LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳ್ಳಂದೂರು ಪೊಲೀಸರ ಭರ್ಜರಿ ಬೇಟೆ – ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡ್ತಿದ್ದ 800 ಕೆಜಿ ಜಿಲೆಟಿನ್ ಜಪ್ತಿ

Advertisement
Advertisement
Advertisement

ಬೆಂಗಳೂರು: ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಬೆಳ್ಳಂದೂರು ಪೊಲೀಸರು ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡ್ತಿದ್ದ 800 ಕೆಜಿ ಜಿಲೆಟಿನ್‌ ಅನ್ನು ಜಪ್ತಿ ಮಾಡಿದ್ದಾರೆ.

ಕಾಮಗಾರಿಯ ವೇಳೆ ಬಂಡೆಗಳನ್ನ ಸ್ಫೋಟಿಸಲು ಯಾವುದೇ ಪರವಾನಗಿ ಇಲ್ಲದೇ ಜಿಲೆಟಿನ್‌ ಬಳಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿ ಜಿಲೆಟಿನ್‌ನ್ನು ಜಪ್ತಿ ಮಾಡಿದ್ದಾರೆ

ಬೆಳ್ಳಂದೂರು ಠಾಣಾ ವ್ಯಾಪ್ತಿಯ ಭೋಗನಹಳ್ಳಿ ಸಮೀಪ ಸುಮಾರು 25 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಬಂಡೆಗಳನ್ನು ಬ್ಲಾಸ್ಟ್ ಮಾಡಲು ಜಿಲೆಟಿನ್ ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಭಾರೀ ಪ್ರಮಾಣದ ಜಿಲೆಟಿನ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಈ ಕಾಮಗಾರಿ ಆದರ್ಶ್ ಡೆವಲಪರ್ಸ್ ಸಂಸ್ಥೆಯಿಂದ ನಡೆಯುತ್ತಿದ್ದು, ಎಂಎನ್‌ಸಿ ಕಂಪನಿಗಳ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಜಿಲೆಟಿನ್ ಸ್ಫೋಟಕಗಳನ್ನು ಬಳಸಲು ಅಗತ್ಯವಿರುವ ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜುಲೈ 11ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಆದರ್ಶ್ ಡೆವಲಪರ್ಸ್ ಸಂಸ್ಥೆ ಸೇರಿದಂತೆ ಅರುಣ್ ಕುಮಾರ್, ಜಗನ್ ಹಾಗೂ ಪ್ರಭಾಕರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಂದೂರು ಪೊಲೀಸರು, ಜಿಲೆಟಿನ್ ಎಲ್ಲಿಂದ ತರಲಾಗಿತ್ತು? ಅದನ್ನು ಸಂಗ್ರಹಿಸಲು ಹಾಗೂ ಬಳಕೆ ಮಾಡಲು ಅನುಮತಿ ಇತ್ತೇ? ಎಂಬುದೂ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ಲೈವುಡ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಸುಟ್ಟು ಭಸ್ಮಬೆಳ್ಳಂದೂರು ಪೊಲೀಸರ ಭರ್ಜರಿ ಬೇಟೆ – ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡ್ತಿದ್ದ 800 ಕೆಜಿ ಜಿಲೆಟಿನ್ ಜಪ್ತಿಮದುವೆ ಮನೆಯಲ್ಲೂ ʻಡಿ ಬಾಸ್‌, ಡಿ ಬಾಸ್‌ʼ ಜೈಕಾರ – ಫ್ಯಾನ್ಸ್‌ಗೆ ಬುದ್ಧಿ ಹೇಳಿದ ವಿಜಯಲಕ್ಷ್ಮಿಬಿಜೆಪಿ ಐಟಿ ಸೆಲ್‌ನಿಂದ ಅಮಿತ್ ಮಾಳವೀಯ ಔಟ್‌, ದೀಪಕ್ ಮ್ಹಾಸ್ಕೆಗೆ ಜವಾಬ್ದಾರಿISI ಬೆಂಬಲಿತ ಉಗ್ರ ಜಾಲದ ವಿರುದ್ಧ ಕಾರ್ಯಾಚರಣೆ – ಕರ್ನಾಟಕದಲ್ಲಿ ಮೂವರು ವಶಕ್ಕೆದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾಪ್ರಧಾನಿ ಮೋದಿ ಭೇಟಿಯಾದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ಪಾವನಾ ಹೊಸ ಲುಕ್ – ‘ಡಿಯರ್ ಹಸ್ಬೆಂಡ್’ ಚಿತ್ರತಂಡ ಸೇರಿದ ನಟಿಕೋಟೇಶ್ವರದಲ್ಲಿ ಗಮನಸೆಳೆದ ನಾಗಬನ ಮರಳು ಶಿಲ್ಪಮದುವೆಯಾಗುವಂತೆ ಒತ್ತಾಯ – ಪ್ರೇಯಸಿಯನ್ನು ಕೊಂದು ಗೋಣಿ ಚೀಲದಲ್ಲಿ ಶವ ಬಚ್ಚಿಟ್ಟು ಪ್ರಿಯಕರ ಪರಾರಿ