LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೀಟ್ ಮರುಪರೀಕ್ಷೆಗೂ ಮುನ್ನ ಡೆತ್‌ನೋಟ್‌ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

Advertisement
Advertisement

ಡೆಹ್ರಾಡೂನ್: ನೀಟ್  ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 23 ವರ್ಷದ ಯುವತಿ  ಡೆತ್‌ನೋಟ್‌  ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ.

 

ಮೃತ ಯುವತಿಯನ್ನು ರಿಯಾ ಕುಮಾರಿ ಎಂದು ಗುರುತಿಸಲಾಗಿದೆ. ರಿಯಾ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಪಿಯುಸಿಯಲ್ಲಿ ಶೇ.96.7 ಅಂಕ ಗಳಿಸಿ ಕಾಲೇಜ್‌ ಟಾಪರ್‌ ಕೂಡ ಆಗಿದ್ದರು. ನೀಟ್‌ ಮರುಪರೀಕ್ಷೆ ಕುರಿತು ಒತ್ತಡದಲ್ಲಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. 

ಘಟನೆ ನಡೆದ ದಿನ ತಾಯಿ ಊಟಕ್ಕೆ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ರಿಯಾ ಮೃತಪಟ್ಟಿರುವುದು ಕಂಡುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿಯ ಕೋಣೆಯಲ್ಲಿ ಡೆತ್‌ನೋಟ್‌ ಕೂಡ ಸಿಕ್ಕಿದೆ.

 


ಡೆತ್‌ನೋಟ್‌ನಲ್ಲಿ ರಿಯಾ, ʼಅಮ್ಮ ಅಪ್ಪ ಐ ಲವ್‌ ಯೂ.. ನಿಮಗೆ ಭಾರವಾಗಿದ್ದಕ್ಕೆ ಕ್ಷಮಿಸಿ. ಇದು ಯಾರ ತಪ್ಪೂ ಅಲ್ಲ, ಇದು ನನ್ನದೇ ಆದ ಅಸಮರ್ಥತೆ. ಇದನ್ನು ಕೊನೆಗೊಳಿಸುವುದೇ ಉತ್ತಮ ಆಯ್ಕೆ. ನಾನು ನಿನ್ನನ್ನು ಪ್ರೀತಿಸುತ್ತೇನೆ.. ಕ್ಷಮಿಸಿ. ಎಂದು ಬರೆದಿದ್ದಾಳೆ. 

ಡೆಹ್ರಾಡೂನ್ ಸರ್ಕಲ್‌ ಆಫೀಸರ್‌ ಅಂಕಿತ್ ಕಂಡಾರಿ ಮಾತನಾಡಿ, ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನಾನಂದ ಶ್ರೀ ಜಾಮೀನು ರದ್ದತಿ ಅರ್ಜಿ ಅದೇಶ ಜೂನ್ 30ಕ್ಕೆ ಮುಂದೂಡಿಕೆಅನುಮಾನ ಏನಿಲ್ಲ, ನಮ್ಮಪ್ಪ ಜೆಡಿಎಸ್‌ಗೆ ಮತ ಹಾಕಿದ್ದಾರೆ – ಪುತ್ರ ಹರೀಶ್‌ ಗೌಡ ವಿಶ್ವಾಸಕರ್ನಾಟಕ ಹೆಚ್ಚುವರಿ ಕಾವೇರಿ ನೀರನ್ನು ಮಾತ್ರ ಹರಿಸುತ್ತಿದೆ – ವಿಜಯ್‌ ಸರ್ಕಾರದ ಕ್ಯಾತೆಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ10 ಲಕ್ಷ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ – ಕುಕ್ಕರ್‌ನಿಂದ ಹಲ್ಲೆ ಮಾಡಿ ಹತ್ಯೆನೀಟ್ ಮರುಪರೀಕ್ಷೆಗೂ ಮುನ್ನ ಡೆತ್‌ನೋಟ್‌ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆಮೇಕೆದಾಟು ಹಾರ್ಟ್‌ ಆಫ್‌ ಡಿ.ಕೆ.ಶಿವಕುಮಾರ್‌ ಅಲ್ಲ, ಹಾರ್ಟ್‌ ಆಫ್‌ ದಕ್ಷಿಣ ಭಾರತ: ಸಿಎಂ ಖೇತ ಬಚಾವೂ ಅಭಿಯಾನ ಮತ್ತು ಆತ್ಮ ಯೋಜನೆಯಡಿಯಲ್ಲಿ ರೈತರ ತರಬೇತಿ ಕಾರ್ಯಕ್ರಮಲಕ್ಷ್ಮಣ್ ಸವದಿ "ಘರವಾಪಸಿ" ಬಿಜೆಪಿ ನಾಯಕರ ಗಳಿಂದಲೇ ವಿರೋಧವಾರ್ಡ್ ಸಂಖ್ಯೆ 4ರಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ; ಅನಿಲ್ ಬೆನಕೆ ಅವರಿಂದ ಮಾರ್ಗದರ್ಶನ