LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Editorial: ಮತಪೆಟ್ಟಿಗೆಯಿಂದ ನಾಯಕ ಹುಟ್ಟುತ್ತಾನೆಯೇ..? ಅಥವಾ....!

“ಮತಪೆಟ್ಟಿಗೆಯಿಂದ ನಾಯಕ ಹುಟ್ಟುತ್ತಾನೆ” ಎನ್ನುವುದು ಪ್ರಜಾಪ್ರಭುತ್ವದ ಅತ್ಯಂತ ಸುಂದರವಾದ ಸೂತ್ರ. ಆದರೆ ಇಂದಿನ ರಾಜಕೀಯ ವಾಸ್ತವಿಕತೆ ನೋಡಿದರೆ, ಅದು ಕೇವಲ ಮಾತಿನ ಅಲಂಕಾರವಾಗಿ ಉಳಿದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ರಾಜ್ಯದಲ್ಲಿ ತೆರವಾದ ಎರಡು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ತಮ್ಮ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿವೆ. ಆದರೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿನ ಅನ್ಯಾಯ, ವಿಶೇಷವಾಗಿ ‘ಬಿ ಫಾರ್ಮ್’ ಹಂಚಿಕೆ, ಕಾರ್ಯಕರ್ತರ ನಂಬಿಕೆಯನ್ನು ತುಳಿದಿದೆ. ವರ್ಷಗಳಕಾಲ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ಕುಟುಂಬಪರ ಹಾಗೂ ಪ್ರಭಾವಶಾಲಿ ವ್ಯಕ್ತಿಗಳಿಗೆ ಆದ್ಯತೆ ನೀಡಿರುವುದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಆತ್ಮವನ್ನೇ ಅವಮಾನಿಸುವಂತಾಗಿದೆ.

ಕ್ಷೇತ್ರಗಳು ಇಂದು ಜನರ ಪ್ರತಿನಿಧಿತ್ವದ ವೇದಿಕೆಗಳಾಗಿಲ್ಲ; ಅವು ಕುಟುಂಬಗಳ ಸ್ವಂತ ಆಸ್ತಿಗಳಾಗಿ ಮಾರ್ಪಡುತ್ತಿವೆ. ತಂದೆ ನಂತರ ಮಗ, ನಂತರ ಮೊಮ್ಮಗ ಇದು ಪ್ರಜಾಪ್ರಭುತ್ವವಲ್ಲ, ಇದು ಆಧುನಿಕ ರಾಜವಂಶ ವ್ಯವಸ್ಥೆ. ಜನರ ಮತದಿಂದ ಆಯ್ಕೆಯಾಗಬೇಕಾದ ನಾಯಕರು, ಈಗ ಕುಟುಂಬದ ಹೆಸರಿನಿಂದಲೇ ಆಯ್ಕೆಯಾಗುತ್ತಿದ್ದಾರೆ.

“ರಾಜನ ಹೊಟ್ಟೆಯಿಂದ ರಾಜ ಹುಟ್ಟುತ್ತಾನೆ” ಎಂಬ ಹಳೆಯ ಮಾತು, ಇಂದಿನ ಪ್ರಜಾಪ್ರಭುತ್ವದಲ್ಲಿ ಹೊಸ ರೂಪದಲ್ಲಿ ಮರಳಿ ಬಂದಿದೆ. ಮತಪೆಟ್ಟಿಗೆ ಕೇವಲ ಒಂದು ಪ್ರಕ್ರಿಯೆಯಾಗಿಬಿಟ್ಟಿದೆ. ನಾಯಕನ ಆಯ್ಕೆ ಈಗಾಗಲೇ ಕುಟುಂಬಗಳಲ್ಲಿ ನಿರ್ಧಾರವಾಗುತ್ತಿದೆ.

ಚುನಾವಣೆ ಎಂದರೆ ತತ್ವಗಳ ಹೋರಾಟವಾಗಬೇಕಿತ್ತು. ಆದರೆ ಅದು ಇಂದು ಜಾತಿ, ಮತ, ಹಣ ಮತ್ತು ಪ್ರಭಾವಗಳ ಸಮೀಕರಣವಾಗಿ ಕುಸಿಯುತ್ತಿದೆ ಎನ್ನುವುದನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಾರ್ಯಕರ್ತರ ಶ್ರಮ, ನಿಷ್ಠೆ, ತ್ಯಾಗಗಳೆಲ್ಲವೂ ಕೇವಲ ಭಾಷಣಗಳಲ್ಲಿ ಮಾತ್ರ ಉಳಿದುಕೊಂಡಿವೆ.

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ನಿಷ್ಠಾವಂತ ಕಾರ್ಯಕರ್ತರ ದೊಡ್ಡ ಬಳಗವಿದ್ದರೂ, ಅವರಿಗೆ ಅವಕಾಶ ನೀಡುವಲ್ಲಿ ಪಕ್ಷಗಳು ವಿಫಲವಾಗಿವೆ. ಇದು ಕೇವಲ ಒಂದು ತಪ್ಪಲ್ಲ; ಇದು ಕಾರ್ಯಕರ್ತರ ಆತ್ಮಗೌರವಕ್ಕೆ ನೀಡಿದ ದೊಡ್ಡ ಅವಮಾನ.

ಕಾರ್ಯಕರ್ತರು ಪಕ್ಷದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ, ಅವರನ್ನು ಕೇವಲ ಪ್ರಚಾರಕ್ಕೆ ಮತ್ತು ಚುನಾವಣಾ ಯಂತ್ರಗಳಂತೆ ಬಳಸಲಾಗುತ್ತಿದೆ. ಜಯ ಸಾಧಿಸುವಾಗ ಅವರ ಪರಿಶ್ರಮದ ಬಗ್ಗೆ ಮಾತನಾಡಿ ಅಧಿಕಾರ ಹಂಚುವಾಗ ಅವರನ್ನು ಸಂಪೂರ್ಣವಾಗಿ ಮರೆತುಬಿಡುತ್ತಿರುವುದು ಇಂದಿನ ಪರಿಸ್ಥಿತಿ.

ಹೀಗಾದರೆ ಪಕ್ಷಗಳು ಕಾರ್ಯಕರ್ತರಿಂದ ನಿರ್ಮಿತವಾಗಿವೆಯೇ? ಅಥವಾ ಕಾರ್ಯಕರ್ತರು ಪಕ್ಷಗಳ ಸೇವಕರಾಗಿ ಮಾತ್ರ ಉಳಿದಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತಿದ್ದು ಈ ಪ್ರಶ್ನೆಗೆ ಉತ್ತರ ನೀಡುವುದು ಈಗ ನಾಯಕರ ಹೊಣೆಗಾರಿಕೆ ಮಾತ್ರವಲ್ಲ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಾಕ ಅಂಶವಾಗಿದೆ.

ವರದಿ: ರತ್ನಾಕರ ಗೌಂಡಿ
Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಲಿಕೆ ಬಿಜೆಪಿ ಸದಸ್ಯರ ವಿರುದ್ಧ ವಿಜಯೇಂದ್ರಗೆ ವಿವಿಧ ಕನ್ನಡ ಸಂಘಟನೆಗಳ ದೂರುಪಾಲಿಕೆ ವಿರುದ್ಧ ಹೋರಾಟ ಮುಂದುವರಿಸಲು ವಿವಿಧ ಕನ್ನಡ ಸಂಘಟನೆಗಳ ನಿರ್ಧಾರಬೆಳಗಾವಿ ನಗರದ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ ಆವರಣದಲ್ಲಿ ಚಾಲನೆವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವುಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ!ಪೊಲೀಸ್ ಠಾಣೆಯಲ್ಲೇ ಪ್ರೇಮಿಗಳ ಕುಟುಂಬದ ಮಧ್ಯೆ ಗಲಾಟೆ, ಗರ್ಭಿಣಿ ಮೇಲೂ ಹಲ್ಲೆ!ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು!ಬೆಂಗ್ಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 26 ಲಕ್ಷ ದೋಚಿದ ಖದೀಮರುಚನ್ನಗಿರಿಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆಡಿಕೆಶಿ ಮುಂದಿನ ಸಿಎಂ ಬ್ಯಾನರ್, ಕಾರ್ಯಕರ್ತರ ಅಭಿಮಾನ ತಡಿಯೋಕೆ ಸಾಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್