ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ದೂರವಿಲ್ಲ : ಪ್ರಧಾನಿ ಮೋದಿ

Apr 12, 2024 - 13:07
 41
Google  News Join WhatsApp Join Telegram Live

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ದೂರವಿಲ್ಲ : ಪ್ರಧಾನಿ ಮೋದಿ

Panchayat Swaraj Samachar News Desk.

ಉಧಂಪುರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗಲಿದೆ, ವಿಧಾನಸಭೆ ಚುನಾವಣೆಗೆ ಸಮಯ ದೂರವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

 ಇಂದು ಜಮ್ಮು – ಕಾಶ್ಮೀರದ ಉಧಂಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ್ದಾರೆ. ಈ ಚುನಾವಣೆ ಕೇವಲ ಸಂಸದರನ್ನು ಆಯ್ಕೆ ಮಾಡುವ ಚುನಾವಣೆಯಲ್ಲ, ಇದು ದೇಶದಲ್ಲಿ ಪ್ರಬಲ ಸರ್ಕಾರವನ್ನು ರಚಿಸುವ ಚುನಾವಣೆಯಾಗಿದೆ. ಸರ್ಕಾರವು ಪ್ರಬಲವಾದಾಗ ಅದು ಉತ್ತಮ ಕೆಲಸ ಮಾಡುತ್ತದೆ. ನನ್ನನ್ನು ನಂಬಿ ಮತ್ತು 60 ವರ್ಷಗಳ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ, ಇಲ್ಲಿನ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಗೌರವವನ್ನು ಸಲ್ಲಿಸುವ ಅವಕಾಶವನ್ನು ನೀಡಬೇಕು. ನಾನು ಬಡವರಿಗೆ ಭರವಸೆ ನೀಡಿದ್ದೇನೆ. ಎರಡು ಹೊತ್ತಿನ ಊಟದ ಬಗ್ಗೆ ಚಿಂತಿಸಬೇಕಾಗಿಲ್ಲ, ಇಂದು ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಕುಟುಂಬಗಳು ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರವನ್ನು ಪಡೆಯಲಿದೆ ಎಂದರು.

ಮೋದಿ ಕಿ ಗ್ಯಾರಂಟಿ ಯಾನಿ ಗ್ಯಾರಂಟಿ ಪುರ ಹೋನೇ ಕಿ ಗ್ಯಾರಂಟಿ (ಮೋದಿ ಗ್ಯಾರಂಟಿ ಎಂದರೆ ಗ್ಯಾರಂಟಿಯನ್ನು ಪೂರೈಸುವ ಗ್ಯಾರಂಟಿ) ಈ ಹಿಂದೆ ಕಾಂಗ್ರೆಸ್ನ ದುರ್ಬಲ ಸರ್ಕಾರಗಳು ಶಹಪುರಕಂಡಿ ಅಣೆಕಟ್ಟನ್ನು ದಶಕಗಳಿಂದ ಹೇಗೆ ಸ್ಥಗಿತಗೊಳಿಸಿದ್ದವು ಎಂಬುದು ನಿಮಗೆ ನೆನಪಿದೆ. ಜಮ್ಮುವಿನ ರೈತರ ಹೊಲಗಳು ಒಣಗಿತ್ತು ಮತ್ತು ಹಳ್ಳಿಗಳು ಕತ್ತಲೆಯಲ್ಲಿತ್ತು, ನಮ್ಮ ರವಿಯ ನೀರು ಪಾಕಿಸ್ತಾನಕ್ಕೆ ಹೋಗುತ್ತಿದೆ. ಇದನ್ನೆಲ್ಲ ಸರಿ ಮಾಡಬೇಕಿದೆ. ಈಗಾಗಲೇ ರೈತರ ಬೇಡಿಕೆಗಳನ್ನು ಈಡೇರಿಸಿದ್ದೇನೆ ಎಂದರು.

Google News Join Facebook Live 24/7 Help Desk

Tags: