ದೇಶದ ಯುವ ಜನತೆ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ: ಬಿ.ಎಸ್.ಪಿ ರಾಜ್ಯ ಅಧ್ಯಕ್ಷ

Apr 30, 2024 - 20:25
 35
Google  News Join WhatsApp Join Telegram View ePaper

ದೇಶದ ಯುವ ಜನತೆ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ: ಬಿ.ಎಸ್.ಪಿ ರಾಜ್ಯ ಅಧ್ಯಕ್ಷ

Panchayat Swaraj Samachar News Desk.

ಬೆಳಗಾವಿ: ದೇಶದ ಯುವಜನತೆ ಹಿಂದಿಗಿಂತಲೂ ಹೆಚ್ಚಿನ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಾ ಇದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರವು ಆರಂಭಿಸಿದ ಖಾಸಗಿಕರಣ ಗೊಳಿಸಿದ ಬಿಜೆಪಿಯಿಂದಾಗಿ. ಸಾರ್ವಜನಿಕ ಉದ್ಯಮಗಳು ಬಂದ್ ಆಗಿರುವ ಪರಿಣಾಮವಿದು ಎಂದು ಬಹು ಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ ಅವರು ಹೇಳಿದರು.

 ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸಿ ದೇಶದ ಶಿಕ್ಷಣ ವ್ಯವಸ್ಥೆಗಳು ಬಹುಪಾಲ ಶ್ರೀಮಂತರ ಹಿಡಿತದಲ್ಲಿ ಇವೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳು ಸಹ ಖಾಸಗಿ ಸಂಸ್ಥೆಗಳ ವ್ಯಾಪಾರಿ ಕೇಂದ್ರಗಳಾಗುತ್ತಿವೆ. ಸರ್ಕಾರದ ಅನುದಾನಗಳು ಇಲ್ಲದೆ ವಿದ್ಯಾರ್ಥಿನಿಲಯಗಳು ಸೊರಗಿವೆ. ಎಸ್ಸಿ ಎಸ್ಟಿ ಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಡಿಮೆಯಾಗಿಲ್ಲ ಸಣ್ಣ ಪುಟ್ಟ ರೈತರು ತಮ್ಮ ಬೆಳೆಗಳನ್ನು ಕನಿಷ್ಠ ಬೆಲೆ ಕೋರಿ ಬೀದಿಗೆ ಹೋರಾಟ ಮಾಡುತ್ತಿದ್ದಾರೆ ಎಂದರು.

ಕಾರ್ಮಿಕರು ಬೋರ್ಡ್ ರಹಿತ ಕೂಲಿಗಾಗಿ ಅಗತ್ಯ ವಸ್ತುಗಳ ಬೆಲೆ ಗಗನ ಕೇಳುತ್ತಿರುವ ಕಾರಣ ಮೇಲಜಾತಿಯವರು ಒಳಗೊಂಡಂತೆ ಬಡವರು ಎರಡು ವೇಳೆ ಊಟಕ್ಕೆ ಪರದಾಡುತ್ತಿದ್ದಾರೆ. ಅಪೌಷ್ಟಿಕತೆಯಿಂದ ನರಳುವ ಮತ್ತು ಸಾಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯ ತನಕ ಈ ಸರ್ಕಾರಗಳು ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದರು.

ಮೇಲ್ಜಾತಿಯ ಒಡೆತನದ ಕಂಪನಿಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ದೆನಿಗೆ ಪಡೆಯುತ್ತಿದ್ದವು. ಈಗ ಅದೇನಿಗೆಗಳು ಭ್ರಷ್ಟಾಚಾರದ ಮೂಲವಾಗಿ ನಿಂತಿವೆ. ದೇಶದಲ್ಲಿ ಬೆಲೆ ಏರಿಕೆ ಒಂದು ದೊಡ್ಡ ಬಹುದೊಡ್ಡ ಸವಾಲಾಗಿ ನಿಂತಿದೆ. ಜನ ಒಂದು ಕಡೆ ಬೆಲೆ ಏರಿಕೆಯಿಂದ ತತ್ಸ್ತರಾಗಿದ್ದರೆ ಆ ಕಡೆ 18 ಪರ್ಸೆಂಟ್ ಜಿಎಸ್‌ಟಿ ತೆರೆಗೆ ವಸೂಲು ಮಾಡ್ತಾ ಇದೆ. ಈ ಎಲ್ಲಾ ಕಾರಣದಿಂದಾಗಿ ಜನ ಹರಡುತ್ತಿರುವ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ಸಕ್ಕೆ ಬೇಸತ್ತು ಹೋಗಿದ್ದಾರೆ. ಇದೆ ವೇಳೆ ಬಿ ಎಸ್ ಪಿ ರಾಜ್ಯಾಧ್ಯಕ್ಷ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ಕುರಿತು ಸರ್ಕಾರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೌನ ಏಕೆ‌ ? ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೆ ಸಮಪಾಲು ಸಮ ಬಾಳು ಸಿಗಬೇಕು ಅನ್ನುವುದೇ ಈ ಒಕ್ಕೂಟ ವ್ಯವಸ್ಥೆ ಬಂದ ನಿಯಮವಾಗಿದೆ, ಸಂವಿಧಾನಾತ್ಮಕವಾಗಿ ಬೇರೆ ರಾಜ್ಯಗಳು ಸಮಸ್ಯೆಗಳು ಬಂದರೆ ಅದಕ್ಕೆ ಪರಿಹಾರ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದವಾಗಿದೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಬರಹ ಪರಿಹಾರ ನೀಡಲು ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

 ದೇಶದ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರದ ತರಾಟೆಗೆ ತೆಗೆದುಕೊಂಡ ನಂತರ ಬರ ಪರಿಹಾರ ಬಿಡುಗಡೆ ಮಾಡಿರುವುದು ಒಂದು ಪರ್ಯಾಸವೇ ಸರಿ ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಬಿ ಎಸ್ ಪಿ ಪಕ್ಷ ಸಂತಾಪ ವ್ಯಕ್ತಪಡಿಸಿತು.

Google News Join Facebook Live 24/7 Help Desk

Tags: