ಪತ್ನಿ ಮತವನ್ನು ತಾವೇ ಹಾಕಿದ ಸಂಸದ ಸಿದ್ದೇಶ್ವರ್

May 7, 2024 - 17:31
 48
Google  News Join WhatsApp Join Telegram View ePaper

ಪತ್ನಿ ಮತವನ್ನು ತಾವೇ ಹಾಕಿದ ಸಂಸದ ಸಿದ್ದೇಶ್ವರ್

Panchayat Swaraj Samachar News Desk.

ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಅವರು ತಮ್ಮ ಪತ್ನಿಯ ಮತವನ್ನು ತಾವೇ ಹಾಕಿರುವ ಘಟನೆ ನಡೆದಿದೆ, ಈ ಮೂಲಕ ಸಂಸದ ಸಿದ್ದೇಶ್ವರ್ ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ದಂಪತಿ ಮತದಾನಕ್ಕಾಗಿ ದಾವಣಗೆರೆ ನಗರದ ಮಾಗನೂರು ಬಸಪ್ಪ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 236ಕ್ಕೆ ಆಗಮಿಸಿದ್ದರು.

     ಈ ವೇಳೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ ಹಾಕುವಾಗ ಗೊಂದಲವಾಗಿದೆ. ಬಳಿಕ ಪತಿ ಸಿದ್ದೇಶ್ವರ್, ಪತ್ನಿ ಮತದಾನವನ್ನು ತಾವೇ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ತಮ್ಮ ಮತ ತಾವೇ ಹಾಕಿಕೊಳ್ಳದ ಬಿಜೆಪಿ ಅಭ್ಯರ್ಥಿ ಅಡಳಿತ ಹೇಗೆ ನಡೆಸುತ್ತಾರೆ ಎಂದು ಸಾಮಾಜಿಕ‌‌ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

Google News Join Facebook Live 24/7 Help Desk

Tags: