ಭಯೋತ್ಪಾದಕರಿಗೆ ಕಾಂಗ್ರೆಸ್‌ ಬಿರಿಯಾನಿ ತಿನ್ನಿಸುತ್ತಿದೆ: ಯೋಗಿ ಆದಿತ್ಯನಾಥ್‌ ಟೀಕೆ

Apr 8, 2024 - 13:51
 60
Google  News Join WhatsApp Join Telegram Live

ಭಯೋತ್ಪಾದಕರಿಗೆ ಕಾಂಗ್ರೆಸ್‌ ಬಿರಿಯಾನಿ ತಿನ್ನಿಸುತ್ತಿದೆ: ಯೋಗಿ ಆದಿತ್ಯನಾಥ್‌ ಟೀಕೆ

Panchayat Swaraj Samachar News Desk.

ಜೈಪುರ: ಕಾಂಗ್ರೆಸ್ ಬಡವರನ್ನು ಹಸಿವಿನಿಂದ ಸಾಯಿಸುತ್ತದೆ ಆದರೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುಮೇಧಾನಂದ ಸರಸ್ವತಿ ಪರ ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ರಾಜಸ್ಥಾನದ ಸಿಕರ್ ಕ್ಷೇತ್ರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ದೇಶದ ದೊಡ್ಡ ಸಮಸ್ಯೆ.‌ ಕರ್ಫ್ಯೂಗಳನ್ನು ಜಾರಿಗೊಳಿಸುವುದು ಕಾಂಗ್ರೆಸ್‌ನವರ ಡಿಎನ್‌ಎಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಭಗವಾನ್ ರಾಮ ಮತ್ತು ಕೃಷ್ಣರಂತಹ ಪೂಜ್ಯ ವ್ಯಕ್ತಿಗಳ ಅಸ್ತಿತ್ವವನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷವು ಅಯೋಧ್ಯೆ ರಾಮಮಂದಿರದಂತಹ ಸ್ಮಾರಕ ಯೋಜನೆಗಳನ್ನು ಕೈಗೊಳ್ಳಲು ಸಮರ್ಥವಾಗಿಲ್ಲ ಎಂದು ನಂಬುತ್ತಾರೆ. ತನ್ನ ಆಡಳಿತದಲ್ಲಿ ಕಾಂಗ್ರೆಸ್ ಜನರ ಹಕ್ಕುಗಳನ್ನು ಕಸಿದುಕೊಂಡಿತು. ಈಗ ರಾಷ್ಟ್ರದಾದ್ಯಂತ “ಫಿರ್ ಏಕ್ ಬಾರ್, ಮೋದಿ ಸರ್ಕಾರ್” ಎಂಬ ಒಂದೇ ಒಂದು ಘೋಷಣೆ ಇದೆ ಎಂದು ರಾಜಸ್ಥಾನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೌಸಾ ಜನರಿಂದ ತನಗೆ ದೊರೆತ ಬೆಂಬಲವನ್ನು ನೆನಪಿಸಿಕೊಳ್ಳುತ್ತಾ ಆದಿತ್ಯನಾಥ್ ಹೇಳಿದರು. 

Google News Join Facebook Live 24/7 Help Desk

Tags: