LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

10 ಲಕ್ಷ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ – ಕುಕ್ಕರ್‌ನಿಂದ ಹಲ್ಲೆ ಮಾಡಿ ಹತ್ಯೆ

Advertisement
Advertisement

ಕೋಲಾರ: ವ್ಯಕ್ತಿಯೊಬ್ಬ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕುಕ್ಕರ್‌ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಕೋಲಾರದ  ಹಸಾಳ ಗ್ರಾಮದಲ್ಲಿ ನಡೆದಿದೆ.

ಸಹನಾ (24) ಪತಿಯಿಂದ ಹತ್ಯೆಯಾದ ಮಹಿಳೆ. ಮಂಜುನಾಥ್ ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ದಂಪತಿಗೆ ಮದುವೆಯಾಗಿ 5 ವರ್ಷ ಕಳೆದಿದ್ದು, ಇಬ್ಬರು ಗಂಡುಮಕ್ಕಳಿದ್ದಾರೆ. ಈತ ಮದುವೆಯಾದಾಗಿನಿಂದ ಪದೇ ಪದೇ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈ ಹಿಂದೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು 2 ಲಕ್ಷ ರೂ. ಪಡೆದಿದ್ದನಂತೆ. ಅಲ್ಲದೇ ಮನೆ ಕಟ್ಟೋದಕ್ಕೆ 10 ಲಕ್ಷ ರೂ. ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದನಂತೆ. 

ಹಣಕ್ಕಾಗಿ ಪದೇ ಪದೇ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಈ ಹಿಂದೆಯೂ ಹಲವು ನ್ಯಾಯ ಪಂಚಾಯಿತಿಗಳು ಸಹ ನಡೆದು ಇಬ್ಬರನ್ನು ಒಂದು ಮಾಡಲಾಗಿತ್ತು. ಜೂ.17 ರಂದು ಸಹನಾ ತಾಯಿ ಜಯಮ್ಮಗೆ ವಿಡಿಯೋ ಕಾಲ್ ಮಾಡಿ ಅಮ್ಮ ನನ್ನ ಹೊಡೆಯುತ್ತಿದ್ದಾರೆ. ನೋಡು ಮೂಗಲ್ಲಿ ರಕ್ತ ಬರುತ್ತಿದೆ ಎಂದು ಹೇಳಿಕೊಂಡಿದ್ದಳು. ಅದೇ ದಿನ ರಾತ್ರಿ ವೇಳೆ ಕುಕ್ಕರ್ ಸೇರಿದಂತೆ ಪಾತ್ರೆಗಳಲ್ಲಿ ತಲೆ ಮೇಲೆ ಮಂಜುನಾಥ್ ಹಲ್ಲೆ ಮಾಡಿದ್ದಾನೆ. ಪ್ರಜ್ಞೆತಪ್ಪಿ ಬೀಳುತ್ತಿದ್ದಂತೆ ನೇಣು ಬಿಗಿದಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನಾನಂದ ಶ್ರೀ ಜಾಮೀನು ರದ್ದತಿ ಅರ್ಜಿ ಅದೇಶ ಜೂನ್ 30ಕ್ಕೆ ಮುಂದೂಡಿಕೆಅನುಮಾನ ಏನಿಲ್ಲ, ನಮ್ಮಪ್ಪ ಜೆಡಿಎಸ್‌ಗೆ ಮತ ಹಾಕಿದ್ದಾರೆ – ಪುತ್ರ ಹರೀಶ್‌ ಗೌಡ ವಿಶ್ವಾಸಕರ್ನಾಟಕ ಹೆಚ್ಚುವರಿ ಕಾವೇರಿ ನೀರನ್ನು ಮಾತ್ರ ಹರಿಸುತ್ತಿದೆ – ವಿಜಯ್‌ ಸರ್ಕಾರದ ಕ್ಯಾತೆಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ10 ಲಕ್ಷ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ – ಕುಕ್ಕರ್‌ನಿಂದ ಹಲ್ಲೆ ಮಾಡಿ ಹತ್ಯೆನೀಟ್ ಮರುಪರೀಕ್ಷೆಗೂ ಮುನ್ನ ಡೆತ್‌ನೋಟ್‌ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆಮೇಕೆದಾಟು ಹಾರ್ಟ್‌ ಆಫ್‌ ಡಿ.ಕೆ.ಶಿವಕುಮಾರ್‌ ಅಲ್ಲ, ಹಾರ್ಟ್‌ ಆಫ್‌ ದಕ್ಷಿಣ ಭಾರತ: ಸಿಎಂ ಖೇತ ಬಚಾವೂ ಅಭಿಯಾನ ಮತ್ತು ಆತ್ಮ ಯೋಜನೆಯಡಿಯಲ್ಲಿ ರೈತರ ತರಬೇತಿ ಕಾರ್ಯಕ್ರಮಲಕ್ಷ್ಮಣ್ ಸವದಿ "ಘರವಾಪಸಿ" ಬಿಜೆಪಿ ನಾಯಕರ ಗಳಿಂದಲೇ ವಿರೋಧವಾರ್ಡ್ ಸಂಖ್ಯೆ 4ರಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ; ಅನಿಲ್ ಬೆನಕೆ ಅವರಿಂದ ಮಾರ್ಗದರ್ಶನ