ಬೆಳಗಾವಿಯಲ್ಲಿ ಮಧ್ಯಾಹ್ನ 3:00 ವರೆಗೆ 53 . 14% ಮತದಾನ

May 7, 2024 - 17:46
 52
Google  News Join WhatsApp Join Telegram View ePaper

ಬೆಳಗಾವಿಯಲ್ಲಿ ಮಧ್ಯಾಹ್ನ 3:00 ವರೆಗೆ 53 . 14% ಮತದಾನ

Panchayat Swaraj Samachar News Desk.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಪ್ರಾರಂಭವಾಗಿತ್ತು ಬೆಳಗಾವಿ ಉತ್ತರ ,ದಕ್ಷಿಣ , ಗ್ರಾಮೀಣ, ಚುರುಕಿನ ಮತದಾನ ಪ್ರಾರಂಭವಾಗಿದ್ದು ಬೆಳಗ್ಗೆ 11 ಗಂಟೆವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತಭೂತ ಘಟಕಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

 ನಗರ ಪ್ರದೇಶಗಳಲ್ಲಿ ಗಾಂಧಿನಗರ ,ಶಹೂ ನಗರ, ಶಹಪುರ್ ವಡಗಾವ್ ಹಿಂಡಲಗಾ, ಗಣೇಶ್ ಪುರ್ ಹೆಚ್ಚಿನ ಸಂಖ್ಯೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವ ದೃಶ್ಯಗಳು ಕಂಡುಬಂದಿತ್ತು 

ಮಾಂತೇಶ್ ನಗರ ,ಶಿವ ಬಸವ ನಗರ ,ನೆಹರು ನಗರ್, ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು ಮಧ್ಯಾಹ್ನ 3:00 ವರೆಗೆ 53.14% ಹೊರಗೆ ಮತದಾನ ಮುಗಿದಿತ್ತು ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರುವುದು ಸಮಾಧಾನಕರ ವಿಷಯವಾಗಿದೆ ಸಾಯಂಕಾಲ ಸಂಜೆವರೆಗೆ ಸುಮಾರು 70 % ವರೆಗೆ ಮತದಾನ ಆಗುವ ನಿರೀಕ್ಷೆ ಇದೆ

ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತದಾನ ಬೂತುಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು ಸಂಸದೆ ಮಂಗಳ ಅಂಗಡಿ ಹಾಗೂ ಶ್ರದ್ಧ ಶೆಟ್ಟರ್ ವಿಶ್ವೇಶ್ವರಯ್ಯ ನಗರ ದಲ್ಲಿ ಮತದಾನ ಮಾಡಿ ಮತದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತ ಚಲಾಯಿಸುತ್ತಿರುವುದು ನಮಗೆ ಸಂತೋಷ ವ್ಯಕ್ತವಾಗಿದೆ ಎಂದು ಸಂಸದೆ ಮಂಗಳ ಅಂಗಡಿ ತಮ್ಮ ಹರ್ಷ ವ್ಯಕ್ತಪಡಿಸಿದರು. ಅದರಂತೆ ಮೂರನೆಯ ಬಾರಿ ಪ್ರಧಾನಮಂತ್ರಿ ಮೋದಿ ಅವರನ್ನು ನೋಡುವ ಇಚ್ಛೆ ದೇಶದ ಜನತೆಗೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮೀಣ ಮತಕ್ಷೇತ್ರದಲ್ಲಿ ಕುಟುಂಬ ಸಮೇತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ಸಿನ ಅಭ್ಯರ್ಥಿಯಾದ ಮೃಣಾಲ್ ಹೆಬ್ಬಲ್ಕರ್ ಸಹ ಕುಟುಂಬ ಆಗಮಿಸಿ ಹಿಂಡಲಗಾ ವಿಜಯನಗರ ಮರಾಠಿ ಪಾಠಶಾಲೆ ಬೂತ್ ನಂಬರ್ 61 ರಲ್ಲಿ ಮತ ಚಲಾಯಿಸಿದರು 

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿರ ಉತ್ತಮ ಅಲ್ಲೇ ಇದೆ ಕ್ಷೇತ್ರದಲ್ಲಿ ಜಯ ದಾಖಲಿಸುವ ಮೂಲಕ ಕಾಂಗ್ರೆಸ್ ವಸತಿ ಇತಿಹಾಸ ಸೃಷ್ಟಿ ಮಾಡಲಿದೆ. ನನ್ನ ಸಹೋದರ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ನನ್ನ ದೊಡ್ಡ ಶಕ್ತಿ. ಅರಭಾವಿ ಗೋಕಾಕ್ ಬೆಳಗಾವಿ ಉತ್ತರ ಕ್ಷೇತ್ರಗಳನ್ನು ಕಾಂಗ್ರೆಸ್ ಮುನ್ನಡೆಸಲಿದೆ. ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆಲುವಿನ ಗ್ಯಾರಂಟಿ.   

 ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ರಾಜು ಆಸಿಫ್ ಸೆಟ್ ಬೂತ್ ಗಳಿಗೆ ಬೆಟ್ಟಿ ನೀಡಿ ವೀಕ್ಷಣೆ ಮಾಡಿದರು ಗಾಂಧಿನಗರದಲ್ಲಿ ಮಾತನಾಡಿದ ಶಾಸಕ ರಾಜು ಆಸಿಫ್ ಸೆಟ್ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 40,000 ಮತಗಳ ಲೀಡ್ ನೀಡಲಿದೆ ಅಂದರು ಕಾಂಗ್ರೆಸ್ ಯುವ ನಾಯಕ ಅಮನ್ ಸೆಟ್ ರಾಜು ಸೆಟ್ ಅವರ ಜೊತೆ ಸತ್ ನೀಡಿದರು .

ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ವಿನಯನ ನವಲಗಟ್ಟಿ ಕಾಂಗ್ರೆಸ್ ಅಭ್ಯರ್ಥಿಗಳು ನಿಶ್ಚಿತವಾಗಿಯೂ ವಿಜಯಶಾಲಿಯಾಗಲಿದ್ದಾರೆ ಮತದಾರರು ದೇಶದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡಿದ್ದಾರೆ ಅದರಂತೆ ಜೂನ್ 4 ರಂದು ದೇಶದಲ್ಲಿ ಬದಲಾವಣೆ ನಿಶ್ಚಿತವಾಗಲಿದೆ ಭರವಸೆ ವ್ಯಕ್ತಪಡಿಸಿದರು.

Google News Join Facebook Live 24/7 Help Desk

Tags: