LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನು ರಾಜೀನಾಮೆ ಬೆದರಿಕೆ ಹಾಕಿಲ್ಲ: ಎಸ್‌ಎಸ್‌ ಮಲ್ಲಿಕಾರ್ಜುನ್‌

Advertisement
Advertisement

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ  ಸಚಿವಾಕಾಂಕ್ಷಿಗಳ ಪಟ್ಟಿ ಕೊನೆ ಕ್ಷಣದಲ್ಲಿ ಬದಲಾದ ವಿಚಾರ ಹಾಗೂ ಪಕ್ಷದ ಒಳಗಿನ ಗೊಂದಲಗಳ ಕುರಿತು ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಾವಣಗೆರೆಯ ಶಾಸಕ ಎಸ್‌ಎಸ್‌ ಮಲ್ಲಿಕಾರ್ಜುನ್‌  ಸ್ಪಷ್ಟನೆ ನೀಡಿದ್ದಾರೆ.

ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಯಾಕೆ ಬದಲಾವಣೆ ಆಯ್ತು ಎಂಬುದು ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ನಿನಗೆ ಅವಕಾಶ ನೀಡಲಾಗಿದೆ, ನೀನು ಬಾ ಎಂದು ಕರೆದರು, ಹಾಗಾಗಿ ಬಂದಿದ್ದೇನೆ. ಮಂಕಾಳು ವೈದ್ಯ ಅವರ ಹೆಸರು ತಪ್ಪಾಗಿ (ಬೈ ಮಿಸ್ಟೇಕ್) ಬಂದಿತ್ತು ಎಂದು ತಿಳಿಸಿದರು.

ಮಂತ್ರಿ ಸ್ಥಾನ ನೀಡದಿದ್ದರೆ ನೀವು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ರಾಜೀನಾಮೆ ಬೆದರಿಕೆ ಹಾಕಿಲ್ಲ. ಈ ಕುರಿತು ನನ್ನ ಬಳಿ ಯಾವುದೇ ಚರ್ಚೆಯೂ ಆಗಿಲ್ಲ ಎಂದು ಹೇಳಿದರು. 

ನಮ್ಮ ಜಿಲ್ಲೆ ಮತ್ತು ಜಾತಿಯ ಸಮೀಕರಣವನ್ನು ಪರಿಗಣಿಸಿ ನನಗೆ ಈ ಅವಕಾಶ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಸಮಾನ ಪಾಲು ಮತ್ತು ಪ್ರಾತಿನಿಧ್ಯ ನೀಡಲಾಗಿದೆ ಎಂದರು.

ಪಕ್ಷದಲ್ಲಾಗಿರುವ ಅಸಮಾಧಾನ ಅಥವಾ ಲಿಸ್ಟ್ ಬದಲಾವಣೆ ವಿಚಾರಗಳ ಬಗ್ಗೆ ನನಗೆ ಸ್ಪಷ್ಟ ಮಾಹಿತಿಯಿಲ್ಲ. ಈಗ ಹೋಗಿ ನೋಡಬೇಕಿದೆ. ಏನೇ ಗೊಂದಲಗಳಿದ್ದರೂ ಹಿರಿಯ ನಾಯಕರು ಹಾಗೂ ಸಿಎಂ ಎಲ್ಲವನ್ನೂ ಸರಿಪಡಿಸಲಿದ್ದಾರೆ. ಸಿಎಂ ಅವರನ್ನು ಭೇಟಿಯಾಗಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಕೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರುತಂದೆ ಮೊಬೈಲ್ ಕೊಡಿಸದಿದ್ದಕ್ಕೆ 13 ವರ್ಷದ ಮಗ ಆತ್ಮಹತ್ಯೆನಾಳೆ ರಾಜೀನಾಮೆ ಕೊಡ್ತೀನಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಆಕ್ರೋಶನಾನು ರಾಜೀನಾಮೆ ಬೆದರಿಕೆ ಹಾಕಿಲ್ಲ: ಎಸ್‌ಎಸ್‌ ಮಲ್ಲಿಕಾರ್ಜುನ್‌ಡಿವೋರ್ಸ್‌ ಬಳಿಕ ಖಿನ್ನತೆ; 5ನೇ ಮಹಡಿಯಿಂದ ಹಾರಿ ಮನೋವೈದ್ಯೆ ಆತ್ಮಹತ್ಯೆಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ: ತನ್ವೀರ್ ಸೇಠ್ ಅಸಮಾಧಾನಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ: ರುದ್ರಪ್ಪ ಲಮಾಣಿಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರಿಯಾಕೃಷ್ಣ ಬೆಂಬಲಿಗರ ತೀವ್ರ ಆಕ್ರೋಶಬ್ರೇಕಪ್ ವದಂತಿಗೆ ಪ್ರತಿಕ್ರಿಯೆ ಕೊಟ್ಟ ಅನುಪಮಾ ಪರಮೇಶ್ವರನ್