LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿ ಐಟಿ ಸೆಲ್‌ನಿಂದ ಅಮಿತ್ ಮಾಳವೀಯ ಔಟ್‌, ದೀಪಕ್ ಮ್ಹಾಸ್ಕೆಗೆ ಜವಾಬ್ದಾರಿ

Advertisement
Advertisement
Advertisement

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ತಿಂಗಳುಗಳು ಬಾಕಿ ಇರುವಾಗ ಕೇಂದ್ರ ಬಿಜೆಪಿಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಲಾಗಿದೆ.

ಪಕ್ಷದ ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅಮಿತ್ ಮಾಳವೀಯ ಅವರನ್ನು ಬದಲಾಯಿಸಿ ಛತ್ತೀಸ್‌ಗಢದ ದೀಪಕ್ ಮ್ಹಾಸ್ಕೆಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಿಸಿದೆ.

ದೇಶಾದ್ಯಂತ ಪಕ್ಷದ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಚಟುವಟಿಕೆಗಳನ್ನು ಬಲಪಡಿಸುವ ಹಾಗೂ ಮರುಸಂಘಟಿಸುವ ಉದ್ದೇಶದಿಂದ ಈ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ಅಮಿತ್ ಮಾಳವೀಯ ಅವರನ್ನು ಜುಲೈ 2015 ರಲ್ಲಿ ಬಿಜೆಪಿ ಐಟಿ ಸೆಲ್‌ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಕಳೆದ 11 ವರ್ಷಗಳಿಂದ ಅವರು ಈ ಹುದ್ದೆಯಲ್ಲಿದ್ದರು.

ಸಾಮಾಜಿಕ ಜಾಲತಾಣ ತಂಡದಲ್ಲೂ ಬದಲಾವಣೆ ಮಾಡಲಾಗಿದ್ದು, ನಾಲ್ಕು ರಾಜ್ಯಗಳಿಂದ ನೂತನ ಸಂಯೋಜಕರನ್ನು ನೇಮಕ ಮಾಡಲಾಗಿದೆ. ಪ್ರೀತಿ ಗಾಂಧಿ (ಮಹಾರಾಷ್ಟ್ರ), ಶಿವಾನಂದ್ ದ್ವಿವೇದಿ (ದೆಹಲಿ), ಅಲೋಕ್ ಭಟ್ (ಉತ್ತರಾಖಂಡ), ಅರುಣ್ ಯಾದವ್ (ಹರಿಯಾಣ) ನೇಮಕವಾಗಿದ್ದಾರೆ.

ಅನಿಲ್ ಬಲೂನಿ ಅವರು ಪಕ್ಷದ ರಾಷ್ಟ್ರೀಯ ಮಾಧ್ಯಮ ಸಂಚಾಲಕರಾಗಿ ಮುಂದುವರಿಯಲಿದ್ದಾರೆ. 

ರಾಷ್ಟ್ರೀಯ ಉಪಾಧ್ಯಕ್ಷರು: ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ, ರಾಮ್ ಮಾಧವ್, ಬೈಜಯಂತ್ ಜಯ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ಡಾ. ಭಾರತಿ ಪವಾರ್ ಮತ್ತು ಮನ್‌ಪ್ರೀತ್ ಸಿಂಗ್ ಬಾದಲ್ ಸೇರಿದಂತೆ 13 ಮಂದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು: ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ಬಿಪ್ಲಬ್ ಕುಮಾರ್ ದೇಬ್, ಸ್ಮೃತಿ ಇರಾನಿ, ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸಂಘಟನಾ ಪ್ರಧಾನ ಕಾರ್ಯದರ್ಶಿ: ಬಿ. ಎಲ್. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಶಿವಪ್ರಕಾಶ್ ಹಾಗೂ ಸೌದಾನ್ ಸಿಂಗ್ ಅವರು ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.

ರಾಷ್ಟ್ರೀಯ ಕಾರ್ಯದರ್ಶಿ
ಕೆ. ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಭೋಲಾ ಸಿಂಗ್, ಪ್ರದೀಪ್ ವರ್ಮಾ, ಫಾಂಗ್ನಾನ್ ಕೊನ್ಯಾಕ್, ಅನಿಲ್ ಆಂಟನಿ, ಸಂದೀಪ್ ಪಾಠಕ್ ಮತ್ತು ಮನೋಜ್ ತಿಗ್ಗಾ ಮತ್ತಿತರರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡಿದ್ದಾರೆ.

ಇತರ ಪ್ರಮುಖ ಹೊಣೆಗಾರಿಕೆಗಳು: ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಕೋಶಾಧಿಕಾರಿಯನ್ನಾಗಿ (Treasurer) ನೇಮಿಸಲಾಗಿದ್ದು, ತರುಣ್ ಚುಗ್ ಅವರಿಗೆ ಕೇಂದ್ರ ಕಚೇರಿಯ ಉಸ್ತುವಾರಿ (Central Office In-charge) ನೀಡಲಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ಲೈವುಡ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಸುಟ್ಟು ಭಸ್ಮಬೆಳ್ಳಂದೂರು ಪೊಲೀಸರ ಭರ್ಜರಿ ಬೇಟೆ – ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡ್ತಿದ್ದ 800 ಕೆಜಿ ಜಿಲೆಟಿನ್ ಜಪ್ತಿಮದುವೆ ಮನೆಯಲ್ಲೂ ʻಡಿ ಬಾಸ್‌, ಡಿ ಬಾಸ್‌ʼ ಜೈಕಾರ – ಫ್ಯಾನ್ಸ್‌ಗೆ ಬುದ್ಧಿ ಹೇಳಿದ ವಿಜಯಲಕ್ಷ್ಮಿಬಿಜೆಪಿ ಐಟಿ ಸೆಲ್‌ನಿಂದ ಅಮಿತ್ ಮಾಳವೀಯ ಔಟ್‌, ದೀಪಕ್ ಮ್ಹಾಸ್ಕೆಗೆ ಜವಾಬ್ದಾರಿISI ಬೆಂಬಲಿತ ಉಗ್ರ ಜಾಲದ ವಿರುದ್ಧ ಕಾರ್ಯಾಚರಣೆ – ಕರ್ನಾಟಕದಲ್ಲಿ ಮೂವರು ವಶಕ್ಕೆದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾಪ್ರಧಾನಿ ಮೋದಿ ಭೇಟಿಯಾದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ಪಾವನಾ ಹೊಸ ಲುಕ್ – ‘ಡಿಯರ್ ಹಸ್ಬೆಂಡ್’ ಚಿತ್ರತಂಡ ಸೇರಿದ ನಟಿಕೋಟೇಶ್ವರದಲ್ಲಿ ಗಮನಸೆಳೆದ ನಾಗಬನ ಮರಳು ಶಿಲ್ಪಮದುವೆಯಾಗುವಂತೆ ಒತ್ತಾಯ – ಪ್ರೇಯಸಿಯನ್ನು ಕೊಂದು ಗೋಣಿ ಚೀಲದಲ್ಲಿ ಶವ ಬಚ್ಚಿಟ್ಟು ಪ್ರಿಯಕರ ಪರಾರಿ