ಜಲಾನಯನ ಅಭಿವೃದ್ಧಿ ಇಲಾಖೆ ಜಿಲ್ಲಾಡಳಿತ ಬೆಳಗಾವಿ ಜಿಲ್ಲೆ PMKSY -WDC 2.0 ಯೋಜನೆ ಅಡಿಯಲ್ಲಿ
ಮರುಭೂಮಿಕರಣ ಮತ್ತು ಬರ ಎದುರಿಸುವ ವಿಶ್ವ ದಿನ ಆಚರಣೆಯನ್ನು 17 6 2026ರಂದು ಚಿಕ್ಕೋಡಿ ತಾಲೂಕಿನ ಕೊಥಳಿ ಗ್ರಾಮದಲ್ಲಿ ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಬೆಳಗಾವಿ ಕೃಷಿ ಇಲಾಖೆ ಚಿಕ್ಕೋಡಿ ICAR -BIRDS ಕೃಷಿ ವಿಜ್ಞಾನ ಕೇಂದ್ರ ತುಕಾನಟ್ಟಿ ಮತ್ತು ಗ್ರಾಮ ಪಂಚಾಯಿತಿ ಕೋಥಳಿ. ಇವರ ಸಂಯುಕ್ತ ಆಶ್ರಯದಲ್ಲಿ
ಖೇತ ಬಚಾವೂ ಅಭಿಯಾನ ಮತ್ತು ಆತ್ಮ ಯೋಜನೆಯಡಿಯಲ್ಲಿ ರೈತರ ತರಬೇತಿ ಕಾರ್ಯಕ್ರಮ ಜರುಗಿತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು HD ಕೊಳೇಕರ್. ಜಂಟಿ ಕೃಷಿ ನಿರ್ದೇಶಕರು ಬೆಳಗಾವಿ ವಹಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ನೀರನ್ನು ಮಿತವಾಗಿ ಬಳಕೆ ಮಾಡಬೇಕು ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ಬಳಕೆ ಮಾಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ರೈತರು ಸಮಗ್ರ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಸರ್ಕಾರದಿಂದ ಸೌಲಭ್ಯಗಳನ್ನು ಅಧಿಕಾರಿಗಳಿಂದ ಸಲಹೆ ಪಡೆಯಬೇಕು ರೈತರು ಆರ್ಥಿಕವಾಗಿ ಸದೃಢವಾಗಬೇಕು ಒಂದು ಕುಟುಂಬಕ್ಕೆ ಒಂದು ಗಿಡ ನೆಡಬೇಕು , ಮಳೆ ನೀರನ್ನು ಸಂಗ್ರಹಣೆ ಮಾಡಬೇಕು ಇದಕ್ಕಾಗಿ ಬದು ನಿರ್ಮಾಣ. ಕೃಷಿ ಹೊಂಡ. ಚೆಕ್ ಡ್ಯಾಮ್. ಮುಖಾಂತರ ನೀರನ್ನು ಸಂಗ್ರಹಣೆ ಮಾಡಬೇಕು. ಮತ್ತು ರೈತರು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅನುಸರಣೆ ಮಾಡಬೇಕು ಇದರಿಂದಾಗಿ ಕಡಿಮೆ ಪ್ರಮಾಣದ ನೀರಿನಲ್ಲಿ ಹೆಚ್ಚು ಇಳಿಯುವರವನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ HD ಕೊಳೇಕರ್ ಜಂಟಿ ಕೃಷಿ ನಿರ್ದೇಶಕರು ಬೆಳಗಾವಿ, ಗೋಪಾಲ್ ಕೃಷ್ಣ ಗೌಡರ್ DYSP ಚಿಕ್ಕೋಡಿ, ಸಹದೇವ್ ಯೆರಗೊಪ್ಪ ಉಪ ಕೃಷಿ ನಿರ್ದೇಶಕರು ಚಿಕ್ಕೋಡಿ, ಬಸವರಾಜ್ ದಳವಾಯಿ ಸಹಾಯಕ ಕೃಷಿ ನಿರ್ದೇಶಕರು ಚಿಕ್ಕೋಡಿ ,ದತ್ತಾ ಮೇತ್ರಿ . ಕೃಷಿ ವಿಜ್ಞಾನ ಕೇಂದ್ರ ತುಕಾನಟ್ಟಿ , ಜಿತೇಂದ್ರ ಪಾಟೀಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೋಥಳಿ, ರಾಜು ಕಾಂಬಳೆ, ಅಣ್ಣಸಾಹೇಬ್ ಚೌಗುಲೆ ಕೃಷಿ ಅಧಿಕಾರಿ ತಾಂತ್ರಿಕ 2. ಉಪ ಕೃಷಿ ನಿರ್ದೇಶಕರು ಚಿಕ್ಕೋಡಿ ಹಾಗೂ ಈ ಸಂದರ್ಭದಲ್ಲಿ ದೇಶಭೂಷಣ ಪ್ರೌಢಶಾಲೆ ಮುಖ್ಯಸ್ಥರು ಮತ್ತು ಶಿಕ್ಷಣವೃಂದದವರು. ವಿದ್ಯಾರ್ಥಿಗಳುಕೋಥಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು. ಹಾಗೂ ಗ್ರಾಮದ ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ವರದಿ
ಕಿರಣ ಹಕ್ಯಾಗೊಳ
ಚಿಕ್ಕೋಡಿ




