ ದೂರಮಾಡಿ, ಸಿಹಿಯನ್ನು ಹೆಚ್ಚಿಸಲಿ.

ನಮ್ಮಲ್ಲಿ ನೂತನ ಆಶಾಕಿರಣವನ್ನು ತಂದೊಡುತ್ತದ್ದೆ. ಜೀವನದ ಎಲ್ಲಾ ದಿಕ್ಕುಗಳಲ್ಲಿಯೂ ಜಯದ ಹೊಸ ಮಾರ್ಗಗಳನ್ನು ತೋರಿಸುವಂತಾಗಲಿ. ಹೊಸ ಹರುಷ, ಆಶೀರ್ವಾದಗಳ ಸಾಗರವಾಗಲಿ. ಸಿಹಿಕಹಿ ಅನುಭವಗಳಲ್ಲಿ ಭರವಸೆಗಳ ಸಂದೇಶವನ್ನು ಕಂಡುಹಿಡಿದುಕೊಳ್ಳಬೇಕು. ಉಲ್ಲಾಸ, ಉತ್ಸಾಹ ತುಂಬಿದ ಯುಗಾದಿ ಆನಂದವನ್ನು ತರಬೇಕು. ನಮ್ಮ ಬದುಕಿನ ನೂತನ ಶಕ್ತಿಯ ಉದಯವಾಗಲಿ ಮತ್ತು ನಮ್ಮ ಎಲ್ಲ ಬಾಧಕಗಳನ್ನು ಆದಷ್ಟು ಬೇಗ ಶಮನ ಮಾಡುವಂತಾಗಲಿ. ನೂರು ವರುಷಗಳ ಆಯಸ್ಸು, ಸಧೃಡ, ಆರೋಗ್ಯ, ಸಕಲ-ಸಂಪತ್ತುಗಳ ಪ್ರಾಪ್ತಿಯಾಗಿಯೂ, ಅರಿಷ್ಠ ನಿವಾರಣೆಗಾಗಿ ಬೇವು ಬೆಲ್ಲ ಸೇವಿಸಿ. ಎಲ್ಲರಿಗೂ "ಹ್ಯಾಪಿ ಯುಗಾದಿ"...

- ಗಂಗಾ ಅಮಾತೆಪ್ಪನವರ, ಬಾಗಲಕೋಟೆ

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರ್ನಾಲ್ಕು ದಿನಗಳಿಂದ ಮಳೆ ಬರುತ್ತಿರುವುದರಿಂದ ಆಶಾಭಾವ ಮೂಡಿದೆ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೂಳಿಬೆಂಗಳೂರಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ – ಮಾರಕಾಸ್ತ್ರಗಳು ಪತ್ತೆಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ 1,470 ಕ್ಯೂಸೆಕ್ ಒಳಹರಿವುರಾಜ್ಯದ ಹಲವೆಡೆ 2-3 ದಿನ ಮಳೆ ಮುನ್ಸೂಚನೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮಜೈಶ್‌ ಉಗ್ರರ ಜೊತೆ ನಂಟು; ಗುಜರಾತಲ್ಲಿ 8 ಮಂದಿ ಅರೆಸ್ಟ್‌ಪತಿಯ ಕೊಂದು ಬಾತ್ ರೂಂನಲ್ಲೇ ಹೂತಿದ್ದ ಪತ್ನಿಬಿಎಲ್‌ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಭರ್ತಿ ಮಾಡಿಸ್ತಿದ್ದಾರೆ: ಸಾ.ರಾ.ಮಹೇಶ್ ಆರೋಪಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲುSIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಅಪಘಾತ – ವಿಎ ಸಾವು ಬದುಕಿನ ನಡುವೆ ಹೋರಾಟ