ರಾಜಸ್ಥಾನ: ಕಾಂಗ್ರೆಸ್​ನ ಮಾಜಿ ಶಾಸಕ ವಿವೇಕ್ ಆತ್ಮಹತ್ಯೆ, ತಂದೆಯ ಸ್ಥಿತಿಯೂ ಚಿಂತಾಜನಕ

Apr 4, 2024 - 15:13
 10
Google  News Join WhatsApp Join Telegram Live

ರಾಜಸ್ಥಾನ: ಕಾಂಗ್ರೆಸ್​ನ ಮಾಜಿ ಶಾಸಕ ವಿವೇಕ್ ಆತ್ಮಹತ್ಯೆ, ತಂದೆಯ ಸ್ಥಿತಿಯೂ ಚಿಂತಾಜನಕ

Panchayat Swaraj Samachar News Desk.

ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಮಂಡಲಗಢ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ವಿವೇಕ್ ಧಾಕಡ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸುಭಾಷ್ನಗರದಲ್ಲಿರುವ ತಮ್ಮ ಮನೆಯಲ್ಲಿ ವಿವೇಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗೆಯೇ ಅವರ ತಂದೆ ಕೂಡ ವಿಷ ಸೇವಿಸಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ಸುಭಾಷ್ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ತಮ್ಮ ಮನೆಯ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೈ ನರವನ್ನು ಕತ್ತರಿಸಿಕೊಂಡಿದ್ದರು, ಕುಟುಂಬಸ್ಥರು ಕೂಡಲೇ ಅವರನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎನ್ನಲಾಗಿದೆ, ಮೃತದೇಹವನ್ನು ಶಾವಾಗಾರದಲ್ಲಿ ಇರಿಸಲಾಗಿದೆ.

2013ರಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ವಿವೇಕ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಶಕ್ತಿ ಸಿಂಗ್ ಹಡಾ ಕಣದಲ್ಲಿದ್ದರು ಆಗ ವಿವೇಕ್ ಧಾಕಡ್ ಗೆದ್ದಿದ್ದರು.

Google News Join Facebook Live 24/7 Help Desk

Tags: