LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್‌ನಿಂದ ಸಾಂವಿಧಾನಿಕ ಹುದ್ದೆ ಹೈಜಾಕ್‌- ಆ.14ಕ್ಕೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ: ಬಸವರಾಜ ಹೊರಟ್ಟಿ

Advertisement
Advertisement

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಕೊನೆಗೂ ಒಪ್ಪಿಗೆ ನೀಡಿದ್ದು, ಆಗಸ್ಟ್ 14 ರಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಆಗಸ್ಟ್ 13 ರಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪ ನಡೆಯಲಿದೆ. ಆಗಸ್ಟ್ 14 ರಂದು ಅಧಿವೇಶನದ ಎರಡನೇ ದಿನ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನೆರವೇರಿದ ತಕ್ಷಣವೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊರಟ್ಟಿ ತಿಳಿಸಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಆ ಸ್ಥಾನದಿಂದ ಬದಲಾಯಿಸದಂತೆ ರಾಜ್ಯ ಸರ್ಕಾರದ ಪ್ರಮುಖ ಸಚಿವರಾದ ಸತೀಶ್ ಜಾರಕಿಹೊಳಿ, ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಯು.ಟಿ. ಖಾದರ್ ಹಾಗೂ ಎನ್.ಎ. ಹ್ಯಾರಿಸ್ ಅವರು ಮುಖ್ಯಮಂತ್ರಿಗಳ ಮೇಲೆ ತೀವ್ರ ಒತ್ತಡ ಹೇರಿದ್ದರು. ಆದರೆ ಸಚಿವರ ಮನವಿಯ ಹೊರತಾಗಿಯೂ ಡಿಕೆ ಶಿವಕುಮಾರ್‌ ತಮ್ಮ ನಿರ್ಧಾರವನ್ನು ಬದಲಿಸಿರಲಿಲ್ಲ.

“ಇದು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ಅಂತಿಮ ತೀರ್ಮಾನ” ಎಂದು ಸ್ಪಷ್ಟಪಡಿಸಿದ ಸಿಎಂ ಸಭಾಪತಿ ಸ್ಥಾನ ತ್ಯಾಗ ಮಾಡುವಂತೆ ಹೊರಟ್ಟಿ ಅವರಲ್ಲಿ ವಿನಂತಿಸಿಕೊಂಡಿದ್ದರು. ಈ ವಿನಂತಿಗೆ ಸ್ಪಂದಿಸಿದ ಹೊರಟ್ಟಿ ರಾಜೀನಾಮೆಗೆ ಸಮ್ಮತಿಸಿದ್ದಾರೆ. 

ಪಬ್ಲಿಕ್ ಟಿವಿ ಜೊತೆ ಚಿಟ್‌ಚಾಟ್ ನಡೆಸಿದ ಸಭಾಪತಿ ಬಸವರಾಜ ಹೊರಟ್ಟಿ, ಸಾಂವಿಧಾನಿಕ ಹುದ್ದೆಗೆ ಈ ರೀತಿ ಅಗೌರವ ತರುವುದು ಹಾಗೂ ಹೈಜಾಕ್ ಮಾಡುವುದು ಸರಿಯಲ್ಲ. ಹೈಕಮಾಂಡ್ ಆದೇಶವಿದೆ, ಹೀಗಾಗಿ ರಾಜೀನಾಮೆ ಕೊಡಿ ಎಂದು ಸಿಎಂ ಹೇಳಿದರು. ಸಿದ್ದರಾಮಯ್ಯನವರು ಕೂಡ ನಾನು ಯಾರ ಬಳಿಯೂ ಮಾತನಾಡುವುದಿಲ್ಲ ಎಂದು ಹೇಳಿದ್ದರು. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ನಾನು ಸದನದಲ್ಲಿ ಸಾಮಾನ್ಯ ಸದಸ್ಯನಾಗಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ನನ್ನ ಮೇಲೆ ಈ ರೀತಿ ಅವಿಶ್ವಾಸ ವ್ಯಕ್ತಪಡಿಸುವ ಮಾತುಗಳನ್ನಾಡಿರುವುದು ನನ್ನ ಮನಸ್ಸಿಗೆ ತೀವ್ರ ಘಾಸಿ ಉಂಟುಮಾಡಿದೆ. ಇಂತಹ ವಾತಾವರಣದಲ್ಲಿ ಮುಂದುವರಿಯಲು ನನಗೆ ಇಷ್ಟವಿಲ್ಲ, ಆದ್ದರಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಲಮಂಗಲ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ – ಗ್ರಾಹಕರ ಸೋಗಿನಲ್ಲಿ ಬಂದು ದರೋಡೆಗೆ ಯತ್ನತಿಮ್ಮಾಪುರ್-ನಂಜಯ್ಯಮಠ ಆಡಿಯೋ ಬಗ್ಗೆ ಛಲವಾದಿ ದೂರು ಕೊಡಲಿ: ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಯುವಕರ ರಕ್ತ ಹೀರಿ ಬದುಕುತ್ತಿದೆ: ಛಲವಾದಿ ನಾರಾಯಣಸ್ವಾಮಿʻಕೆಲಸ ಮಾಡದಿದ್ರೆ, ಸಂಬಳ ಇಲ್ಲʼ – ಮುಷ್ಕರ ಹಿಂಪಡೆಯುವಂತೆ ವೈದ್ಯರಿಗೆ ಬಾಂಬೆ ಹೈಕೋರ್ಟ್‌ ಖಡಕ್ ಸೂಚನೆಪಿಓಪಿ ಗಣೇಶ ಸ್ಥಾಪನೆಗಿಲ್ಲ ಅವಕಾಶ: ಈಶ್ವರ ಖಂಡ್ರೆ ಸೂಚನೆಮುಳ್ಳಯ್ಯನಗಿರಿ ಬಳಿ ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ – ಕೂದಲೆಳೆ ಅಂತರದಲ್ಲಿ ಪ್ರವಾಸಿಗ ಬಚಾವ್‌ನಾನು ಡಿಕೆಶಿ ಮನೆಮಗ, ನಾನೇ ಸಿಎಂ ಇದ್ದಂತೆ: ಶಿವಗಂಗಾ ಬಸವರಾಜ್ಕಾಂಗ್ರೆಸ್‌ನಿಂದ ಸಾಂವಿಧಾನಿಕ ಹುದ್ದೆ ಹೈಜಾಕ್‌- ಆ.14ಕ್ಕೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ: ಬಸವರಾಜ ಹೊರಟ್ಟಿಉಪಮುಖ್ಯಮಂತ್ರಿಗಳಾದಡಾ. ಜಿ. ಪರಮೇಶ್ವರ್ ಅವರ ಜನ್ಮದಿನದ ಅಂಗವಾಗಿ   ಸರ್ಕಾರಿ ವಸತಿ ಶಾಲೆಗಳಿಗೆ ಗೌತಮ ಬುದ್ಧ ಪ್ರತಿಮೆಗಳ ವಿತರಣೆಆರೋಪಿ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ; ಪ್ರಕರಣದ ಎ-14 ಪ್ರದೋಷ್‌ನಿಂದ ಮಾಫಿ ಸಾಕ್ಷಿಗೆ ಅರ್ಜಿ