LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರು ತಿಂಗಳ ಬಳಿಕ ಪತಿ ಕೊಲೆ ರಹಸ್ಯ ಬಾಯ್ಬಿಟ್ಟ ಪತ್ನಿ – ಖತರ್‌ನಾಕ್‌ ಲೇಡಿ, ಪ್ರಿಯಕರ ಅರೆಸ್ಟ್‌

Advertisement
Advertisement

ಚಿಕ್ಕೋಡಿ: ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು (Husband) ಕೊಲೆಗೈದು ಕಥೆ ಕಟ್ಟಿದ್ದ ಖತರನಾಕ್ ಪತ್ನಿ ಹಾಗೂ ಪ್ರೀಯಕರನನ್ನು 6 ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ರಾಘು ಗಾವಡೆ (40) ಹೆಂಡತಿಯಿಂದಲೇ ಕೊಲೆಯಾದ ದುರ್ದೈವಿ. ರಾಘು ಗಾವಡೆ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ. ಈತನನ್ನು ಸಂಚು ರೂಪಿಸಿ ಬಂಗಾರಿ ಗಾವಡೆ ಹಾಗೂ ರಾಮಾ ರಾಣ ಇಬ್ಬರು ಸೇರಿ ಕೊಲೆಗೈದಿದ್ದರು. ಬಳಿಕ ಹೊಲದಲ್ಲಿ ಶವವನ್ನು ಹೂತು ಹಾಕಿದ್ದರು.

ಆರೋಪಿ ರಾಘು ಗಾವಡೆ ಸಹೋದರ ಸಂಬಂಧಿಯಾಗಿದ್ದ. ಆತನ ಜೊತೆ ಆರೋಪಿ ಬಂಗಾರಿ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದರು. ಬಳಿಕ ಗಂಡ ಕುರಿ ಕಾಯಲು ಬೇರೆ ಜಿಲ್ಲೆಗೆ ಹೋಗಿದ್ದಾನೆ ಎಂದು ಮನೆಯಲ್ಲಿ ನಂಬಿಸಿದ್ದರು.

ಹತ್ಯೆಯಾದ ರಾಘುವಿನ ಅಣ್ಣ ಲಘಮಣ್ಣ ಹಾಗೂ ಹಿರಿಯರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕುಟುಂಬಸ್ಥರು ಪೋಲಿಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿಗೆ ಬರ್ತಿದ್ದ ಬಸ್‌ ಅಪಘಾತ – ಸೇತುವೆಯಿಂದ ಉರುಳಿ ಬಿದ್ದು 40 ಮಂದಿಗೆ ಗಾಯಕೊಡಗಿನ ಅಬ್ಬೆ ಫಾಲ್ಸ್‌ಗೆ ಜೀವ ಕಳೆ – ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆ ಕಂಡು ಪ್ರವಾಸಿಗರು ಖುಷ್‌ಅನಾಥ ಮಕ್ಕಳಿಗೆ ಬೆಳ್ಳಿ ವಸ್ತು ನೀಡಿ ಸೋದರ ಮಾವನಾದ ಸಮಾಜ ಸೇವಕ ಆಕಾಶ ಹಲಗೇಕರ್ಕೇಸ್‌ಗಳು ಯಾರ ಮೇಲಿಲ್ಲ? – ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಡಿಕೆಶಿ ತಿರುಗೇಟುD-Mart : डीमार्टमध्ये 99 रुपयांना मिळणारी ही वस्तू खरेदीसाठी ग्राहकांची उडते झुंबड, कितीही स्टॉक असू द्या, तासाभरात संपतोಹಾಸನದಲ್ಲಿ ರಾಜಕೀಯದಲ್ಲಿ ಬದಲಾವಣೆ ಗಾಳಿ: ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರಾ ಮಾಜಿ ಶಾಸಕ ಪ್ರೀತಂ ಗೌಡ?ಆರೈಕೆ ಮಾಡಲಾಗದೇ 50 ದಿನದ ಹಸುಗೂಸು ಕೊಂದ ನೀಚ ತಾಯಿ – ಅಪ್ಪ, ಅಮ್ಮ, ಸಹೋದರ ಸಾಥ್‌, ನಾಲ್ವರು ಅರೆಸ್ಟ್‌ಡೇಟಿಂಗ್ ಆಪ್‌ನಲ್ಲಿ ಗಾಳ ಹಾಕಿ ಖಾಸಗಿ ವಿಡಿಯೋ ಸೆರೆ – ಮಾಯಾವಿ ನಂಬಿ ಬಂದವರಿಗೆ ಕೋಟಿ ಕೋಟಿ ನಾಮ!Gen Z ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದಕ್ಕೆ ರಾಜೀನಾಮೆ: ಧರ್ಮೇಂದ್ರ ಪ್ರಧಾನ್‌ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್‌