ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಸೋಮವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಫಿಕ್ಸ್ ಆಗಿದೆ.
ಕಾಂಗ್ರೆಸ್ ಹೈಕಮಾಂಡ್ ಅಂತಿಮ ಹಂತದ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಪ್ರಮಾಣವಚನಕ್ಕೆ ಲೋಕಭವನದಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಿಎಂ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.
ನಾಳೆ (ಆ.2) ನೂತನ ಸಚಿವರ ಪಟ್ಟಿ ಸಿಎಂ ಡಿಕೆಶಿ ಕೈ ಸೇರಲಿದ್ದು ಸೋಮವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಫಿಕ್ಸ್ ಎನ್ನಲಾಗಿದೆ. 18 ಕ್ಕೂ ಹೆಚ್ಚು ಸಚಿವರು ಪ್ರಮಾಣವಚನ ಸ್ವೀಕರಿಸಲಿರುವ ಸಾಧ್ಯತೆ ಇದೆ.
ಈಗಾಗಲೇ ಹೈಕಮಾಂಡ್‌ಗೆ ಸಿದ್ದರಾಮಯ್ಯ (Siddaramaiah), ಡಿಕೆಶಿ ಪಟ್ಟಿ ಇಬ್ಬರೂ ಪ್ರತ್ಯೇಕ ಪಟ್ಟಿ ನೀಡಿದ್ದು, ಭಾನುವಾರ ಸಂಜೆ ಹೊತ್ತಿಗೆ ಅಂತಿಮ ಪಟ್ಟಿ ತಲಪುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ, ಖಾಲಿ ಇರುವ 20 ಸ್ಥಾನಗಳ ಪೈಕಿ, 18 ಸ್ಥಾನಗಳು ಭರ್ತಿಯಾಗೋ ಸಾಧ್ಯತೆಗಳಿವೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯಾರಿದ್ದಾರೆ?
* ಎಸ್.ಎಸ್.ಮಲ್ಲಿಕಾರ್ಜುನ
ಲಿಂಗಾಯತ
ದಾವಣಗೆರೆ ಶಾಸಕ
* ಎನ್.ಚಲುವರಾಯಸ್ವಾಮಿ
ಒಕ್ಕಲಿಗ
ನಾಗಮಂಗಲ ಶಾಸಕ
* ಜಮೀರ್ ಅಹ್ಮದ್
ಮುಸ್ಲಿಂ
ಚಾಮರಾಜಪೇಟೆ ಶಾಸಕ
* ಶರತ್ ಬಚ್ಚೇಗೌಡ
ಒಕ್ಕಲಿಗ
ಹೊಸಕೋಟೆ ಶಾಸಕ
* ಆನೇಕಲ್ ಶಿವಣ್ಣ
ದಲಿತ
ಆನೇಕಲ್ ಶಾಸಕ
* ಕೆ.ಎಸ್ ಬಸವಂತಪ್ಪ
ದಲಿತ ಎಡಗೈ
ಮಾಯಕೊಂಡ ಶಾಸಕ
* ಜೆ.ಎನ್.ಗಣೇಶ
ಎಸ್‌ಟಿ
ಕಂಪ್ಲಿ ಶಾಸಕ
* ರುದ್ರಪ್ಪ ಲಮಾಣಿ
ದಲಿತ (ಎಸ್‌ಸಿ ಮೀಸಲು)
ಹಾವೇರಿ ಶಾಸಕ
* ಎ.ಎಸ್.ಪೊನ್ನಣ್ಣ
ಕೊಡವ
ವಿರಾಜಪೇಟೆ ಶಾಸಕ
* ಬೇಳೂರು ಗೋಪಾಲಕೃಷ್ಣ
ಈಡಿಗ
ಸಾಗರ ಶಾಸಕ
* ಶಿವಣ್ಣನವರ್
ಕುರುಬ
ಬ್ಯಾಡಗಿ ಶಾಸಕ
* ಶ್ರೀನಿವಾಸ್ ಮಾನೆ
ಮರಾಠ
ಹಾನಗಲ್ ಶಾಸಕ
* ಮಂಕಾಳು ವೈದ್ಯ
ಮೊಗವೀರ
ಭಟ್ಕಳ ಶಾಸಕ.
ಸಿಎಂ ಡಿಕೆ ಸಂಪುಟ ಸೇರ್ತಾರಾ ಜಮೀರ್?
ದಾವಣಗೆರೆ ಬೈ ಎಲೆಕ್ಷನ್‌ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಜಮೀರ್ ಅಹ್ಮದ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಈ ವಿಚಾರ ರಾಜ್ಯ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಸಿತ್ತು. ಇದೇ ವಿಚಾರವಾಗಿ ಜಮೀರ್ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರ ಕ್ಷಮೆ ಕೇಳಿದ್ರು. ಇದೀಗ ಸಿಎಂ ಡಿಕೆ ಸಂಪುಟಕ್ಕೆ ಮಾಜಿ ಸಚಿವ ಜಮೀರ್ ಸೇರ್ತಾರಾ ಅನ್ನೋ ಪ್ರಶ್ನೆಗಳು ಉದ್ಭವಿಸಿವೆ. ಜಮೀರ್ ಭವಿಷ್ಯ ಇವತ್ತು ನಿರ್ಧಾರ ಆಗಲಿದ್ದು ಹೈಕಮಾಂಡ್ ಮಟ್ಟದಲ್ಲಿ ಫೈನಲ್ ಮಾತುಕತೆ ನಡೆಯಲಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ 6 ಮಂದಿ ಸೇರ್ಪಡೆ ಬಗ್ಗೆ ತೀರ್ಮಾನ ಮಾಡಲಾಗಿದ್ದು ಹೈಕಮಾಂಡ್ ಪಟ್ಟಿ ನಾಳೆ ಸಂಜೆಯೇ ಸಿಎಂ ಕೈಗೆ ಸಿಗಲಿದೆ.
ಸಚಿವ ಸ್ಥಾನಕ್ಕೆ ಶಾಸಕ ಅಪ್ಪಾಜಿಗೌಡ ಡಿಮ್ಯಾಂಡ್..!
ಇನ್ನೂ ನನಗೆ ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ನಡೀತಿದೆ. ಆದರೆ ಈ ಬಾರಿ ಸಚಿವ ಸ್ಥಾನ ಸಿಗೋ ನಂಬಿಕೆ ಇದೆ ಅಂತ ಶಾಸಕ ಅಪ್ಪಾಜಿಗೌಡ ಹೇಳಿದ್ದಾರೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಶಾಸಕ ಅಪ್ಪಾಜಿಗೌಡ ಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ನನಗೆ ಸಚಿವ ಸ್ಥಾನ ಕೊಡಿ ಅಂತ ಡಿಎಂ ಡಿಕೆಶಿ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

