LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿಯಲ್ಲಿ ಕಾರು ಹರಿದು 48 ಕುರಿಗಳು ಸಾವು

Advertisement
Advertisement

ಬೆಳಗಾವಿ: ಕಾರು ಹರಿದು 48 ಕ್ಕೂ ಕುರಿಗಳು ಸಾವನ್ನಪ್ಪಿದ್ದು, 15 ಹೆಚ್ಚು ಕುರಿಗಳಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಬಳಿ ನಡೆದಿದೆ.

ಕೆಂಗಾನೂರ ಗ್ರಾಮದ ಚಂದ್ರಪ್ಪ ರಾಯಪ್ಪ ಹಿತ್ತಲಮನಿ ಹಾಗೂ ದೊಡವಾಡ ಗ್ರಾಮದ ಬೀರಪ್ಪ ಅವರ ಕುರಿಗಳ ಹಿಂಡನ್ನು ನಯಾನಗರ ಸಮೀಪದ ಮಲಪ್ರಭಾ ನದಿಯ ದಂಡೆಯ ಬಳಿ ಮೇಯಲು ಬಿಡಲಾಗಿತ್ತು. ಮೇಯಿಸಿಕೊಂಡು ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಕೆಂಗಾನೂರ ಗ್ರಾಮದತ್ತ ಹಿಂಡು ಕರೆದುಕೊಂಡು ತೆರಳುತ್ತಿದ್ದಾಗ, ಬೈಲಹೊಂಗಲದಿಂದ ಬೆಳವಡಿ ಕಡೆಗೆ ವೇಗವಾಗಿ ಸಾಗುತ್ತಿದ್ದ ಕೆಎ–48 ಎಂ–1789 ಸಂಖ್ಯೆಯ ಟಾಟಾ ಇಂಡಿಗೋ ಕಾರು ನೇರವಾಗಿ ಕುರಿಗಳ ಹಿಂಡಿನೊಳಗೆ ನುಗ್ಗಿದೆ.

ಅಪಘಾತದ ರಭಸಕ್ಕೆ 48ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರಬಂದ ದೃಶ್ಯ ಕಂಡ ಸ್ಥಳೀಯರು ಕಣ್ಣೀರಿಟ್ಟರು. ರಸ್ತೆ ತುಂಬಾ ಚದುರಿಬಿದ್ದಿದ್ದ ಕುರಿಗಳ ಮೃತದೇಹಗಳು ಹಾಗೂ ಗಾಯಗೊಂಡ ಕುರಿಗಳ ನರಳಾಟ ನೋಡುಗರ ಮನಕಲಕುವಂತಿತ್ತು.

ಈ ದುರ್ಘಟನೆಯಿಂದ ಕುರಿ ಸಾಕಾಣಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಕುರಿಗಾಹಿಗಳ ಕುಟುಂಬಕ್ಕೆ ಅಪಾರ ಸುಮಾರು 20 ಲಕ್ಷ ಆರ್ಥಿಕ ನಷ್ಟ ಉಂಟಾಗಿದೆ. ಕ್ಷಣಾರ್ಧದಲ್ಲಿ ತಮ್ಮ ಬದುಕಿನ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿದ್ದವರ ಕಣ್ಣಲ್ಲೂ ನೀರು ತರಿಸಿತು. ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. 

ಸುದ್ದಿ ತಿಳಿಯುತ್ತಿದ್ದಂತೆಯೇ ಸಮಾಜಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ 112 ತುರ್ತು ಸೇವೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತ ಕುರಿಗಳನ್ನು ಮೂರು ಗಂಟೆಗಳ ಕಾಲ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಜೆಪಿ ಪ್ರತಿಭಟನೆ – ಪ್ರಚೋದನಾಕಾರಿ ವಿಷಯ ಹಂಚಿದ ಯೂಟ್ಯೂಬರ್, ಇನ್‌ಫ್ಲುಯೆನ್ಸರ್‌ಗಳ ವಿರುದ್ಧ ಕ್ರಮಕ್ಕೆ ದೆಹಲಿ ಪೊಲೀಸ್ ಸಜ್ಜುಬೆಳಗಾವಿಯಲ್ಲಿ ಕಾರು ಹರಿದು 48 ಕುರಿಗಳು ಸಾವುಸ್ವರಾಜ್ಯದ ಹರಿಕಾರ ತಿಲಕರಿಗೆ ಗೌರವ ನಮನ: ತಿಲಕ ಚೌಕ್‌ನಲ್ಲಿ ಕಿರಣ ಜಾಧವ ನೇತೃತ್ವದಲ್ಲಿ ಅಭಿವಂದನಾ ಕಾರ್ಯಕ್ರಮಮುಂದಿನ 5 ವರ್ಷಗಳಿಗೆ ಪಿಎಂ-ಸಮ್ಮಾನ್ ನಿಧಿ ಯೋಜನೆ ವಿಸ್ತರಣೆ: ಈರಣ್ಣ ಕಡಾಡಿ ಹರ್ಷವಿಶ್ವದ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಅಗ್ರಸ್ಥಾನ : ಪ್ರೊ. ದೆಬಬ್ರತ ದಾಸ್ಆ.4ರಿಂದ 8ರವರೆಗೆ ದಾಖಲೆ ಪರಿಶೀಲನೆ: ಕೆಇಎಬಿಡದಿ ಟೌನ್‌ಶಿಪ್‌ಗೆ ವಿರೋಧ – ಪಾದಯಾತ್ರೆಗೆ ಜೆಡಿಎಸ್‌ನಿಂದ ಹೊಸ ದಿನಾಂಕ ನಿಗದಿಪತ್ನಿಗೆ ಅನೈತಿಕ ಸಂಬಂಧ ಆರೋಪ – ವಿಡಿಯೋ ಮಾಡಿ ಹತ್ಯೆ, ಬಳಿಕ ನೇಣಿಗೆ ಶರಣಾದ ಪತಿಡಿಕೆಶಿ ಸಂಪುಟ ವಿಸ್ತರಣೆಗೆ ಮುಹೂರ್ತ – ಸೋಮವಾರ ಸಂಜೆ ಪ್ರಮಾಣವಚನ ಫಿಕ್ಸ್ಎಲ್ಲೆಂದರಲ್ಲಿ ಕಸ ಸುರಿಯುವ ವಾಹನಗಳನ್ನ ಮುಲಾಜಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳಿ; ಪೊಲೀಸರಿಗೆ ಸಿಎಂ ಸೂಚನೆ