ಮರಾಠ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡಲು ರಾಷ್ಟ್ರೀಯ ಮರಾಠ ಪಾರ್ಟಿ ಬದ್ಧವಾಗಿದೆ

Mar 28, 2024 - 14:02
 20
Google  News Join WhatsApp Join Telegram Live

ಮರಾಠ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡಲು ರಾಷ್ಟ್ರೀಯ ಮರಾಠ ಪಾರ್ಟಿ ಬದ್ಧವಾಗಿದೆ

Panchayat Swaraj Samachar News Desk.

ಮರಾಠ ಸಮಾಜಕೆ ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡುತ್ತಿದ್ದು ಅದನ್ನು ಖಂಡಿಸಿ ರಾಷ್ಟ್ರೀಯ ಮರಾಠ ಪಾರ್ಟಿ ಪ್ರಪ್ರಥಮ ಬಾರಿಗೆ 10 ಲೋಕಸಭಾ ಕ್ಷೇತ್ರಗಳಿಗೆ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಲೋಕಸಭಾ ಅಖಾಡಕ್ಕೆ ತಿಳಿಸಲಾಗುತ್ತಿದೆ ಕೆಲವು ರಾಜ್ಯಗಳಲ್ಲಿ ಮರಾಠಿಗರಿಗೆ ಹಿಂದುಗಳಿದ ವರ್ಗದವರಿಗೆ ದಲಿತರಿಗೆ ಅಲ್ಪಸಂಖ್ಯಾತರಿಗೆ ವಿಧಾನಸಭೆಯಲ್ಲಿ ಮತ್ತು ಲೋಕಸಭೆಯಲ್ಲಿ ವಿಧಾನಪರಿಷತ್ ನಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನವರು ಸರಿಯಾದ ಸ್ಥಾನ ಮಾನ ನೀಡುತ್ತಿಲ್ಲ.  

ಈ ಸಮಾಜಕ್ಕೆ ನ್ಯಾಯ ದೊರಕಿಸುವ ಸಲುವಾಗಿ ಹಾಗೂ ಬಡವರಿಗೆ ಕೂಲಿ ಕಾರ್ಮಿಕರಿಗೆ ರೈತ ವ್ಯಾಪಿ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಲೋಕಸಭೆಯಲ್ಲಿ ದನಿಯತ್ತಲು ರಾಷ್ಟ್ರೀಯ ಮರಾಠ ಪಾರ್ಟಿಯನ್ನು ರಚಿಸಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ 10 ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು

ಕಣಕ್ಕೆಇಳಿಸಲು ನಿರ್ಣಯ ಮಾಡಲಾಗಿದೆ.ಅದರಂತೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಈಶ್ವರ್ ರುದ್ರಪ್ಪ ಗಾಡಿ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ ದಿಂದ ವಿನೋದ್ ಸಾಳಂಕೆ ,ಅವರನ್ನು ಕಣಕ್ಕಿಳಿಸಲಾಗಿದೆ ಅದರಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಶಾಮ್ ಸುಂದರ್ ಗಾಯಕವಾಡಡ ಧಾರವಾಡ ಲೋಕಸಭಾ ಕ್ಷೇತ್ರದಿಂದ ಜಿ.ಡಿ ಘೋರ್ಪಡೆ ,ಹಾವೇರಿ ಲೋಕಸಭಾ ಕ್ಷೇತ್ರದಿಂದ ನಾರಾಯಣ್ ಗಾಯಕವಾಡ ಬೀದರ್ ಲೋಕಸಭಾ ಕ್ಷೇತ್ರದಿಂದ ವಿಜಯ್ ಕುಮಾರ್ ಪಾಟೀಲ್ ಬಾಗಲಕೋಟ್ ಲೋಕಸಭಾ ಕ್ಷೇತ್ರದಿಂದ ಶ್ರೀಕಾಂತ್ ಮುಧೋಳ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ದೇವರಾಜ್ ಶಿಂಧೆ ಎಂ ಬಿ ಮೀಸಲ ಕ್ಷೇತ್ರಗಳಾದ ಬಿಜಾಪುರ್ ಮತ್ತು ಗುಲ್ಬರ್ಗ ಕ್ಷೇತ್ರಗಳಿಗೆ ಆದಷ್ಟು ಬೇಗ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಮರಾಠ ಪಕ್ಷದ ಅಧ್ಯಕ್ಷರಾದ ಮನೋಹರ್ ರಾವ್ ಜಾದವ್ ಸುದ್ದಿಗಾರರಿಗೆ ತಿಳಿಸಿದರು

 ಈ ಸಂದರ್ಭದಲ್ಲಿ ಈಶ್ವರ್ ಗಾಡಿ, ವಿನೋದ್ ಸಾಳುಂಕೆ,ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: