ಇಂದು ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ

May 8, 2024 - 09:07
 18
Google  News Join WhatsApp Join Telegram View ePaper

ಇಂದು ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ

Panchayat Swaraj Samachar News Desk.

ಬೆಂಗಳೂರು: ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆ ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ. ಆರೋಪಿಗೆ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಸಿಗುತ್ತದೆಯೇ ಅಥವಾ ಜೈಲಿಗೆ ಹೋಗ್ತಾರೆಯೇ ಎಂಬುದು ನಿರ್ಧಾರವಾಗಲಿದೆ.

ದೌರ್ಜನ್ಯ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ರೇವಣ್ಣರ ಹೆಚ್ಚಿನ ವಿಚಾರಣೆ ಅವಶ್ಯಕತೆ ಇದೆ ಎಂದು ಎಸ್‌ಐಟಿ ಅಧಿಕಾರಿಗಳು ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದರು. ಇಂದು ಆರೋಪಿ ರೇವಣ್ಣ ಅವರ ಎಸ್‌ಐಟಿ ಕಸ್ಟಡಿ ಅಂತ್ಯವಾಗಲಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಜಾಮೀನು ತೀರ್ಪು ಆರೋಪಿ ಪರ ಬಂದರೆ ರೇವಣ್ಣ ಮನೆಗೆ ಹೋಗುತ್ತಾರೆ. ಜಾಮೀನು ಸಿಗದೇ ಹೋದರೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲಿದ್ದಾರೆ. ಬಹುತೇಕ ಕಿಡ್ನ್ಯಾಪ್ ಕೇಸ್‌ನಲ್ಲಿ ವಿಚಾರಣೆ ಮುಗಿದಿರೋ ಹಿನ್ನೆಲೆ ಕಸ್ಟಡಿಗೆ ಕೇಳುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ಎಸ್‌ಐಟಿ ಮೂಲಗಳು.

Google News Join Facebook Live 24/7 Help Desk

Tags: