ವೋಟ್ ಬ್ಯಾಂಕ್ ಸಮಾಜ ಆಗದೆ ಪ್ರಗತಿಪರ ಸಮಾಜ ನಿರ್ಮಾಣವಾಗಬೇಕಿದೆ: ರಾಹುಲ್ ಜಾರಕಿಹೊಳಿ

Apr 15, 2024 - 09:44
 21
Google  News Join WhatsApp Join Telegram Live

ವೋಟ್ ಬ್ಯಾಂಕ್ ಸಮಾಜ ಆಗದೆ ಪ್ರಗತಿಪರ ಸಮಾಜ ನಿರ್ಮಾಣವಾಗಬೇಕಿದೆ: ರಾಹುಲ್ ಜಾರಕಿಹೊಳಿ

Panchayat Swaraj Samachar News Desk.

ಬೆಳಗಾವಿ: ಸಂವಿಧಾನ ನಮಗೆ ಎಲ್ಲಾ ಹಕ್ಕುವನ್ನು ಕೊಟ್ಟಿದೆ ನಾವು ಬರೀ ವೋಟ್ ಬ್ಯಾಂಕ್ ಆಗದೆ ಒಂದು ಸಂಘಟಿತ ಪ್ರಗತಿಪರ ಚಿಂತನೆ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಹೇಳಿದರು.

133 ನೇ ವಿಶ್ವರತ್ನ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಕಾಂಗ್ರೆಸ್ಸಿನ ಯುವ ಮುಖಂಡ ರಾಹುಲ್ ಜಾರಕಿಹೊಳಿ ಅವರು ಬೆಳಗಾವಿ ನಗರದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನಕ್ಕೆ ಭೇಟಿ ನೀಡಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಅಭಿವಾದನ ಮಾಡಿ ಪಂಚಾಯತ್ ಸ್ವರಾಜ್ ಸಮಾಚಾರ ವಾಹಿನಿ ಜೊತೆ ಮಾತನಾಡಿದರು.  

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅವರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದಕ್ಕೆ ಒಂದು ಅರ್ಥವಿದೆ, ಇಲ್ಲದಲ್ಲಿ ಜಯಂತಿಗೆ ಯಾವುದೇ ಅರ್ಥವಿಲ್ಲ. ಯುವಕರು ಬಾಬಾ ಸಾಹೇಬರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಶಿಕ್ಷಣವೆಂದರೆ ಹುಲಿ ಹಾಲಿನಂತೆ ಅದನ್ನು ಕುಡಿದವನು ಘರ್ಜಿಸಲೇಬೇಕು ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ .

ಅದರಂತೆ ಶಿಕ್ಷಣ ಪಡೆದು ಪ್ರಗತಿಪರ ಸಮಾಜ ಕಟ್ಟಬೇಕಾಗಿದೆ . ಈ ಸಂದರ್ಭದಲ್ಲಿ 2024ರ ಲೋಕಸಭೆ ಚುನಾವಣೆ ಬೆಳಗಾವಿ ಜಿಲ್ಲೆಗೆ ಎರಡು ವಿದ್ಯಾವಂತರ ಯವ ಶಕ್ತಿ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಚಿಕ್ಕೋಡಿ ಹಾಗೂ ಬೆಳಗಾವಿ ಎರಡೂ ಲೋಕಸಭಾ ಕ್ಷೇತ್ರಗಳಿಗೆ ಹೆಚ್ಚಿನ ಅಭಿವೃದ್ಧಿ ಮತ್ತು ಹೊಸ ಯೋಜನೆಗಳನ್ನು ಇವರು ನೀಡಲಿದ್ದಾರೆ. ಯುವಶಕ್ತಿಗೆ ಹೊಸ ದಿಕ್ಸೂಚಿ ಈ ಚುನಾವಣೆ ಆಗಲಿದೆ ಎಂದು ರಾಹುಲ್ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Google News Join Facebook Live 24/7 Help Desk

Tags: