LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣಕ್ಕಾಗಿ ಸಮಸ್ತ ಆಸ್ತಿಯನ್ನು ದಾನಮಾಡಿದ ಲಿಂಗರಾಜ ದೇಸಾಯಿ

ದಾನಕ್ಕೆ ಹೆಸರು ವಾಸಿಯಾದ ಶ್ರೇಷ್ಠರಲ್ಲಿ ಮಾಹಾ ಭಾರತದ ಕರ್ಣ. ಇಂದ್ರ ಕರ್ಣನ ಬಳಿ ಬಂದು ದಾನ ಕೇಳಿದಾಗ ಆತ ತನ್ನ ಕವಚ ಕುಂಡಲಗಳನ್ನು ದಾನ ನೀಡಿದ. ಯುಗ ಯುಗಗಳೇ ಕಳೆದರು ಅವನನ್ನ ನಾವು ಇಂದಿಗೂ ಸ್ಮರಿಸುತ್ತಿದೆವೇ. ಆದರೆ ಕಲಿಯುಗದಲ್ಲಿಯು ಕೂಡ ಇಂತ ದಾನಿಗಳು ಇರುವವರು ಎಂಬುದಕ್ಕೆ ಶಿರಸಂಗಿಯ ಶ್ರೀ ಲಿಂಗರಾಜರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.ದ್ವಾಪರ ಯುಗದಲ್ಲಿ ದಾನಕ್ಕೆ ಕರ್ಣನು ಶ್ರೇಷ್ಠನಾದರೆ ಕಲಿಯುಗಕ್ಕೆ ಶಿರಸಂಗಿಯ ಲಿಂಗರಾಜರು ಶ್ರೇಷ್ಠ ಎಂದು ಹೇಳಿದರೆ ತಪ್ಪಾಗಲಾರದು. ಶಿರಸಂಗಿ ಲಿಂಗರಾಜರು ಲೋಕೋಪಕಾರಿ ಮತ್ತು ಶಿರಸಂಗಿ ಸಂಸ್ಥಾನಾಧಿಪತಿಗಳಾಗಿದ್ದರು. ಇವರು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ಎಲ್ಲ ಆಸ್ತಿಯನ್ನು ದಾನಮಾಡಿದ ವೀರ ದಾನಿಯಾಗಿದ್ದಾರೆ.


ಬಾಲ್ಯ ಜೀವನ:
ಇವರು ಗೊಳಪ್ಪ ಮಡ್ಲಿ ಮತ್ತು ಯಲವ್ವ ಮಡ್ಲಿ ಇವರ ಪುತ್ರನಾಗಿ ಗದಗ ಜಿಲ್ಲೆಯ ಶಿಗ್ಗಿಯಲ್ಲಿ 1861 ಜನವರಿ 10 ರಂದು ಜನಿಸಿದರು. ಮೊದಲನೆಯ ಹೆಸರು ರಾಮಪ್ಪ ಈ ಕುಟುಂಬ ಕೃಷಿಯನ್ನು ಮಾಡುತ್ತಿದರು.ಆಗ ಶಿರಸಂಗಿ ಸಂಸ್ಥಾನದ ರಾಜ ಜಾಯಪ್ಪ ದೇಸಾಯಿಯವರು ಆಡಳಿತ ನಡೆಸುತ್ತಿದರು. ದಿನಗಳು ಉರುಳಿದ ಹಾಗೆ ಸಂಸ್ಥಾನದ ಉತ್ತರಾಧಿಕಾರಕ್ಕೆ ಪುತ್ರರಿಲ್ಲದ ಕಾರಣ ಒಂದು ಮಗುವನ್ನು ದತ್ತು ಪಡೆಯಲು ಗಂಗಾಬಾಯಿ (ಮಡದಿ) ದೇಸಾಯಿಯವರೆಗೆ ಕೇಳಿದಾಗ ಸಮ್ಮತ್ತಿ ನೀಡಿದರು. ಅದೇ ಕ್ಷಣದಲೇ ತಾವು ಆಡಳಿತ ನಡೆಸುತ್ತಿರುವ ಹಳ್ಳಿಗಳಿಗೆ ಮತ್ತು ಸಂಸ್ಥಾನಗಳಿಗೆ ತಮ್ಮ ತಮ್ಮ ಪುತ್ರರನ್ನು ಕರೆತರಲು ಆಮಂತ್ರಣ ಕಳುಹಿಸಿದರು. ದೇಸಾಯಿಯವರು ಹೇಳಿದಂತೆ ಎಲ್ಲರು ತಮ್ಮ ಮಕ್ಕಳನ್ನ ಕರೆದುಕೊಂಡು ಬಂದರು. ಅದರಲ್ಲಿ ರಾಮಪ್ಪನು ಒಬ್ಬನಿದ್ದ. ದೇಸಾಯಿಯವರು ಸಂಜೆ ವೇಳೆಗೆ ಎಲ್ಲ ಮಕ್ಕಳನ್ನು ನೋಡುತ್ತ ಬಂದಾಗ ಕೆಲವಂದಿಷ್ಠು ಮಕ್ಕಳು ಆಟವಾಡುತ್ತಿದರೆ ಇನ್ನು ಕೆಲವು ಮಕ್ಕಳು ತಮ್ಮದೇ ಲೋಕದಲ್ಲಿ ಇದ್ದರು ಆದರೆ ರಾಮಪ್ಪ ಮಾತ್ರ ಅವರಿಗಿಂತ ಭಿನ್ನವಾಗಿದ್ದ, ಅದನ್ನು ಕಂಡು ಗಂಗಾಬಾಯಿ ಈ ಮಗುವನ್ನ ದತ್ತು ಪಡೆಯಲು ನಿರ್ಧರಿಸಿದರು. ರಾಮಪ್ಪ ಅವರನ್ನು 1872 ಜೂನ್ 2 ರಂದು ಅಧಿಕೃತವಾಗಿ ದತ್ತು ಪಡೆದು ಲಿಂಗರಾಜ ದೇಸಾಯಿ ಎಂದು ಮರುನಾಮಕರಣ ಮಾಡಿದರು. ದಾನಶೂರ ಶ್ರೀ ಲಿಂಗರಾಜ ದೇಸಯಿಯವರು ಈ ಕಲಿಯುಗ ಕಂಡ ಅಪ್ರತಿಮ್ಮ ದಾನಶೂರ .ಈ ದೇಸಾಯಿ ಮನೆತನದವರ ತ್ಯಾಗದ ಮನೋಭಾವ ಸದಾ ಸ್ಮರಣಿಯವಾದದ್ದು. ಈ ನಾಡಿಗೆ ಮತ್ತು ಲಿಂಗಾಯತ ಸಮುದಾಯಕ್ಕೆ ಇವರ ಸೇವೆ ಅಪಾರವಾದದ್ದು.


ಲೋಕೋಪಕಾರ
ಲಿಂಗರಾಜರಿಗೆ ಆರು ಜನ ಪತ್ನಿಯರಿದ್ದರು ಮಕ್ಕಳಿಲ್ಲದ ಕಾರಣ ಇವರು ತಮ್ಮ ಸಮಸ್ತ ಆಸ್ತಿಯನ್ನು ಶ್ರೀವಯೋಗಿ ಮಠಕ್ಕ ದಾನ ಮಾಡಲು ಹೊದಾಗ ಶ್ರೀಗಳು ಇಲ್ಲ ದೇಸಾಯಿಯವರೇ ನೀಮ್ಮ ಆಸ್ತಿಯನ್ನ ರಕ್ಷಿಸಲು ನಮ್ಮಿಂದಲೂ ಸಾಧ್ಯವಿಲ್ಲ ಅದರಿಂದ ನಿಮಗೆ ಮಕ್ಕಳಿಲ್ಲದ ಕಾರಣ ಆಸ್ತಿಯನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಿ ಎಂದರು.
ಲಿಂಗರಾಜರು ಮೃತ್ಯು ಪತ್ರದ ಪ್ರಕಾರ ತಮ್ಮ ಎಲ್ಲ ಆಸ್ತಿಯನ್ನು ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿದರು. ಇವರು KLE ಸಂಸ್ಥೆ ಸ್ಥಾಪನೆ ಮತ್ತು ಬೆಳವಣಿಗೆಗೆ ಇವರ ದಾನದ ಕೊಡುಗೆ ಬಹಳ ದೊಡ್ಡದಿದೆ. ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜು ಇವರ ಹೆಸರಲ್ಲಿ ಆರಂಭಗೊಂಡಿದೆ ಹಾಗೂ ಇವರ ಸವಿನೆನಪಿಗಾಗಿ ಶಿರಸಂಗಿಯಲ್ಲಿ ಲಿಂಗರಾಜ ಪ್ರೌಢ ಶಾಲೆ ಯನ್ನು ಪ್ರಾರಂಭಿಸಿ ಇಲ್ಲಿಯವರೆಗೆ ಮುನಡೆಸುತ್ತಾ ಬಂದಿದ್ದಾರೆ. 1906 ಶಿರಸಂಗಿಯಲ್ಲಿ ಮತ್ತು1861ರಲ್ಲಿ ನವಲಗುಂದದಲ್ಲಿ ಟ್ರಸ್ಟ್ ಸ್ಥಾಪಸಿದರು. 1904 ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಮೊದಲ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಈ ಟ್ರಸ್ಟನ್ನು ರಚಿಸಿದರು.


ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳು ಇವರ ಹೆಸರಲ್ಲಿ ಇದಿಂಗು ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿವೆ. ಅದಕ್ಕೆ ಇವರನ್ನು ಇಡಿ ಸಮಸ್ತ ನಾಡಿನ ಜನತೆ ತ್ಯಾಗವೀರ ಎಂದು ಕರೆಯುತ್ತಾರೆ. 1906 ಆಗಸ್ಟ್ 23 ರಂದು ಲಿಂಗರಾಜರು ಶಿರಸಂಗಿ ಸಂಸ್ಥಾನ ಮತ್ತು ತಮ್ಮ ಪ್ರೀತಿ ಪಾತ್ರ ಜನತೆಯನ್ನು ಶಾಶ್ವತವಾಗಿ ತೋರೆದರು. ಇವರ ನಿಧನದ ದಿನವನ್ನು ತ್ಯಾಗದ ದಿನದೆಂದು ಆಚರಿಸಲಾಗುತ್ತದೆ. ಲಿಂಗರಾಜರ ಜನ್ಮದಿನವನ್ನು ಹಬ್ಬದ ರೀತಿಯಲ್ಲಿ ಶಿರಸಂಗಿಯಲ್ಲಿ ಅಚರಿಸುತ್ತಾರೆ. ಇಂತ ರಾಜರು ಆಡಳಿತ ನಡೆಸಿದ ಊರಲ್ಲಿ ಹುಟ್ಟಿದ ನಾನೇ ಧನ್ಯ ಎಂದು ಹೆಮ್ಮೆಯಿಂದ ಹೇಳುತ್ತೇನೆ.
Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಲಿಕೆ ಬಿಜೆಪಿ ಸದಸ್ಯರ ವಿರುದ್ಧ ವಿಜಯೇಂದ್ರಗೆ ವಿವಿಧ ಕನ್ನಡ ಸಂಘಟನೆಗಳ ದೂರುಪಾಲಿಕೆ ವಿರುದ್ಧ ಹೋರಾಟ ಮುಂದುವರಿಸಲು ವಿವಿಧ ಕನ್ನಡ ಸಂಘಟನೆಗಳ ನಿರ್ಧಾರಬೆಳಗಾವಿ ನಗರದ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ ಆವರಣದಲ್ಲಿ ಚಾಲನೆವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವುಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ!ಪೊಲೀಸ್ ಠಾಣೆಯಲ್ಲೇ ಪ್ರೇಮಿಗಳ ಕುಟುಂಬದ ಮಧ್ಯೆ ಗಲಾಟೆ, ಗರ್ಭಿಣಿ ಮೇಲೂ ಹಲ್ಲೆ!ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು!ಬೆಂಗ್ಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 26 ಲಕ್ಷ ದೋಚಿದ ಖದೀಮರುಚನ್ನಗಿರಿಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆಡಿಕೆಶಿ ಮುಂದಿನ ಸಿಎಂ ಬ್ಯಾನರ್, ಕಾರ್ಯಕರ್ತರ ಅಭಿಮಾನ ತಡಿಯೋಕೆ ಸಾಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್