ಸ್ವತಂತ್ರ ಭಾರತದ ನಂತರ ಇಲಕ್ಟ್ರಿಕಲ್ ಬಾಂಡ್ ಅತ್ಯಂತ ದೊಡ್ಡ ಹಗರಣ: ಎಸ್ ಆರ್ ಹಿರೇಮಠ

Apr 9, 2024 - 12:22
Apr 9, 2024 - 12:36
 12
Google  News Join WhatsApp Join Telegram Live

ಸ್ವತಂತ್ರ ಭಾರತದ ನಂತರ ಇಲಕ್ಟ್ರಿಕಲ್ ಬಾಂಡ್ ಅತ್ಯಂತ ದೊಡ್ಡ ಹಗರಣ: ಎಸ್ ಆರ್ ಹಿರೇಮಠ

Panchayat Swaraj Samachar News Desk.

ಬೆಳಗಾವಿ: ಕರ್ನಾಟಕ ಸಮಸ್ತ ಜನಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ದೇಶ ಉಳಿಸಿ ಸಂಕಲ್ಪ ಸಮಾವೇಶವನ್ನು ಏಪ್ರಿಲ್ 8ರಂದು ಜನಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ದೇಶ ಉಳಿಸಿ ಸಂಕಲ್ಪ ಸಮಾವೇಶವನ್ನು ಮಂಗಳವಾರದಂದು ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಹಾಗೂ ಕ್ರಾಂತಿ ಗೀತೆ "ನಾವು ಕಟ್ಟುತ್ತೇವೆ ನಾವು ಕಟ್ಟೆ ಕಟ್ಟುತ್ತೇವೆ" ಗೀತೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಆರ್ ಹಿರೇಮಠ್ ಈ ಸಮಾವೇಶದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಸಂಘಟನೆಗಳಿಂದ ಬಂದಂತ ವಿಚಾರವಂತರು, ಚಿಂತಕರು ಹಾಗೂ ಬುದ್ಧಿಜೀವಿಗಳು ಸಮಾವೇಶದಲ್ಲಿ ಉಪಸ್ಥಿತಿ ಇದ್ದರು . 

ದೇಶದಲ್ಲಿ ಈಗಿನ ಸ್ಥಿತಿಗತಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠ್ ಅವರು ಈಗ ನಮ್ಮ ದೇಶ ಯಾವ ಸ್ಥಿತಿಯಲ್ಲಿದೆ ಅಂದರೆ ಇಲ್ಲಿ ಸರ್ವಾಧಿಕಾರಿ ಧೋರಣೆ ನಡಿತಾ ಇದೆ .ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮಗಳಿಗೆ ಸ್ವಾತಂತ್ರ್ಯ ಇಲ್ಲ ತಮ್ಮ ಅಭಿವ್ಯಕ್ತಿ ವಿಷಯಗಳನ್ನು ತಿಳಿಸುವಂತಹ ವ್ಯವಸ್ತೆ ಕೂಡ ಹಂತ ಹಂತವಾಗಿ ಕಡಿತಗೊಳ್ಳುತ್ತಿದೆ ಎಂದರು.

ಸ್ವತಂತ್ರ ಕಂಡ ಅತ್ಯಂತ ದೊಡ್ಡ ಹಾಗೂ ಗಂಭೀರವಾದ ಭ್ರಷ್ಟಾಚಾರ ಅಂದ್ರೆ ಇಲೆಕ್ಟ್ರಿಕಲ್ ಬಾಂಡ್ ಇದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ ಹಣಕಾಸಿನ ಮಂತ್ರಿ ಅರುಣ್ ಜಟ್ಲಿ ಜಾರಿಗೆ ತಂದು ಆಡಳಿತರೂಢ ಪಕ್ಷಕ್ಕೆ ಚಂದ ಸಂಗ್ರಹಕೆ ಸಹಾಯಕ ರೂಪದಲ್ಲಿ ರೂಪಿಸಿದರು.

ಅದು ಈಗ ಯಾವ ರೀತಿ ಬ್ರಷ್ಟಾಚಾರ ನಡೆದಿದೆ ಎಂದರೆ ದೇಶದ ಅನೇಕ ಕಂಪನಿಗಳು ನೂರಾರು ಹಾಗೂ ಸಾವಿರಾರು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಗಳನ್ನು ಪಡೆದಿವೆ. ಅದರಲ್ಲಿ ಅಸ್ತಿತ್ವ ಇಲ್ಲದ ಕಂಪನಿಗಳು ಕೂಡ ಆಪಟ್ಟಿಯಲ್ಲಿ ಹೆಸರುಗಳು ನೊಂದಣಿ ಯಾಗಿವೆ. ಈ ಹಗರಣವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಬೈಲಿಗೆ ತಂದಿದೆ.

 ಈ ಹಗರಣದ ಇದರ ಗಾಂಭೀರ್ಯತೆಯನ್ನು ನೋಡಿದರೆ ಹಿಂದೊಂದು ಕಂಡರಿಯಲಾರದಂತ ಭ್ರಷ್ಟಾಚಾರ ಕೇಂದ್ರ ಸರ್ಕಾರ ಮಾಡಿದೆ. ದೇಶದ ತನಿಕಾ ಸಂಸ್ಥೆಗಳು ಆಡಳಿತರೂಢ ಪಕ್ಷದ ಕೈಗೊಂಬೆಯಾಗಿ ನಿಂತಿದೆ ಎಂದು ಕಟುವಾಗಿ ಟೀಕಿಸಿದರು.

ಇದೆ ವೇಳೆ ಮಾಜಿ ಸಚಿವೆ ಬಿ.ಟಿ ಲಲಿತಾ ಮಾತನಾಡಿ ದೇಶವನ್ನು ಮೂಢನಂಬಿಕೆಯತ್ತ ತೆಗೆದುಕೊಂಡು ಹೋಗುತ್ತಾ ಇದೆ. ಆಡಳಿತ ರೋಡ ಪಕ್ಷ ನಾವು ಈ ಚುನಾವಣೆಯಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ನಮ

ಗೆ ಉಳಿಗಾಲವಿಲ್ಲ ಎಂದು ಜನರನ್ನು ಎಚ್ಚರಿಸಿದರು.

ಸಮಾಜ ಚಿಂತಕ ಹಾಗೂ ಬಹುಭಾಷೆ ನಟ ಪ್ರಕಾಶ್ ರೈ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಪ್ರಭುಗಳಿಗೆ ಕರೆದು ಟೀಕಿಸುತ್ತಾ ಮಹಾಪ್ರಭುಗಳು ಅವರ ನಡೆ-ನುಡಿ ಹಾಗೂ ಅವರು ಕೈಗೊಳ್ಳುವ ಕಾರ್ಯಕ್ರಮದ ಕುರಿತು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಒಬ್ಬ ಬಹುರೂಪಿಯ ಕ್ಷಣ ಕ್ಷಣಕ್ಕೆ ಮುಖವಾಡ ಧರಿಸುವಂತಹ ವ್ಯಕ್ತಿ. ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ ಆದರೆ ಅದರ ಜೊತೆಗೆ ಅನೇಕ ದಿನನಿತ್ಯ ಬಳಸುವ ಆಹಾರ ಪದಾರ್ಥಗಳಿಂದ ಹಿಡಿದು ಎಲ್ಲಾ ಪದಾರ್ಥಗಳಿಗೆ ಇದರ ಬಿಸಿ ಮುಟ್ಟುತ್ತಾಯಿದೆ. ದೇಶಕ್ಕೆ ಒಳ್ಳೆಯ ದಿನಗಳನ್ನು ತೋರಿಸುತ್ತಿವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶವನ್ನು ಯಾವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಾ ಇದೆ ಅಂದರೆ ಸರ್ಕಾರಿ ಇರುವ ಎಲ್ಲಾ ಸಂಸ್ಥೆಗಳನ್ನು ದೊಡ್ಡ ಶ್ರೀಮಂತರಗಳಿಗೆ ನೀಡುತ್ತಾ ಇದೆ ಎಂದು ಕಟುವಾಗಿ ಟೀಕಿಸಿದರು.

 ದೇಶ ಉಳಿಸಿ ಸಂಕಲ್ಪ ಸಮಾವೇಶದಲ್ಲಿ ಪ್ರಗತಿಪರ ಹಾಗೂ ಬುದ್ಧಿಜೀವಿಗಳ ವತಿಯಿಂದ ರಾಷ್ಟ್ರಧ್ವಜವನ್ನು ಹಿಡಿದು ದೇಶ ಉಳಿಸುವುದಾಗಿ ಸಂಕಲ್ಪ ಮಾಡಿದರು ಕಾರ್ಯಕ್ರಮದಲ್ಲಿ ಕ್ರಾಂತಿ ಗೀತೆಗಳನ್ನು ಮೂಲಕ ದೇಶ ಉಳಿಸಿ ಸಂದೇಶವನ್ನು ಜನರಿಗೆ ತಲುಪಿಸಿದರು.

ನಾಡಿನ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ,ಹುಭಾಷೆ ನಟ ಹಾಗೂ ಸಾಮಾಜಿಕ ಚಿಂತಕ ಪ್ರಕಾಶ್ ರೈ , ಮಾಜಿ ಸಚಿವೆ ಲೇಖಕಿ ಬಿ ಟಿ ಲಲಿತ ನಾಯಕ, ಪ್ರಕಾಶ್ ಕಮ್ಮಾರೆಡ್ಡಿ, ಬಂಡಗಾಲ್ ಪೂರ್ ನಾಗೇಂದ್ರ, ಯೂಸುಫ್ ಕನ್ನಿ, ವರಲಕ್ಷ್ಮಿ, ತಾರಾ ರಾವ, ಶ್ರೀಪಾದ ಭಟ, ಜೆಎಂ ಜೈನೇಖಾನ, ಕ್ಲಾರಾ ಫನಾ೯ಂಡಿಸ ಸೈಯದ್ ಖಲೀಲುಲ್ಲ, ಶಿವಾಜಿ ಕಾಣೀ೯ಕರ, ರೈತ ಮುಖಂಡ ಸಿದ್ಧ ಗೌಡ ಮುದುಗಿ , ಅಖಲಾವಿ ದ್ಯಾಸಂದ್ರ, ಶಿವಲೀಲಾ ಮಿಸಾಳೆ, ಸಾಮಾಜಿಕ ಚಿಂತಕರು ಹಾಗೂ ಹೋರಾಟಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: