LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Gen Z ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದಕ್ಕೆ ರಾಜೀನಾಮೆ: ಧರ್ಮೇಂದ್ರ ಪ್ರಧಾನ್‌

Advertisement
Advertisement

ಭುವನೇಶ್ವರ: ಇಂದಿನ ಯುವ ಪೀಳಿಗೆ ‘Gen Z’ ವಿದ್ಯಾರ್ಥಿಗಳನ್ನು ಕೆಲವರು ದಿಕ್ಕು ತಪ್ಪಿಸಲು ಯತ್ನಿಸಿದ ಕಾರಣಕ್ಕಾಗಿ ತಾವು ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಧರ್ಮೇಂದ್ರ ಪ್ರಧಾನ್‌  ಹೇಳಿದ್ದಾರೆ.

ನೀಟ್  ಪರೀಕ್ಷೆ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ತಮ್ಮ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ(BJP) ನಾಯಕ ಧರ್ಮೇಂದ್ರ ಪ್ರಧಾನ್‌ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.

ಒಡಿಶಾದ ಭುವನೇಶ್ವರದಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಅಧಿಕಾರ ಅಥವಾ ಸಚಿವ ಸ್ಥಾನ ಎಂದಿಗೂ ಮುಖ್ಯವಾಗಿರಲಿಲ್ಲ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ತಾವೇ ವೈಯಕ್ತಿಕವಾಗಿ ತೆರಳಿ ಕೇಂದ್ರ ಸಚಿವ ಸಂಪುಟದಿಂದ ರಾಜೀನಾಮೆ ನೀಡುವುದಾಗಿ ಪ್ರಸ್ತಾಪಿಸಿದ್ದಾಗಿ ಪ್ರಧಾನ್‌ ತಿಳಿಸಿದರು. ನನಗೆ ಸಚಿವ ಸ್ಥಾನ ಮುಖ್ಯವಾಗಿರಲಿಲ್ಲ. ಭಾರತವನ್ನು ‘ವಿಶ್ವಗುರು’ ಮಾಡುವುದೇ ನನ್ನ ಪ್ರಮುಖ ಆದ್ಯತೆ ಎಂದರು. 

Gen Z ಯುವಕರು ನಮ್ಮ ಮಕ್ಕಳಿದ್ದಂತೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು ಎರಡು ಕೋಟಿ ಮಕ್ಕಳು ಜನ್ಮತಾಳುತ್ತಾರೆ. ಕಳೆದ 10 ವರ್ಷಗಳಲ್ಲಿ 20 ಕೋಟಿ ಮಕ್ಕಳು ಹುಟ್ಟಿದ್ದಾರೆ. ಅವರಿಗೆ ಸ್ವಂತ ಆಕಾಂಕ್ಷೆಗಳಿವೆ. ಆದರೆ, ಕೆಲವರು ಈ ಯುವಕರನ್ನು ದಿಕ್ಕು ತಪ್ಪಿಸಲು ಯತ್ನಿಸಿದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೇರಾಖೋಲ್‌ನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಮಾತನಾಡಿದ ಅವರು, ಬಿಜು ಜನತಾ ದಳ (BJD) ಕಾರ್ಯಕರ್ತರು ತಮಗೆ ನಡೆಸಿದ ಪ್ರತಿಭಟನೆ ಹಾಗೂ ವಾಪಸ್ ಹೋಗಿ (Go Back) ಎಂಬ ಘೋಷಣೆಗಳಿಗೆ ತಾವು ವಿಚಲಿತರಾಗುವುದಿಲ್ಲ ಎಂದು ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರಿಗೆ ತಿರುಗೇಟು ನೀಡಿದರು.

ಜುಲೈ 25 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಸಂಘಟನೆಗಳ ತೀವ್ರ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಸಂಸತ್ತಿನಲ್ಲಿ ಸಂಬಲ್ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿಗೆ ಬರ್ತಿದ್ದ ಬಸ್‌ ಅಪಘಾತ – ಸೇತುವೆಯಿಂದ ಉರುಳಿ ಬಿದ್ದು 40 ಮಂದಿಗೆ ಗಾಯಕೊಡಗಿನ ಅಬ್ಬೆ ಫಾಲ್ಸ್‌ಗೆ ಜೀವ ಕಳೆ – ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆ ಕಂಡು ಪ್ರವಾಸಿಗರು ಖುಷ್‌ಅನಾಥ ಮಕ್ಕಳಿಗೆ ಬೆಳ್ಳಿ ವಸ್ತು ನೀಡಿ ಸೋದರ ಮಾವನಾದ ಸಮಾಜ ಸೇವಕ ಆಕಾಶ ಹಲಗೇಕರ್ಕೇಸ್‌ಗಳು ಯಾರ ಮೇಲಿಲ್ಲ? – ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಡಿಕೆಶಿ ತಿರುಗೇಟುD-Mart : डीमार्टमध्ये 99 रुपयांना मिळणारी ही वस्तू खरेदीसाठी ग्राहकांची उडते झुंबड, कितीही स्टॉक असू द्या, तासाभरात संपतोಹಾಸನದಲ್ಲಿ ರಾಜಕೀಯದಲ್ಲಿ ಬದಲಾವಣೆ ಗಾಳಿ: ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರಾ ಮಾಜಿ ಶಾಸಕ ಪ್ರೀತಂ ಗೌಡ?ಆರೈಕೆ ಮಾಡಲಾಗದೇ 50 ದಿನದ ಹಸುಗೂಸು ಕೊಂದ ನೀಚ ತಾಯಿ – ಅಪ್ಪ, ಅಮ್ಮ, ಸಹೋದರ ಸಾಥ್‌, ನಾಲ್ವರು ಅರೆಸ್ಟ್‌ಡೇಟಿಂಗ್ ಆಪ್‌ನಲ್ಲಿ ಗಾಳ ಹಾಕಿ ಖಾಸಗಿ ವಿಡಿಯೋ ಸೆರೆ – ಮಾಯಾವಿ ನಂಬಿ ಬಂದವರಿಗೆ ಕೋಟಿ ಕೋಟಿ ನಾಮ!Gen Z ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದಕ್ಕೆ ರಾಜೀನಾಮೆ: ಧರ್ಮೇಂದ್ರ ಪ್ರಧಾನ್‌ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್‌