ಬೆಳಗಾವಿ : ಅಥಣಿ ಶಾಸಕ ಲಕ್ಷ್ಮಣ್ ಸವದಿ ಬಿಜೆಪಿಗೆ ಘರವಾಪಸಿ ಕುರಿತು ಬಿಜೆಪಿ ನಾಯಕರುಗಳಲ್ಲಿ ವಿರೋಧ ವ್ಯಕ್ತ ಆದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಪಂಚಾಯತ್ ಸ್ವರಾಜ್ ಸಮಾಚಾರ ದೊಂದಿಗೆ ಮಾತನಾಡುತ್ತಾ ಇದು ಉನ್ನತ ಮಟ್ಟದ ಪ್ರಶ್ನೆ ವಾಗಿದೆ
ಮಾಜಿ ಸಚಿವ ನಿರಾಣಿ ಅವರು ಎಲ್ಲಾ ಬಿಜೆಪಿ ನಾಯಕರುಗಳು ಮತ್ತೆ ಘರ್ ವಾಪಸಿ ಆದರೆ ಪಕ್ಷ ಸಂಘಟನೆಗೆ ಬಲಬಂದಂತೆ ಆಗುತ್ತದೆ ಎಂದು ಹೈಕಮಾಂಟಿಗೆ ಮನವಿ ಮಾಡಿಕೊಂಡಿದ್ದರು ಬಿಜೆಪಿ ವಲಯದಲ್ಲಿ ಈಗಾಗಲೇ ಪಕ್ಷದಿಂದ ದೂರು ಉಳಿದ ನಾಯಕರುಗಳನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದರಲ್ಲಿ ರಾಜ್ಯದಲ್ಲಿ ಗುಸು-ಗುಸು ಮಾತುಕತೆ ನಡೆಯುತ್ತಿದೆ ಅದರಲ್ಲಿ ಪ್ರಮುಖವಾಗಿ ಶಾಸಕ ಲಕ್ಷ್ಮಣ್ ಸೌದಿ ಹಾಗೂ ವಿಜಯಪುರ ಶಾಸಕ ಬಸವರಾಜ್ ಯತ್ನಾಳ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದ ರ ಕುರಿತು ಕೆಲ ನಾಯಕರುಗಳ ಉನ್ನತ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಆದರೆ ಪಕ್ಷ ಹಾಗೂ ರಾಜ್ಯ ಬಿಜೆಪಿ ಘಟಕ ಹೈಕಮಾಂಡ್ ಯಾವ ರೀತಿ ನಿರ್ಣಯ ಕೈಗೊಳ್ಳುತ್ತದೆ ಅದನ್ನು ಪಾಲಿಸುವುದೇ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದು ಬಿಜೆಪಿ ರಾಜ ಉಪಾಧ್ಯಕ್ಷ ಅನಿಲ್ ಬೆನಕೆ ಅಭಿಪ್ರಾಯ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ನಡೆಯುತ್ತಿರುವ ಚರ್ಚೆ ಮಾತನಾಡುತ್ತಾ ಸರ್ಕಾರ ಗ್ಯಾರಂಟಿ ಯೋಜನೆಗಳು ಬರಿ ನಾಮಕ್ಕೆ ವಾಸ್ತೆ ನಡೆಸುತ್ತಾ ಇದೆ ಒಂದು ಲಕ್ಷ ಜನ ಇದ್ದರೆ ಅದಕ್ಕೆ 30,000 ಜನಕ್ಕೆ ನೀಡಿ ನಾವು 100% ಗ್ಯಾರೆಂಟಿ ನೀಡುತ್ತಾ ಇದ್ದೇವೆ ಎಂದು ಸರ್ಕಾರ ಜನರಿಗೆ ಮೋಸ ಮಾಡುತ್ತಾ ಇದೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಅದರಲ್ಲಿ ಹೊಸ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಘೋಷಣೆ ಮಾಡಿರುವ ಮತ್ತೆರಡು ಯೋಜನೆಗಳು ಕೂಡ ಅನುಷ್ಠಾನದ ಅನುಮಾನಗಳು ಇದೆ ಸಂದರ್ಭದಲ್ಲಿ ಸರ್ಕಾರದ ನೀತಿಗಳನ್ನು ಕಟುವಾಗಿ ಟೀಕಿಸಿದರು
ವರದಿ ರತ್ನಾಕರ ಗೌಂಡಿ ಬೆಳಗಾವಿ




