LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಕೆ ಕಂಗ್ರಾಳಿ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಸಿದ್ಧತೆ

Advertisement
ಬೆಳಗಾವಿ ತಾಲ್ಲೂಕಿನ ಬಿಕೆ ಕಂಗ್ರಾಳಿ ಗ್ರಾಮದ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಸಿದ್ದತೆ ನಡೆಯುತ್ತಿದ್ದುವಗ್ರಾಮ ಪಂಚಾಯತಿ ವತಿಯಿಂದ ಮೂಲಭೂತ ಸೌಕರ್ಯಗಳ ಕುರಿತಾದ ಕಾಮಗಾರಿಗಳ ಪರಿಶೀಲನೆ ಕೈಗೊಳ್ಳಲಾಯಿತು. ನೇತಾಜಿ ಗಲ್ಲಿಯಲ್ಲಿ ರಸ್ತೆ ಅತಿಕ್ರಮನ ತೆರವುಗೊಳಿಸಿ ಸಾರ್ವಜನಿಕರಿಗೆ ಸಂಚಾರಿಸಲು ಸುಗಮ ಮಾಡಿಕೊಡಲಾಗಿದ್ದು ಜಾತ್ರೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಗ್ರಾಮದ ಪ್ರತಿ ಗಲ್ಲಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗಿದ್ದು ಗ್ರಾಮದ ಪ್ರತಿ ಗಲ್ಲಿಗಳಲ್ಲಿ ವಿದ್ಯುತ್ ಹಾಗೂ ವಿದ್ಯುತ್ ದೀಪಗಳ ಕುರಿತು ಪರಿಶೀಲನೆ ನಡೆಸಲಾಗಿದೆ.

ಜಾತ್ರಾ ನಿಮಿತ್ತವಾಗಿ ವಾಹನ ನಿಲುಗಡೆ ವ್ಯವಸ್ಥೆ ಪೂದ್ದಾರ ಲೇಔಟ್ ಸಾಯಿ ಮಂದಿರ ಪರಿಸರ ಹಾಗೂ ಶಾಹೂನಗರ ಪರಿಸರದಲ್ಲಿ ಬಸ್ ನಿಲ್ದಾಣ ಹಾಗೂ ವಿಶೇಷ ವಾಹನಗಳ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಮುಂಜಾಗ್ರತಾ ಕ್ರಮವಾಗಿ ಹಳೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಉಪ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ‌ ಶಾಂತಿ ಸುವ್ಯವಸ್ಥೆಗೆ ಗ್ರಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.



 

ಇನ್ನು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿ ಮನೆಗೆ ಕಸದ ಚೀಲಗಳನ್ನು ವಿತರಿಸಲಾಗುತ್ತಿದ್ದು ಅದರಲ್ಲಿ ಕಸ ಸಂಗ್ರಹಿಸಲು ತಿಳಿಸಲಾಗಿದೆ. ಕಸವಿಲೆವಾರಿಗೆ ಪ್ರತಿದಿನ ಪಂಚಾಯತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
ಕಸ ವಿಲೇವಾರಿಗೆ ಐದು ವಾಹನಗಳನ್ನು ನಿಯೋಜಿಸಲಾಗಿದೆ. ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ‌. ಒಂದು ಗ್ರಾಮ ಪಂಚಾಯತ್ ಕಚೇರಿ ಎದುರುಗಡೆ ಇನ್ನೊಂದು ಮರಾಠಿ ಪ್ರಾಥಮಿಕ ಶಾಲೆ ಎದುರುಗಡೆ
ಗ್ರಾಮದ ಮುಖ್ಯ ಕೆರೆಯನ್ನು ಸೌಂದರ್ಯೀಕರಣ ಗೋಸ್ಕರ ಬಣ್ಣ ಸುಣ್ಣ ವ್ಯವಸ್ಥೆ ಮಾಡಲಾಗುತ್ತಿದೆ.



ಸರಕಾರಿ ಇಲಾಖೆಗಳ ಯೋಜನೆಗಳು ಹಾಗೂ ಗ್ರಾಮ ಪಂಚಾಯತ್ ಯೋಜನೆಗಳ ಕುರಿತು ಭಿತ್ತಿ ಪತ್ರ ಗಳನ್ನು ಅಳವಡಿಸಲಾಗುತ್ತಿದೆ‌ ಜಾತ್ರಾ ಕಮಿಟಿ ಅವಶ್ಯಕತೆಗೆ ಅನುಗುಣವಾಗಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗುತ್ತಿದೆ. ನೀರಿನ ಟ್ಯಾಂಕರ್ ಗಾಗಿ ಕಾಕತಿ,ಕೆಎಚ ಕಂಗ್ರಾಳಿ, ಹೂನಗಾ, ಬೀಗರಣಿ ಸೇರಿದಂತೆ 5 ಗ್ರಾಮ್ ಪಂಚಾಯ್ತಿಗಳಿಂದ ಸಹಾಯ ಕೇಳಲಾಗಿದೆ.



ಸಚಿವೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಚ್ಚುವರಿಯ ಅನುದಾನದ ಅಡಿಯಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ.
ಇದು ಗ್ರಾಮ ಪಂಚಾಯತ್ ಕೈಗೊಂಡಿರುವ ಕ್ರಮಗಳಾದರೆ ಜಾತ್ರಾ ಮಹೋತ್ಸವ ಕಮಿಟಿ ಕೂಡ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಯರಾಮ್ ಪಾಟೀಲ್ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವ ಕಮಿಟಿ ಗ್ರಾಮದೇವಿಯ ಜಾತ್ರೆಯ ಪೂಜಾ ವಿಧಿ ವಿಧಾನಗಳು ಹಾಗೂ ಜಾತ್ರೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳತ್ತಿದೆ. ಏಪ್ರಿಲ್ 28ರಿಂದ ಮೇ 6 ಆರರವರೆಗೆ ಜಾತ್ರೆ ನಡೆಯಲಿದ್ದು ಅದಕ್ಕಾಗಿ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಹಾಗೂ ಸ್ವಯಂಸೇವಕರ ತಂಡಗಳನ್ನು ಶಾಂತಿ ಹಾಗೂ ಸುರಕ್ಷತೆಯ ಸಲುವಾಗಿ ನಿಯೋಜಿಸಲಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರ್ನಾಲ್ಕು ದಿನಗಳಿಂದ ಮಳೆ ಬರುತ್ತಿರುವುದರಿಂದ ಆಶಾಭಾವ ಮೂಡಿದೆ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೂಳಿಬೆಂಗಳೂರಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ – ಮಾರಕಾಸ್ತ್ರಗಳು ಪತ್ತೆಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ 1,470 ಕ್ಯೂಸೆಕ್ ಒಳಹರಿವುರಾಜ್ಯದ ಹಲವೆಡೆ 2-3 ದಿನ ಮಳೆ ಮುನ್ಸೂಚನೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮಜೈಶ್‌ ಉಗ್ರರ ಜೊತೆ ನಂಟು; ಗುಜರಾತಲ್ಲಿ 8 ಮಂದಿ ಅರೆಸ್ಟ್‌ಪತಿಯ ಕೊಂದು ಬಾತ್ ರೂಂನಲ್ಲೇ ಹೂತಿದ್ದ ಪತ್ನಿಬಿಎಲ್‌ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಭರ್ತಿ ಮಾಡಿಸ್ತಿದ್ದಾರೆ: ಸಾ.ರಾ.ಮಹೇಶ್ ಆರೋಪಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲುSIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಅಪಘಾತ – ವಿಎ ಸಾವು ಬದುಕಿನ ನಡುವೆ ಹೋರಾಟ