ಬೆಳಗಾವಿಯಲ್ಲಿ ಶೆಟ್ಟರ್ ಅಂಗಡಿ ಪ್ರಾರಂಭವಾಗಲಿದೆಯೇ..?

ವರದಿ: ರತ್ನಾಕರ್ ಗೌಂಡಿ

Mar 25, 2024 - 10:49
 77
Google  News Join WhatsApp Join Telegram Live

ಬೆಳಗಾವಿಯಲ್ಲಿ ಶೆಟ್ಟರ್ ಅಂಗಡಿ ಪ್ರಾರಂಭವಾಗಲಿದೆಯೇ..?

Panchayat Swaraj Samachar News Desk.

ಸುರೇಶ್ ಅಂಗಡಿ ಹಾಗೂ ಉಮೇಶ್ ಕತ್ತಿ ಅವರ ನಿಧನದ ನಂತರ ಬೆಳಗಾವಿ ಬಿಜೆಪಿಯಲ್ಲಿ ಶೂನ್ಯತೆ ಭಾವ ಮೂಡಿದೆ.ಈಗಿನ ಬೆಳಗಾವಿ ಬಿಜೆಪಿಯಲ್ಲಿ ನಾಯಕರ ಅಸಮನ್ವತೆ ಹಾಗೂ ಒಣ ಪ್ರತಿಷ್ಠೆಯಿಂದ ಬಿಜೆಪಿ ಕಾರ್ಯಕರ್ತರು ಬೆಸೆತ್ತು ಹೋಗಿದ್ದಾರೆ. ಸದ್ಯದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಾಯಕರುಗಳು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಲು ಆಕಾಂಕ್ಷಿಗಳಾಗಿದ್ದರು ಆದರೆ ನಾಯಕರಗಳ ಒಳ ಕಿತ್ತಾಟದಿಂದಾಗಿ ಬೆಳಗಾವಿ ಲೋಕಸಭಾ ಮತಕ್ಷೇತ್ರವು ಸ್ಥಳಿಯ ನಾಯಕರುಗಳಿಗೆ ಸಿಗದೆ ಅಧಿಕೃತ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೈಸೇರಿದೆ.

ಬಿಜೆಪಿ ಹೈಕಮಾಂಡ್ ಎರಡನೇ ಪಟ್ಟಿಯಲ್ಲಿ ಬೆಳಗಾವಿ ಅಭ್ಯರ್ಥಿಯಾಗಿ ಶೆಟ್ಟರ್ ಅವರನ್ನು ಘೋಷಣೆ ಮಾಡಿದೆ. ಇದರಿಂದಾಗಿ ಬೆಳಗಾವಿ ಬಿಜೆಪಿ ರಾಜಕಾರಣಕ್ಕೆ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. 2023ರಲ್ಲಿ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಜಗದೀಶ್ ಶೆಟ್ಟರ್ ಅವರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ನೀಡಲು ನಿರಾಕರಿಸಿದ್ದು ಆದ್ದರಿಂದ ಕೋಪಗೊಂಡ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಈಗ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಗೆ ಘರ್ ವಾಪಸಿ ಮಾಡಿದ್ದಾರೆ.

ಮರಳಿ ಬಿಜೆಪಿ ಸೇರಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಯಾಗುವುದರಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಬಿಜೆಪಿ ನಾಯಕ ಗೋಕಾಕ್ ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪಾತ್ರ ಪ್ರಮುಖವಾಗಿದೆ. ರಮೇಶ್ ಜಾರಕಿಹೊಳಿ ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಕರೆದುಕೊಂಡು ಬರುವುದಲ್ಲದೆ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದರಲ್ಲಿ ಸಫಲರಾಗಿದ್ದಾರೆ. ಕೆಲ ಬಿಜೆಪಿ ನಾಯಕರಗಳನ್ನು ರಾಜಕೀಯವಾಗಿ ದೂರಸರಿಸುವುದ್ರಲ್ಲಿ ಅವರ ತಂತ್ರಗಾರಿಕೆ ಬೆಳಗಾವಿಯಲ್ಲಿ ಸಫಲವಾಗಿದೆ.  

ರಮೇಶ್ ಜಾರಕಿಹೊಳಿ ಸೈಲೆಂಟಾಗಿ ಬಿಜೆಪಿಯಲ್ಲಿ ತಂತ್ರಗಾರಿಕೆಯ ಇಂದ ಅವರು ವಿರೋಧಿಗಳನ್ನು ಒಬ್ಬೊಬ್ಬರನ್ನಾಗಿ ರಾಜಕೀಯದಿಂದ ದೂರಸರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಗಿದೆ. ಶೆಟ್ಟರ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದಿಂದ ಪ್ರಭಾವಿ ಹಾಗೂ ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಗಳಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ‌. ಈ ಪೈಪೋಟಿ ರಾಜ್ಯದಲ್ಲಿ ಕುತೂಹಲ ಮೂಡಿಸಿದೆ.

 ಬೆಳಗಾವಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನು ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಾದ ಹಾಗೂ ಜಿಲ್ಲೆಯಲ್ಲಿ ತನ್ನದೇ ಶಕ್ತಿಯನ್ನು ಹಿಡಿದುಕೊಂಡಿರುವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಹಾಗೂ ಚಿಕ್ಕೋಡಿ ಈ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ಬೆಳಗಾವಿಯಲ್ಲಿ ಶೆಟ್ಟರ ಅಂಗಡಿ ಪ್ರಾರಂಭ ಆಗಲಿದೆಯೋ ಅಥವಾ ಹೆಬ್ಬಾಳ್ಕರ್ ಸಾಮ್ರಾಜ್ಯ ನಿರ್ಮಾಣವಾಗಲಿದೆಯೋ ಕಾದು ನೋಡಬೇಕಿದೆ

Google News Join Facebook Live 24/7 Help Desk

Tags: