LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮತ್ತೆ 10 ದಿನಗಳ ಕಾಲ ಕಾಲುವೆಗಳಿಗೆ ನೀರು ಬಿಡುಗಡೆ: ಸಚಿವ ಸತೀಶ್ ಜಾರಕಿಹೊಳಿ ಆದೇಶ

Advertisement
Advertisement

ಹುಕ್ಕೇರಿ: ರೈತರ ಹಿತದೃಷ್ಟಿಯಿಂದ ಜಿಎಲ್‌ಬಿಸಿ ಮತ್ತು ಜಿಆರ್‌ಬಿಸಿ ಕಾಲುವೆಗಳ ಮೂಲಕ ಇನ್ನೂ 10 ದಿನಗಳ ಕಾಲ ನೀರು ಬಿಡುಗಡೆ ಮಾಡಲು ಸಚಿವ ಸತೀಶ್ ಜಾರಕಿಹೊಳಿ ಆದೇಶಿಸಿದ್ದಾರೆ ಎಂದು ಅವರ ಆಪ್ತ ಸಹಾಯಕ ಶಿವು ಪಾಟೀಲ್ ತಿಳಿಸಿದ್ದಾರೆ.


ಈ ಕುರಿತು ಪತ್ರಿಕಾ ಪ್ರಕರಣೆಯಲ್ಲಿ ವಿಷಯ ತಿಳಿಸಿದ ಅವರು, ಮಳೆ ಅಭಾವ ಇರುವದರಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ಜು. 24ರಿಂದ ಆಗಸ್ಟ್‌ 3ರವರೆಗೆ 10 ದಿನಗಳ ಕಾಲ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿತ್ತು. ಅದರಂತೆ ಮತ್ತೆ 10 ದಿನಗಳ ಕಾಲ ಕಾಲುವೆಗಳಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಆದೇಶ ನೀಡಿದ್ದಾರೆ. 


1 ಟಿಎಂಸಿ ನೀರು ಬಿಡುಗಡೆಗೆ ಸೂಚನೆ:-ನಿನ್ನೆಯ ದಿನ ಸಚಿವ ಸತೀಶ್‌ ಜಾರಕಿಹೊಳಿ ಅವರು ಖುದ್ದಾಗಿ  ಜಿಎಲ್‌ಬಿಸಿ ಹಾಗೂ ಜಿಆರ್‌ ಬಿಸಿ ಕೆನೆಲ್‌ ಗಳಿಗೆ ಭೇಟಿ ನೀಡಿದಾಗ ಬಹಳಷ್ಟು ನೀರು ಕೊಳವಿಯಿಂದ 32 ಕಿಮಿ ಹಿಂದೆ  ನೀರು ಸೋರಿಕೆಯಾಗಿರುವುದು ಕಂಡು ಬಂದಿತ್ತು. ಈ ವಿಷಯ ಮನವರಿಕೆ ಮಾಡಿಕೊಂಡ ಸಚಿವರು,  1 ಟಿಎಂಸಿ ನೀರಿನಲ್ಲಿ ಅರ್ಧ ಟಿಎಂಸಿ ನೀರನ್ನು ಜಿಆರ್‌ಬಿಸಿಗೆ, ಇನ್ನು ಅರ್ಧ ಟಿಎಂಸಿ ನೀರನ್ನು ಸಿಬಿಸಿ ಚಿಕ್ಕೋಡಿ  ಉಪ ಕಾಲುವೆಗೆ ಬಿಡಲು ತಿಳಿಸಿದ್ದಾರೆ.


ಸಹಕಾರ ನೀಡಿ:- ಮೇಲಭಾಗ  ಬೇಟಗೇರಿ, ಮಮದಾಪೂರ ಹಾಗೂ ಗೋಕಾಕ ರೈತರು ಕೆಳಭಾಗದ ರೈತರಾದ ಕೌಜಲಗಿ, ಯಾದವಾಡ ಹಾಗೂ ಗದ್ದನಕೇರಿ ರೈತರಿಗೆ ನೀರು ಸದ್ಬಳಿಕೆಗೆ ಸಹಕಾರ ನೀಡಬೇಕಿದೆ. ʻ10ʼ ದಿನಗಳಲ್ಲಿ ಮೇಲ್ಬಾಗದ  ರೈತರಿಗೆ 6 ದಿನ, ಕೆಳಭಾಗದ ರೈತರಿಗೆ 4 ದಿನ ನೀರು ಹರಿಸುವಂತೆ  ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡದ್ದಾರೆ. ಆದರಿಂದ ಎಲ್ಲಾ ರೈತರು ಹರಿಸುವ ನೀರನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ರೈತರಲ್ಲಿ ಸಚಿವರು ಮನವಿ ಎಂದು ಮಾಡಿಕೊಂಡಿದ್ದಾರೆ  ಶಿವು ಪಾಟೀಲ್ ಅವರು ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಕೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರುತಂದೆ ಮೊಬೈಲ್ ಕೊಡಿಸದಿದ್ದಕ್ಕೆ 13 ವರ್ಷದ ಮಗ ಆತ್ಮಹತ್ಯೆನಾಳೆ ರಾಜೀನಾಮೆ ಕೊಡ್ತೀನಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಆಕ್ರೋಶನಾನು ರಾಜೀನಾಮೆ ಬೆದರಿಕೆ ಹಾಕಿಲ್ಲ: ಎಸ್‌ಎಸ್‌ ಮಲ್ಲಿಕಾರ್ಜುನ್‌ಡಿವೋರ್ಸ್‌ ಬಳಿಕ ಖಿನ್ನತೆ; 5ನೇ ಮಹಡಿಯಿಂದ ಹಾರಿ ಮನೋವೈದ್ಯೆ ಆತ್ಮಹತ್ಯೆಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ: ತನ್ವೀರ್ ಸೇಠ್ ಅಸಮಾಧಾನಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ: ರುದ್ರಪ್ಪ ಲಮಾಣಿಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರಿಯಾಕೃಷ್ಣ ಬೆಂಬಲಿಗರ ತೀವ್ರ ಆಕ್ರೋಶಬ್ರೇಕಪ್ ವದಂತಿಗೆ ಪ್ರತಿಕ್ರಿಯೆ ಕೊಟ್ಟ ಅನುಪಮಾ ಪರಮೇಶ್ವರನ್