LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನು ಡಿಕೆಶಿ ಮನೆಮಗ, ನಾನೇ ಸಿಎಂ ಇದ್ದಂತೆ: ಶಿವಗಂಗಾ ಬಸವರಾಜ್

Advertisement
Advertisement

ದಾವಣಗೆರೆ: ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದು ಶಾಸಕ ಶಿವಗಂಗಾ ಬಸವರಾಜ್  ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಪಕ್ಷದಲ್ಲಿ ಐದಾರು ಬಾರಿ ಗೆದ್ದ ಹಿರಿಯ ಶಾಸಕರು ಇದ್ದಾರೆ. ನನಗೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಸಿಕ್ಕಿಲ್ಲ, ಮುಂದೆ ಸಾಕಷ್ಟ ಅವಕಾಶಗಳಿವೆ ಕಾದು ನೋಡೋಣ. ಅದರ ಬಗ್ಗೆ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಬೇಕಿದೆ ಎಂದರು. 

ಭ್ರಷ್ಟಾಚಾರ ಅರೋಪ ಇದ್ದರೂ ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ದಾರೆ ಎಂಬ ವಿಪಕ್ಷ ಗಳ ಅರೋಪಕ್ಕೆ, ಭ್ರಷ್ಟಾಚಾರ ಆರೋಪ ಯಾರ ಮೇಲೆ ಇಲ್ಲ ಹೇಳಿ? ಬಿಜೆಪಿಯವರಿಗೆ ಇದರ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ. ಇದೀಗ ಆರೋಪಿಗಳು ಅಷ್ಟೇ, ಅಪರಾಧ ಸಾಬೀತಾದ್ರೆ ಆಗ ಮಾತಾಡಲಿ. ಕಾನೂನು ಪ್ರಕಾರ ಎನಿದೆ ಅದೇ ರೀತಿ ಅರೆಸ್ಟ್ ಮಾಡಿದ್ದರು. ಈಗ ಹೊರಗೆ ಬಂದಿದ್ದಾರೆ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ಸರಿ ಇದೆ ಎಂದು ಸಮರ್ಥಿಸಿಕೊಂಡರು.

ಸಚಿವ ಸಂಪುಟದಲ್ಲಿ ಡಿಕೆಶಿ ಆಪ್ತರು, ಸಿದ್ದರಾಮಯ್ಯ ಆಪ್ತರು ಎಂದು ಬರೋದಿಲ್ಲ. ಪ್ರಾಂತ್ಯವಾರು ಸಚಿವ ಸ್ಥಾನ ನೀಡಿದ್ದಾರೆ. ನಮ್ಮ ಕೆ.ಎಸ್ ಬಸವಂತಪ್ಪ ಅವರಿಗೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ನಮಗೆ ಸಂತೋಷವಿದೆ ಎಂದರು.

ನಾನು ರೈತರ ಕೋಟಾ ಅಡಿ ಮಂತ್ರಿ ಸ್ಥಾನ ಕೇಳಿದ್ದೆ, ಆದರೆ ಕೊಟ್ಟಿಲ್ಲ. ಮುಂದೆ ಸಾಕಷ್ಟು ಅವಕಾಶ ಇದೆ, ಇನ್ನೂ ಮೊದಲ ಬಾರಿ ಗೆದ್ದಿರುವೆ. ಸಿಎಂ ರಾಜಕೀಯ ಕಾರ್ಯದರ್ಶಿ ಕೊಟ್ಟರೂ ನಿಭಾಯಿಸುವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಲಮಂಗಲ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ – ಗ್ರಾಹಕರ ಸೋಗಿನಲ್ಲಿ ಬಂದು ದರೋಡೆಗೆ ಯತ್ನತಿಮ್ಮಾಪುರ್-ನಂಜಯ್ಯಮಠ ಆಡಿಯೋ ಬಗ್ಗೆ ಛಲವಾದಿ ದೂರು ಕೊಡಲಿ: ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಯುವಕರ ರಕ್ತ ಹೀರಿ ಬದುಕುತ್ತಿದೆ: ಛಲವಾದಿ ನಾರಾಯಣಸ್ವಾಮಿʻಕೆಲಸ ಮಾಡದಿದ್ರೆ, ಸಂಬಳ ಇಲ್ಲʼ – ಮುಷ್ಕರ ಹಿಂಪಡೆಯುವಂತೆ ವೈದ್ಯರಿಗೆ ಬಾಂಬೆ ಹೈಕೋರ್ಟ್‌ ಖಡಕ್ ಸೂಚನೆಪಿಓಪಿ ಗಣೇಶ ಸ್ಥಾಪನೆಗಿಲ್ಲ ಅವಕಾಶ: ಈಶ್ವರ ಖಂಡ್ರೆ ಸೂಚನೆಮುಳ್ಳಯ್ಯನಗಿರಿ ಬಳಿ ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ – ಕೂದಲೆಳೆ ಅಂತರದಲ್ಲಿ ಪ್ರವಾಸಿಗ ಬಚಾವ್‌ನಾನು ಡಿಕೆಶಿ ಮನೆಮಗ, ನಾನೇ ಸಿಎಂ ಇದ್ದಂತೆ: ಶಿವಗಂಗಾ ಬಸವರಾಜ್ಕಾಂಗ್ರೆಸ್‌ನಿಂದ ಸಾಂವಿಧಾನಿಕ ಹುದ್ದೆ ಹೈಜಾಕ್‌- ಆ.14ಕ್ಕೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ: ಬಸವರಾಜ ಹೊರಟ್ಟಿಉಪಮುಖ್ಯಮಂತ್ರಿಗಳಾದಡಾ. ಜಿ. ಪರಮೇಶ್ವರ್ ಅವರ ಜನ್ಮದಿನದ ಅಂಗವಾಗಿ   ಸರ್ಕಾರಿ ವಸತಿ ಶಾಲೆಗಳಿಗೆ ಗೌತಮ ಬುದ್ಧ ಪ್ರತಿಮೆಗಳ ವಿತರಣೆಆರೋಪಿ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ; ಪ್ರಕರಣದ ಎ-14 ಪ್ರದೋಷ್‌ನಿಂದ ಮಾಫಿ ಸಾಕ್ಷಿಗೆ ಅರ್ಜಿ