ಸಿಎಂ ಆಗಿದ್ದವರು ಎಸ್‌ಐಟಿ ಮೇಲೆ ಅನುಮಾನ ಪಟ್ಟರೆ ಹೇಗೆ?

May 8, 2024 - 12:42
 29
Google  News Join WhatsApp Join Telegram View ePaper

ಸಿಎಂ ಆಗಿದ್ದವರು ಎಸ್‌ಐಟಿ ಮೇಲೆ ಅನುಮಾನ ಪಟ್ಟರೆ ಹೇಗೆ?

Panchayat Swaraj Samachar News Desk.

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣದಲ್ಲಿ ನಡೆಯುತ್ತಿರುವ ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ಬೇಡ. ತನಿಖೆ ಸರಿಯಾಗಿ ನಡೆಯುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಒಂದು ಜವಾಬ್ದಾರಿ ಇದೆ. ಇಂತಹ ಘಟನೆಯನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ವಿಚಾರ ಕುಮಾರಸ್ವಾಮಿ ಅವರಿಗೂ ಗೊತ್ತು. ಅವರು ಮುಖ್ಯಮಂತ್ರಿ ಆಗಿದ್ದವರು ಎಸ್‍ಐಟಿಯಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಅವರು ಇಂತಹ ಸಮಯದಲ್ಲಿ ಕೋಪ ಹಾಗೂ ಅಸಮಾಧಾನಗೊಳ್ಳುವುದು ಸಹಜ. ಪೆನ್‍ಡ್ರೈವ್ ಮೂಲದ ಬಗ್ಗೆ ಎಸ್‍ಐಟಿ ಗಮದೇವರಾಜೇಗೌಡ ಅವರ ಅರೋಪಕ್ಕೆ ನಾವು ಏನು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ಎಸ್‍ಐಟಿಯವರು ಗಮನಿಸುತ್ತಾರೆ. ಡಿಕೆಶಿ ಹಾಗೂ ಸರ್ಕಾರದ ವಿರುದ್ಧ ಆರೋಪ ಏನೇ ಮಾಡಿದರು ಎಸ್‍ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.ನಹರಿಸುತ್ತದೆ ಎಂದಿದ್ದಾರೆ.

Google News Join Facebook Live 24/7 Help Desk

Tags: