ಬೆಂಗಳೂರು: ಮಾಜಿ ಸಚಿವ ತಿಮ್ಮಾಪುರ್-ನಂಜಯ್ಯಮಠ ಆಡಿಯೋ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಅವರು ದೂರು ಕೊಡಲಿ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಿಮ್ಮಾಪುರ್ ಮತ್ತು ನಂಜಯ್ಯಮಠ ಸ್ಪಷ್ಟವಾಗಿ ಹೇಳಿದ್ದಾರೆ. ಆಡಿಯೋ ಛಲವಾದಿ ನಾರಾಯಣಸ್ವಾಮಿ ಅವರ ಬಳಿ ಇದೆ. ನಾನೇ ಈಗ ಗೃಹ ಸಚಿವ. ನನಗೆ ದೂರು ಕೊಡಿ. ಫಾರೆನ್ಸಿಕ್ ಲ್ಯಾಬ್‌ಗೆ ಕಳಿಸಿ ರಿಪೋರ್ಟ್ ತರಿಸುತ್ತೇನೆ. ನಿಮಗೆ ಎಲ್ಲಿಂದ ಬಂತು ಅಂತ ನೀವು ಹೇಳಿ, ಅವರು ಮಾತಾಡಿದ್ದಾರಾ ಇಲ್ಲವಾ ನಾನು ಹೇಳ್ತೀನಿ ಎಂದಿದ್ದಾರೆ.
ಒಂದು ಕಂಪ್ಲೆಂಟ್ ಕೊಡಿ. ಸುಮ್ಮನೆ ಆಡಿಯೋ ಸಿಕ್ಕಿದೆ ಅಂತ ನಾವು ರಿಯಾಕ್ಟ್ ಮಾಡೋದು ಸರಿಯಲ್ಲ. ನಾರಾಯಣಸ್ವಾಮಿ ನನ್ನ ಬೆಸ್ಟ್ ಫ್ರೆಂಡ್, ದೂರು ಕೊಡಲಿ. ಅವರು ಹೇಳಿದ್ದನ್ನು ನಾವು ಗಂಭೀರವಾಗಿ ತಗೋಬೇಕು. ದೂರು ಕೊಡಲಿ ನಾನು ಸತ್ಯಾಂಶವನ್ನು ಸದನದಲ್ಲಿ ಆ ಮಂಡನೆ ಮಾಡ್ತೀನಿ ಎಂದು ಹೇಳಿದ್ದಾರೆ.

