ಚುನಾವಣಾ ಹೊತ್ತಲ್ಲೇ ಶಾಕ್ – ತೆನೆ ಹಿಡಿದ ಕಾಂಗ್ರೆಸ್ ಮಾಜಿ ಶಾಸಕ ನಿಂಗಪ್ಪ!

Apr 2, 2024 - 22:13
 25
Google  News Join WhatsApp Join Telegram Live

ಚುನಾವಣಾ ಹೊತ್ತಲ್ಲೇ ಶಾಕ್ – ತೆನೆ ಹಿಡಿದ ಕಾಂಗ್ರೆಸ್ ಮಾಜಿ ಶಾಸಕ ನಿಂಗಪ್ಪ!

Panchayat Swaraj Samachar News Desk.

ಬೆಂಗಳೂರು: ಕಾಂಗ್ರೆಸ್ ಪಕ್ಷದ ತುಮಕೂರಿನ ಮಾಜಿ ಶಾಸಕ ನಿಂಗಪ್ಪ ಅವರಿಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇಲ್ಲಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷದ ಬಾವುಟ ನೀಡಿ ನಿಂಗಪ್ಪ ಅವರಿಗೆ ಸ್ವಾಗತ ಕೋರಿದರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ನಿಂಗಪ್ಪ ಅವರು ನಮ್ಮ ಹಿರಿಯ ನಾಯಕರು. ಈ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದರು. ಅವರ ನಿಷ್ಠೆಗೆ ನಮ್ಮಿಂದಲ್ಲೆ ಸ್ವಲ್ಪ ಸಮಸ್ಯೆ ಆಗಿತ್ತು. ಅವರು ಮರಳಿ ಮನೆಗೆ ವಾಪಸ್ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಪಕ್ಷ ಕಟ್ಟಿದವರು ನಿಂಗಪ್ಪ ಅವರು 2004ರಲ್ಲಿ ಶಾಸಕರಾಗಿ ಕುಣಿಗಲ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದರು. ಆ ಭಾಗದ ರೈತರ ಬದುಕಿಗೆ ಹಸಿರಿನ ಬದುಕು ಕೊಟ್ಟವರು. 2008ರ ನಂತರ ನಮ್ಮಲ್ಲಿ ಸ್ವಲ್ಪ ಗೊಂದಲದಿಂದ ಅವರಿಗೆ ನೋವಾಗಿತ್ತು. ಅವರು ಬೇರೆ ಪಕ್ಷದಲ್ಲಿ ಇದ್ದರೂ ಮನಸು ಇಲ್ಲೇ ಇತ್ತು. 2018 ರಲ್ಲಿ ಚುನಾವಣೆ ವೇಳೆಯೂ ಅವರ ಮನೆಗೆ ಹೋಗಿದ್ದೆ. ಅವರು ಯಾವತ್ತಿಗೂ ಷರತ್ತುಗಳನ್ನು ಹಾಕದೇ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು.

Google News Join Facebook Live 24/7 Help Desk

Tags: